South Western Railway: ₹372.13 ಕೋಟಿ ವೆಚ್ಚದಲ್ಲಿ ಬೆಂಗಳೂರು ವಿಭಾಗದ ಈ 15 ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
"ಅಮೃತ್ ಭಾರತ್ ನಿಲ್ದಾಣದ ಯೋಜನೆ" ಅಡಿಯಲ್ಲಿ ನೈಋತ್ಯ ರೈಲ್ವೆ (SWR) ಕರ್ನಾಟಕದಲ್ಲಿ ಬೆಂಗಳೂರು ವಿಭಾಗದ 15 ರೈಲು ನಿಲ್ದಾಣಗಳ ಪುನಾಭಿವೃದ್ಧಿ ಕಾಮಗಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಫೆಬ್ರವರಿ 26) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಹಾಗಾದರೆ ಎಲ್ಲೆಲ್ಲಿ ಅಭಿವೃದ್ಧಿ ಹಾಗೂ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನೈಋತ್ಯ ರೈಲ್ವೆ ಪ್ರಕಾರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕೆಂಗೇರಿ, ಕೆ.ಆರ್.ಪುರಂ, ಕುಪ್ಪಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ತುಮಕೂರು, ರಾಮನಗರ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸುಧಾರಣೆಗಳಲ್ಲಿ ಎಸ್ಕಲೇಟರ್‌ಗಳ ಸ್ಥಾಪನೆ, ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯಗಳು, ಅತ್ಯಾಆಧುನಿಕ ಶೌಚಾಲಯಗಳು ಮತ್ತು ಇತರ ಸೌಕರ್ಯಗಳು ಸೇರಿವೆ. ಅಮೃತ್ ಭಾರತ್ ನಿಲ್ದಾಣದ ಯೋಜನೆ ಭಾಗವಾಗಿ, ಭಾರತದಾದ್ಯಂತ 554 ರೈಲು ನಿಲ್ದಾಣಗಳು ಮತ್ತು 1,585 ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳ ಪುನರಾಭಿವೃದ್ಧಿಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು ವಿಭಾಗದ ವ್ಯಾಪ್ತಿಯ 15 ನಿಲ್ದಾಣಗಳಲ್ಲಿ ಒಟ್ಟು ₹372.13 ಕೋಟಿ ಮೊತ್ತದ ಪುನರಾಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವ್ಯಾವ ನಿಲ್ದಾಣಗಳು ಎಷ್ಟು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ?
* ಬಂಗಾರಪೇಟೆ ರೈಲು ನಿಲ್ದಾಣ - 21.5 ಕೋಟಿ ರೂಪಾಯಿ
* ಚನ್ನಪಟ್ಟಣ ರೈಲು ನಿಲ್ದಾಣ - 20.9 ಕೋಟಿ ರೂಪಾಯಿ
* ಧರ್ಮಪುರಿ ರೈಲು ನಿಲ್ದಾಣ - 25.4 ಕೋಟಿ ರೂಪಾಯಿ
* ದೊಡ್ಡಬಳ್ಳಾಪುರ ರೈಲು ನಿಲ್ದಾಣ - 21.3 ಕೋಟಿ ರೂಪಾಯಿ
* ಹಿಂದೂಪುರ ರೈಲು ನಿಲ್ದಾಣ - 23.9 ಕೋಟಿ ರೂಪಾಯಿ
* ಹೊಸೂರು ರೈಲು ನಿಲ್ದಾಣ - 22.3 ಕೋಟಿ ರೂಪಾಯಿ
* ಕೆಂಗೇರಿ ರೈಲು ನಿಲ್ದಾಣ - 21 ಕೋಟಿ ರೂಪಾಯಿ
* ಕೆಆರ್ ಪುರಂ ರೈಲು ನಿಲ್ದಾಣ - 21.1 ಕೋಟಿ ರೂ.
* ಕುಪ್ಪಂ ರೈಲು ನಿಲ್ದಾಣ - 17.6 ಕೋಟಿ ರೂಪಾಯಿ
* ಮಲ್ಲೇಶ್ವರ ರೈಲು ನಿಲ್ದಾಣ - 20 ಕೋಟಿ ರೂಪಾಯಿ
* ಮಾಲೂರು ರೈಲು ನಿಲ್ದಾಣ - 20.4 ಕೋಟಿ ರೂಪಾಯಿ
* ಮಂಡ್ಯ ರೈಲು ನಿಲ್ದಾಣ - 20.1 ಕೋಟಿ ರೂಪಾಯಿ
* ರಾಮನಗರ ರೈಲು ನಿಲ್ದಾಣ - 21 ಕೋಟಿ ರೂಪಾಯಿ
* ತುಮಕೂರು ರೈಲು ನಿಲ್ದಾಣ - 24.1 ಕೋಟಿ ರೂಪಾಯಿ
* ವೈಟ್ ಫೀಲ್ಡ್ ರೈಲು ನಿಲ್ದಾಣ - 23.3 ಕೋಟಿ ರೂಪಾಯಿ












Click it and Unblock the Notifications