ಆದಾಯಕ್ಕಿಂತ ಖರ್ಚು ಹೆಚ್ಚಿದರೆ ಆರ್ಥಿಕ ಭದ್ರತೆ ಇರದು: ಸಿಎ ಪೋಸ್ಟ್ ವೈರಲ್
ಬೆಂಗಳೂರು: ಮಾಸಿಕ ಉತ್ತಮ ಗಳಿಕೆಯ ಉದ್ಯೋಗವಿದ್ದ ಮಾತ್ರಕ್ಕೆ ಬದುಕಿಗೆ ದೀರ್ಘಕಾಲದ ಆರ್ಥಿಕ ಭದ್ರತೆ ಸಿಕ್ಕುವುದಿಲ್ಲ. ತಿಂಗಳ ಕೊನೆಗೆ ಕನಿಷ್ಠ ಉಳಿತಾಯ, ಖರ್ಚು, ವೆಚ್ಚ ಕುರಿತು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಮೀನಲ್ ಗೋಯಲ್ ಅವರು ಲಿಂಕ್ಡ್‌ಇನ್‌ನಲ್ಲಿ ವಿವರಿಸಿದ್ದಾರೆ. ಅವರ ಈ ಪೋಸ್ಟ್ ನಿಂದ ಉದ್ಯೋಗಿಯ ವಾಸ್ತವ ಸ್ಥಿತಿ, ಉದ್ಯೋಗದಿಂದ ಗಳಿಕೆ, ಉಳಿಕೆ ಆರ್ಥಿಕ ಭದ್ರತೆ ಕುರಿತು ಚರ್ಚೆಗಳು ಶುರುವಾಗಿವೆ.
ತಿಂಗಳಿಗೆ ಲಕ್ಷಗಟ್ಟಲೇ ಹಣ ಗಳಿಸಿದರೆ ಅದು ಸಂಪತ್ತು ಸೃಷ್ಟಿಗೆ ಆಧಾರವಾಗುತ್ತದೆ ಎಂದಲ್ಲ. ಅವರು ಹೇಳುವ ಪ್ರಕಾರ ಮಾಸಿಕ ಸುಮಾರು 1.2 ಲಕ್ಷ ರೂ. ಆದಾಯ ಗಳಿಸುವ ಅನೇಕ ನೌಕರರಿದ್ದಾರೆ. ಅವರು ತಿಂಗಳ ಕೊನೆಗೆ ಕನಿಷ್ಠ ಉಳಿತಾಯ ಕಾಣುತ್ತಾರೆ. ಸಮಸ್ಯೆಯ ಮೂಲ ಆದಾಯದ ಮೊತ್ತದಲ್ಲಿ ಇರುವುದಿಲ್ಲ, ಬದಲಾಗಿ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ವಿಧಾನಗಳು ಹೇಗೆ ಬದಲಾಗುತ್ತವೆ ಎಂಬುದರಲ್ಲಿದೆ. ಉದ್ಯೋಗಿಗೆ ವೇತನ ಹೆಚ್ಚಾದಂತೆ, ಜೀವನಶೈಲಿಯೂ ಅಷ್ಟೇ ವೇಗವಾಗಿ ಅಥವಾ ಕೆಲವೊಮ್ಮೆ ವೇತನಕ್ಕಿಂತ ವೇಗವಾಗಿ ಜೀವನ ಶೈಲಿ ವಿಸ್ತಾರವಾಗಿಬಿಡುತ್ತದೆ. ಎಂದು ಮೀನಲ್ ಗೋಯಲ್ (Meenal Goel) ಅವರು ವಿಶ್ಲೇಷಿಸಿದ್ದಾರೆ.

