• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಕ್ಕೆ ಯಾವ ಚಾಟಿಯಿಂದ ಬೀಸಬೇಕು? ಎಚ್ ಕೆ ಪಾಟೀಲ್ ಆಕ್ರೋಶ

|

ಬೆಂಗಳೂರು, ಜುಲೈ 4: ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

   Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

   ''ಕೊವಿಡ್ 19 ರಾಜ್ಯವನ್ನ ಸಂಪೂರ್ಣ ತಲ್ಲಣಗೊಳಿಸಿದೆ. ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲ. ರಾಜ್ಯ ಸರ್ಕಾರ ನಿರ್ಲಕ್ಷತನವನ್ನ ತೋರಿಸುತ್ತಿದೆ. ಜನರ ಸಮಸ್ಯೆಗೆ ಗಮನವನ್ನೇ ಹರಿಸುತ್ತಿಲ್ಲ. ಟೆಸ್ಟ್ ಮಾಡಿಸುವ ಬಗ್ಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ. ಸಿಎಂಗೆ ಮೂರು ಭಾರಿ ಪತ್ರ ಬರೆದಿದ್ದೇನೆ. ಆದರೆ 40 ಸಾವಿರಕ್ಕೂ ಹೆಚ್ಚು ರಿಸಲ್ಟ್ ವೇಯ್ಟಿಂಗ್ ಇದೆ. ಇದಕ್ಕೆ ನಾವು ಏನನ್ನ ಬೇಕು. ಯಾವ ಚಾಟಿಯಿಂದ ಸರ್ಕಾರಕ್ಕೆ ಬೀಸಬೇಕು ಎಂದು ಎಚ್ ಕೆ ಪಾಟೀಲ್ ಆರೋಪಿಸಿದ್ದಾರೆ.

   'ಕೋವಿಡ್-19: ಗಂಟಲು ದ್ರವ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ಶೋಕಾಸ್ ನೋಟಿಸ್

   ''ನಾವು ಟೀಕೆ, ವಿಮರ್ಶೆ ಮಾಡುವುದು ಬೇರೆ. ಬೌದ್ಧಿಕ ದಿವಾಳಿತನ ಜನರಿಗೆ ಆಘಾತವನ್ನು ಉಂಟುಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

   ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಬರಲಿದೆ

   ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಬರಲಿದೆ

   '''ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆ ಬೆಡ್ ಕೊರತೆ ಅಂತ ಹೇಳ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಅಂತಾರೆ. ನಾವು ಮೊದಲೇ ಸಾಕಷ್ಟು ಸಲಹೆಗಳನ್ನ ನೀಡಿದ್ದೆವು. ಹಾಸ್ಟಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೆವು. ಆದರೆ ಇಂದಿಗೂ ಏನೂ ಆಗಿಲ್ಲ. ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಎದುರಾಗಲಿದೆ. ಆಂಬುಲೆನ್ಸ್, ಮೆಡಿಕಲ್ ಸಿಬ್ಬಂದಿಗಳ ಕೊರೆತಯಾಗಿದೆ. ಸರ್ಕಾರ ಸ್ಪೆಷಲ್ ರಿಕ್ರ್ಯೂಟ್ ಮೆಂಟ್ ಪ್ರಾರಂಬಿಸಲಿ. ನರ್ಸ್, ವೈದ್ಯರು, ಪೌರಕಾರ್ಮಿಕರನ್ನ ತೆಗೆದುಕೊಳ್ಳಲಿ. ಅಗತ್ಯವಾದಷ್ಟು ಸಿಬ್ಬಂದಿಯನ್ನ ತುರ್ತು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

