ಬನಶಂಕರಿ ರಸ್ತೆಯಲ್ಲಿ ಕತ್ತರಿಸಿ ಬಿದ್ದ ಹೈ ವೋಲ್ಟೇಜ್ ತಂತಿ: ಆತಂಕ

ಬೆಂಗಳೂರು, ಏಪ್ರಿಲ್ 17: ನಗರದ ಬನಶಂಕರಿಯ ಎರಡನೇ ಹಂತದ ರಸ್ತೆಯೊಂದರಲ್ಲಿ ಹೈಓಲ್ಟೇಜ್ ವೈರ್ ಕತ್ತರಿಸಿ ಬಿದ್ದ ಪರಿಣಾಮ ಸುಮಾರು ಹೊತ್ತು ಸಾರ್ವಜನಿಕರು ಆತಂಕ ಎದುರಿಸಿದ ಘಟನೆ ಮಂಗಳವಾರ ನಡೆದಿದೆ.

ಹೈಓಲ್ಟೇಜ್ ವೈರ್ ಕತ್ತರಿಸಿ ಬಿದ್ದ ಪರಿಣಾಮ ಕಂಬದಲ್ಲಿ ಬೆಂಕಿ ತಗುಲಿದ್ದು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ. ಇದರಿಂದ ಸಾರ್ವಜನಿಕರೇ ಮುಂದಾಗಿ ನಿಂತು ವಿದ್ಯುತ್ ಕಂಬದ ಹತ್ತಿರ ಯಾರೂ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಇದರ ಪರಿಣಾಮ ಭಾರಿ ಅನಾಹುತ ತಪ್ಪಿದಂತಾಯಿತು. ಘಟನೆ ಕುರಿತಂತೆ ಸಾರ್ವಜನಿಕರು ಹಲವಾರು ಫೋಟೊ ಹಾಗೂ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

High voltage cable snapped in Banashankari

ಸುಮಾರು ಒಂದು ಗಂಟೆಯವರೆಗೂ ವಿದ್ಯುತ್ ಸಂಪರ್ಕ ಕಡಿತ ಮಾಡದ ಬೆಸ್ಕಾಂ ಸಿಬ್ಬಂದಿ ಈ ಘಟನೆ ಬಗೆಗೆ ಅರಿವೇ ಇರಲಿಲ್ಲ. ಕೊನೆಗೆ ಸಾರ್ವಜನಿಕರು ಬೆಸ್ಕಾಂಗೆ ಮಾಹಿತಿ ನೀಡಿದ ನಂತರ ಸುಮಾರು ಹೊತ್ತಿನ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.

ಈ ಘಟನೆ ಬನಶಂಕರಿ ಎರಡನೇ ಹಂತದ ಕಿಮ್ಸ್ ಆಸ್ಪತ್ರೆ ಶ್ರೀಹರಿ ಚೌಲ್ಟ್ರಿ ಬಳಿ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+