ಉಳಿದರೆ 'ಉಳಿತಾಯ' ಎನ್ನುತ್ತೇವೆ
ಲಕ್ಷ ರೂ.ಗೂ ಅಧಿಕ ವೇತನ ಪಡೆಯುವ ವ್ಯಕ್ತಿ 35,000 ರೂ. ಮನೆ ಬಾಡಿಗೆ, 30,000 ಸಾಲ ಮರುಪಾವತಿ ಮತ್ತು 20,000 ರೂ.ಅಧಿಕ ವೆಚ್ಚಗಳು ತಿಂಗಳ ಬಜೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ದಿನಸಿ, ಯುಟಿಲಿಟಿ ಶುಲ್ಕಗಳು ಮತ್ತು ನಿತ್ಯದ ಅಗತ್ಯತೆಗಳಿಗಾಗಿ ಅಂದಾಜು 15,000 ದಿಂದ 20,000 ವರೆಗೆ ಖರ್ಚಾಗುತ್ತದೆ. ಆದಾತದ ಬಹುತೇಕ ಭಾಗ ಖರ್ಚಿಗೆ ಮುಡಿಪಿಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದೆಲ್ಲ ಖರ್ಚುಗಳು ಆಗಿ ಉಳಿದಿದ್ದನ್ನು 'ಉಳಿತಾಯ' ಎಂದು ಕರೆಯಲಾಗುತ್ತದೆ. ಆದರೆ ಈ ರೀತಿಯ ಉಳಿತಾಯ ದೋಷಪೂರಿತವಾಗಿದೆ ಎಂದು ಅವರು ಕರೆದಿದ್ದಾರೆ. ತಿಂಗಳ ಕೊನೆಯಲ್ಲಿ ಉಳಿದ ಅಲ್ಪಸ್ವಲ್ಪ ಹಣದಿಂದ ಸಂಪತ್ತು ಸೃಷ್ಟಿಯಾಗಲ್ಲ. ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ಆದಾಯದ ಬಹುಪಾಲು ದೈನಂದಿನ ಬದುಕಿಗೆ ಖರ್ಚಾದರೆ ಆರ್ಥಿಕ ಭದ್ರತೆ ಇರುವುದಿಲ್ಲ. ಸ್ವಲ್ಪ ಸಮಯದ ನಂತರ ಉತ್ತಮ ಸಂಬಳವೂ ಕಡಿಮೆ ಅನ್ನಿಸುತ್ತದೆ. ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ. ಅಧಿಕ ಖರ್ಚು ಜೊತೆಗೆ ಹೆಚ್ಚಿನ ಆದಾಯದ ಬೆಳವಣಿಗೆಯ ಹಾದಿ ಹಿಡಿಯುವುದು ಮುಖ್ಯವಾಗಿರುತ್ತದೆ. ಇಲ್ಲವಾದರೆ ಆರ್ಥಿಕ ಸ್ಥಿರತೆಯನ್ನು ನಿರ್ಮಿಸುವ ಬದಲು ಖರ್ಚುಗಳನ್ನು ಕೇಂದ್ರಿಕರಿಸಬೇಕಾಗುತ್ತದೆ.
ನೆಟ್ಟಿಗರಿಂದಲೂ ಬಂದ್ವು ಮಹತ್ವದ ಸಲಹೆಗಳು
ಸಿಎ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾನದಲ್ಲಿ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಖರ್ಚು ಕಡಿಮೆ ಮಾಡುವುದು ಮಾತ್ರವಲ್ಲದೇ ಆದಾಯ ಸಹ ಹೆಚ್ಚಿಸಿಕೊಳ್ಳಬೇಕೆಂದು ಕೆಲವರು ಸಲಹೆ ನೀಡಿದ್ದಾರೆ. ಆದಾಯಕ್ಕೆ ಹೆಚ್ಚು ಗಮನ ನೀಡಲಾಗಿದೆಯಾದರೂ, ಸ್ಥಿರ ಕಟ್ಟುಪಾಡುಗಳೇ ಆರ್ಥಿಕ ಫಲಿತಾಂಶಗಳನ್ನು ರೂಪಿಸುತ್ತವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಜೀವನಶೈಲಿಯ ವೆಚ್ಚಗಳು ಆದಾಯಕ್ಕಿಂತ ನಿಧಾನವಾಗಿ ಬೆಳೆದಾಗ ಮಾತ್ರ ನಿಜವಾದ ಆರ್ಥಿಕ ಸ್ವಾತಂತ್ರ್ಯ ಲಭಿಸುತ್ತದೆ ಅಂತಲೂ ತಿಳಿಸಿದ್ದಾರೆ.
ಖರ್ಚುಗಳನ್ನು ಕಡಿಮೆ ಮಾಡಲು, ಪ್ರತಿ ತಿಂಗಳು ಎಷ್ಟು ಖರ್ಚಾಗುತ್ತದೆ ಎಂದು ಟ್ರ್ಯಾಕ್ ಮಾಡಿ. ಇದರಿಂದ ಹೆಚ್ಚಿನ ಖರ್ಚನ್ನು ತಪ್ಪಿಸಬಹುದು. ತಿಂಗಳಿಗೆ ಬೇಕಾಗುವ ಅತ್ಯಗತ್ಯ ಬಜೆಟ್ ಮಾತ್ರವೇ ರೂಪಿಸಿ ಖರ್ಚು ಮಾಡಿ ಹಣ ಉಳಿಸಬಹುದಾಗಿದೆ. ಆಸೆಗಳು ಬೇಡ, ಅಗತ್ಯಗಳಿಗೆ ಮಾತ್ರವೇ ಜಾಗ ಕೊಡಿದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ಸಾಲ ಪಡೆಯುವ ಬದಲು ತುರ್ತು ನಿಧಿ ನಿರ್ಮಿಸಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಒಟ್ಟಾರೆ ಸಿಎ ಅವರ ಪೊಸ್ಟ್, ಪ್ರತಿಕ್ರಿಯೆಗಳ ಮೂಲಕ ಹಣ ಉಳಿಸಲಾಗದ ಬೆಂಗಳೂರು, ಹೈದರಾಬಾದ್, ಪುಣೆಯಂತಹ ಅನೇಕ ನಗರಗಳ ಉದ್ಯೋಗಿಗಳಿಗೆ ಒಂದಷ್ಟು ಸಲಹೆ ಸಿಕ್ಕಂತಾಗಿದೆ.












Click it and Unblock the Notifications