   ಇಟಲಿ ಸ್ಥಿತಿ ಬರದಂತೆ ಎಚ್ಚರ ವಹಿಸಿ

   ಇಟಲಿ ಸ್ಥಿತಿ ಬರದಂತೆ ಎಚ್ಚರ ವಹಿಸಿ

   ''ಆಂಬುಲೆನ್ಸ್ ಖರೀದಿಗೆ ಯಾವ ತೊಂದರೆಯಿದೆ. ವಾರ್ಡ್ ಗೆ ಎರಡು ಕೊಡ್ತೇವೆ ಅಂತಾರೆ, ಯಾವಾಗ. ಇಟಲಿ ಪರಿಸ್ಥಿತಿ ಬರದಂತೆ ಗಮನಹರಿಸಿ. ಅಂತ್ಯಕ್ರಿಯೆ ಮಾಡೋಕೂ ಕಷ್ಟವಾಗಲಿದೆ. ಮುತುವರ್ಜಿ ವಹಿಸಿ ಏನಾದ್ರೂ ಮಾಡಿದ್ದೀರ. ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗ್ತಾರೆ. ಪರಿಹಾರದ ಮಾತು ದೂರ, ನಾಲ್ಕು ಕಿಟ್ ಹಂಚಿದ್ರೆ ಸಾಲದು. ಪಕ್ಷದ ಕಾರ್ಯಕರ್ತರಿಗೆ ಕೊಟ್ಟು ಸಮಸ್ಯೆ ಸೃಷ್ಠಿಸಿದ್ರಿ. ಕಾರ್ಮಿಕರ ಬದುಕನ್ನ ಬೀದಿಗೆ ತಂದ್ರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಆರೋಪ ಮಾಡಿದ್ದಾರೆ.

   ಕೊರೊನಾ ವೈರಸ್‌ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ಚೀನಾ ಅಲ್ಲ ನಾವು: WHO

   ಸರ್ವ ಪಕ್ಷಗಳ ಸಭೆ ಕರೆಯಬೇಕು

   ಸರ್ವ ಪಕ್ಷಗಳ ಸಭೆ ಕರೆಯಬೇಕು

   ''ಸಿಎಂ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಬೇಕು. ಪ್ರತಿಪಕ್ಷಗಳ ಸಲಹೆಗಳನ್ನ ಪಡೆಯಬೇಕು. ಇಟಲಿ ಪರಿಸ್ಥಿತಿ ಬರುವ ಮುನ್ನ ಸಭೆ ಕರೆಯಿರಿ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಲಹೆ ನೀಡಿದೆ. ಆ ಸಲಹೆಗಳನ್ನ ಪಾಲಿಸಿ, ನಿಯಂತ್ರಿಸಿ. ಮುಂದೆ ಜನರೇ ಬಾರುಕೋಲು ಹಿಡಿದು ಬರ್ತಾರೆ ಹುಷಾರ್. ಆಹಾರ ಇಲಾಖೆ ಟೆಂಡರ್ ನಲ್ಲಿ ಅವ್ಯವಹಾರ. ಆಸ್ಪತ್ರೆಗೆ ಕಳಪೆ ಸ್ಯಾನಿಟೈಸರ್ ಸಫ್ಲೈ ಮಾಡಲಾಗಿದೆ. ಹಲವು ಆಸ್ಪತ್ರೆಗಳು ಕಳಪೆ ಅಂತ ವಾಪಸ್ ವರದಿ ನೀಡಿವೆ. ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ಬೇಡ ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

   ಸಚಿವರ ನಡುವೆ ಹೊಂದಾಣಿಕೆ ಕೊರತೆ ವಿಚಾರ

   ಸಚಿವರ ನಡುವೆ ಹೊಂದಾಣಿಕೆ ಕೊರತೆ ವಿಚಾರ

   ''ಸಚಿವರ ನಡುವೆ ಹೊಂದಾಣಿಕೆ ಕೊರತೆ ವಿಚಾರ. ಮಂತ್ರಿಗಳ ನಡುವೆ ವೈಮನಸ್ಯ ಇದ್ದರೆ ಸರಿಮಾಡಿಕೊಳ್ಳಿ. ಪ್ರತಿಪಕ್ಷ ನಾಯಕರು ಹಲವು ಎಚ್ಚರಿಕೆ ನೀಡಿದ್ದಾರೆ. ನಾವು ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ ಸರ್ಕಾರ ಇನ್ನೂ ಗಮನಹರಿಸಿಲ್ಲ. ಆಂಬುಲೆನ್ಸ್ ಮಾಡಿಕೊಳ್ಳೋಕೆ ನಿಮಗೇನಾಗಿದೆ. ರಾಜ್ಯ ಮಾನವಹಕ್ಕುಗಳ ಆಯೋಗ ಇದನ್ನ ಗಮನಿಸಬೇಕು. ನಾನೊಬ್ಬ ಸಾಮಾನ್ಯ ಮನುಷ್ಯನಾಗಿ ಮನವಿ ಮಾಡ್ತೇನೆ. ಮೊದಲು ಇದರ ಬಗ್ಗೆ ಗಮನಹರಿಸಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

   English summary
   Congress senior Leader HK patil alleged State govt has completely failed in COVID 19 Management.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more