• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ರೌಂಡ್ಸ್‌ : ಐಟಿ ಕಂಪನಿಗಳ ದೂರು ಕೇಳಿ ಬೆಚ್ಚಿಬಿದ್ದ ಸಿಎಂ

|
   ಮೊದಲ ಬಾರಿಗೆ ಬಿ. ಎಸ್. ಯಡಿಯೂರಪ್ಪ ನಗರ ಪ್ರದಕ್ಷಿಣೆ | B S Yeddyurappa | Oneindia Kannada

   ಬೆಂಗಳೂರು, ಸೆಪ್ಟೆಂಬರ್ 09 : ಸಂಚಾರ ದಟ್ಟಣೆಯಿಂದಾಗಿ ಐಟಿ-ಬಿಟಿ ಕಂಪನಿಗಳು ವಾರ್ಷಿಕ 30 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಉದ್ದಿಮೆದಾರರು ಹೇಳಿದರು.

   ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಯಡಿಯೂರಪ್ಪ ಭಾನುವಾರ ಮೊದಲ ಬಾರಿಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದರು. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮೇಯರ್ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

   ಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕ

   ಮಾರತ್‌ಹಳ್ಳಿ ಬಳಿ ಖಾಸಗಿ ಕಂಪನಿಯಲ್ಲಿ ಯಡಿಯೂರಪ್ಪ ಐಟಿ-ಬಿಟಿ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ತೀವ್ರವಾದ ಸಂಚಾರ ದಟ್ಟಣೆಯಿಂದಾಗಿ ಕಂಪನಿಗಳಿಗೆ ವಾರ್ಷಿಕ 30 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.

   ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?

   ಬಿಬಿಎಂಪಿ ಮೇಯರ್ ಗಂಗಾಬಿಕೆ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ, ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆ ನಗರ ಪ್ರದಕ್ಷಿಣೆ ಮಾಡಿದರು.

   ಬಿಬಿಎಂಪಿ ನೇಮಕಾತಿ : 4000 ಹುದ್ದೆಗಳಿಗೆ ಅರ್ಜಿ ಆಹ್ವಾನ

   ಯಡಿಯೂರಪ್ಪ ಹೇಳಿದ್ದೇನು?

   ಯಡಿಯೂರಪ್ಪ ಹೇಳಿದ್ದೇನು?

   ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ನಾನು ಸಿಎಂ ಆದ ಬಳಿಕ ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದ್ದೇನೆ. ಬೇರೆ-ಬೇರೆ ಭಾಗಗಳಲ್ಲಿ ಸಮಸ್ಯೆ ತಿಳಿದುಕೊಂಡಿದ್ದೇನೆ. 15 ದಿನಗಳಿಗೊಮ್ಮೆ‌ ಪರಿಶೀಲನೆ ಮಾಡುವೆ. ನಗರದ ಅಭಿವೃದ್ಧಿಗೆ ತಕ್ಕಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ನಮ್ಮ ಆದ್ಯತೆ, ಜನರಿಗೆ ತೊಂದರೆ ಆಗಬಾರದೆಂದು ಭಾನುವಾರ ನಗರ ವೀಕ್ಷಣೆ ‌ಮಾಡುತ್ತೇನೆ" ಎಂದರು.

   ಮೆಟ್ರೋ ಸಂಚಾರ ಆರಂಭಿಸುವ ಗುರಿ

   ಮೆಟ್ರೋ ಸಂಚಾರ ಆರಂಭಿಸುವ ಗುರಿ

   ಯಡಿಯೂರಪ್ಪ, '2021ಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಚಾರ ಮಾಡುವ ಗುರಿ ಇದೆ. ಮೆಟ್ರೋ ಕಾಮಗಾರಿಗಳ ವೇಗಕ್ಕೆ ಸೂಚಿಸಿದ್ದೇನೆ.ಸಂಚಾರ ದಟ್ಟಣೆ ಹೆಚ್ಚಾಗಿರುವ ಕಡೆಗಳಲ್ಲಿ ಪರ್ಯಾಯ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತದೆ.ವೈಟ್ ಫೀಲ್ಡ್ ಮೆಟ್ರೋ ಕಾಮಗಾರಿ ಪರಿಶೀಲನೆ ಮಾಡಲಾಗಿದ್ದು,ಈ ಭಾಗದಲ್ಲಿ ಸಂಚಾರ ದಟ್ಡಣೆ ನಿವಾರಣೆ ಕುರಿತು ಚರ್ಚಿಸಲಾಗಿದೆ. ಹೆಬ್ಬಾಳದ ಮೇಲ್ಸೇತುವೆಗೆ 5 ಲೇನ್ ಸೇರ್ಪಡೆ ಕುರಿತು ಅಧ್ಯಯನ ನಡೆಯುತ್ತಿದೆ" ಎಂದರು.

   ಕಸ ವಿಲೇವಾರಿ ಕುರಿತು ಅಧ್ಯಯನ

   ಕಸ ವಿಲೇವಾರಿ ಕುರಿತು ಅಧ್ಯಯನ

   'ನಗರದಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ‌ಕಸ ವಿಲೇವಾರಿ ನಡೆಯುತ್ತಿದೆ ಎಂದು ಅಧ್ಯಯನ ಮಾಡುತ್ತೇವೆ. ರಾಜಾಕಾಲುವೆಯನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

   ಭ್ರಷ್ಟಾಚಾರವನ್ನು ತಡೆಯುತ್ತೇವೆ

   ಭ್ರಷ್ಟಾಚಾರವನ್ನು ತಡೆಯುತ್ತೇವೆ

   "ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 200 ಕೋಟಿ ರೂ. ಬಿಡುಗಡೆಗೆ ಸೂಚಿಲಾಗಿದೆ. ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿ ಮಾಡುವುದು ನಮ್ಮ ಗುರಿ. ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ತಡೆಯಲು ಯಾವುದೇ ಮುಲಾಜು ಇಲ್ಲದೆ ಕ್ರಮವನ್ನು ಕೈಗೊಳ್ಳುತ್ತೇವೆ" ಎಂದು ಯಡಿಯೂರಪ್ಪ ಹೇಳಿದರು.

   ರಸ್ತೆ ದುರಸ್ಥಿ ಮಾಡಿಸುವಂತೆ ಮನವಿ

   ರಸ್ತೆ ದುರಸ್ಥಿ ಮಾಡಿಸುವಂತೆ ಮನವಿ

   ಕುಂದಲಹಳ್ಳಿ ಗೇಟ್ ಬಳಿ ಮುಖ್ಯಮಂತ್ರಿಗಳಿಗೆ ರಸ್ತೆ ದುರಸ್ಥಿ ಮಾಡಿಸುವಂತೆ ಮನವಿ ಮಾಡಲಾಯಿತು. ವಿಬ್ ಗಯಾರ್ ಶಾಲೆ ಸಮೀಪದ ಅಪಾರ್ಟ್‌ಮೆಂಟ್ ನಿವಾಸಿಗಳು ಹಳ್ಳಕೊಳ್ಳಗಳಿಂದ ಕೂಡಿರುವ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

   English summary
   Karnataka Chief Minister B.S.Yediyurappa 1st Bengaluru city rounds. CM check the various developmental works in city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X