ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಅಳವಡಿಕೆಗೆ ಗಡುವು: HC
ಬೆಂಗಳೂರು, ಜನವರಿ 29: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ತನ್ನ ಎಲ್ಲ ಪ್ಲೀಟ್‌ಗಳ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಡಿಯೋ, ಸಾರ್ವಜನಿಕ ವಿಳಾಸ ಒದಗಿಸುವ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಿಕೊಂಡಿಲ್ಲ. ಈ ಸಂಬಂಧ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಆಡಿಯೋ ಅನೌಂನ್ಸಮೆಂಟ್, ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಮುಂದಿನ ಏಪ್ರಿಲ್ 15 ರೊಳಗೆ ತನ್ನ ಎಲ್ಲಾ ಫ್ಲೀಟ್‌ಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ ಎಂದು 'ಡಿಎಚ್' ವರದಿ ಮಾಡಿದೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಯಾಣಿಕರು ಮಾತ್ರ ನಿಗಮದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಇಲ್ಲಿನ ವ್ಯವಸ್ಥೆಯ ಅಸಮರ್ಥತೆ ಮತ್ತು ಪರಸ್ಪರ ಹೊಂದಾಣಿಕೆ ಇಲ್ಲದಿರುವುದರಿಂದ ವಿಳಾಸ ತಿಳಿಸುವ ಪ್ರದರ್ಶನಗಳು (ಅಡ್ರೆಸ್/ಬಸ್‌ನಂಬರ್ ಡಿಸ್‌ಪ್ಲೈ), ಆಡಿಯೋ ಪ್ರಕಟಣೆ ಯಾವುದು ಜಾರಿಯಾಗಿಲ್ಲ ಎಂದು ದೂರಿದರು.
ಸಮಸ್ಯೆ ಎದುರಿಸುತ್ತಿರುವ ಪ್ರಯಾಣಿಕರು
ಆಡಿಯೋ ಮತ್ತು ದೃಶ್ಯ ಪ್ರದರ್ಶನಗಳು ಇಲ್ಲದಿರುವುದು ಪ್ರಯಾಣಿಕರ ಪ್ರಾಥಮಿಕ ಸಮಸ್ಯೆಯಾಗಿದೆ. ಉಳಿದಂತೆ ಸಾರ್ವಜನಿಕ ವಿಳಾಸ ವ್ಯವಸ್ಥೆ (PA) ಸಕ್ರಿಯಗೊಳಿಸಲು BMTC ಸಿಬ್ಬಂದಿಗೆ ಇಷ್ಟವಿಲ್ಲ. ಇದರಿಂದ ಬಸ್‌ನ ಗಮ್ಯಸ್ಥಾನ ಮತ್ತು ಅದರ ಪ್ರಸ್ತುತ ನಿಲ್ದಾಣದ ನಡುವೆ ವ್ಯತ್ಯಾಸವನ್ನು ಪ್ರಯಾಣಿಕರಿಗೆ ಗುರುತಿಸಲು ಕಷ್ಟವಾಗುತ್ತಿದೆ ಎಂದರು.
ಬಸ್‌ಗಳಲ್ಲಿ ಅನೇಕ ಸಂದರ್ಭಗಳಲ್ಲಿ ಧ್ವನಿ ಪ್ರಕಟಣೆಗಳು ನಿಖರವಾಗಿಲ್ಲ. ಉದಾಹರಣೆಗೆ, ಜಯನಗರ 4ನೇ ಬ್ಲಾಕ್‌ನಿಂದ ಕೆಆರ್ ಮಾರ್ಕೆಟ್‌ಗೆ ತೆರಳುತ್ತಿದ್ದ ಬಸ್ ಮಕ್ಕಳಕೂಟ ನಿಲ್ದಾಣಕ್ಕೆ ನಿಲ್ಲಬೇಕು. ಅದಕ್ಕಾಗಿ ಧ್ವನಿ ಪ್ರಕಟಣೆ/ಘೋಷಣೆ ಮಾಡಲಿಲ್ಲ. ಬಸ್‌ನಲ್ಲಿ ನಾಲ್ಕು ಸ್ಪೀಕರ್‌ಗಳು ಇದ್ದರು ಸಹಿತ ಕೇಳಿಸದಂತಿವೆ.

ಚಾಲಕರು-ನಿರ್ವಾಹಕರು ಹೇಳೋದೇನು?
ಪ್ರಯಾಣಿಕರು ಕೇಳುವಂತೆ ಧ್ವನಿ ಘೋಷಣೆಗಳು ಮೊಳಗುತ್ತಿಲ್ಲ. ಪಿಎ ಸಿಸ್ಟಮ್‌ಗಳನ್ನು ಸಕ್ರಿಯಗೊಳಿಸುವುದು, ಅದರ ಅಗತ್ಯಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವ್ಯವಸ್ಥೆಗಳನ್ನು ಮೊದಲ ಬಾರಿಗೆ ಅಳವಡಿಸಿದಾಗ ಬಿಎಂಟಿಸಿ ಪ್ರಯಾಣಿಕರಿಗೆ ಇವೆಲ್ಲವು ಒಳ್ಳೆಯದು ಸಹಕಾರಿಯಾಗಿದ್ದು, ಆದರೆ ನಿತ್ಯ ಓಡಾಡುವ ಸಾಮಾನ್ಯ ಪ್ರಯಾಣಿಕರಿಗೆ ಇದು ಅನಗತ್ಯ. ಬಸ್‌ನಲ್ಲಿ ದೃಷ್ಠಿ ಇಲ್ಲದ ವ್ಯಕ್ತಿಗಳು ಏಕಾಂಗಿಯಾಗಿ ಪ್ರಯಾಣಿಸುವುದಿಲ್ಲ ಎಂದು ಅವರು ಹೇಳಿದರು.
ಇವುಗಳು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಎಚ್ಚರದಿಂದಿರಲು ಸಹಾಯ ಮಾಡುತ್ತವೆ ಎಂದು ಪ್ರಯಾಣಿಕರು ಭಾವಿಸಿದ್ದಾರೆ. ಮೆಟ್ರೋಗಿಂತ ಭಿನ್ನವಾಗಿ, ರೈಲು ನಿಗದಿತ ವೇಳಾಪಟ್ಟಿ ಅನುಸರಿಸುತ್ತದೆ. ಪದೇ ಪದೆ ಘೋಷಣೆ ಮೊಳಗಿಸುತ್ತಿರುತ್ತದೆ. ಅದೇ ರೀತಿ ಬಸ್‌ಗಳ ಸಂಚಾರ ನ್ಯಾವಿಗೇಟ್ ಮಾಡಬೇಕು. ಆದ್ದರಿಂದ ಸುಧಾರಿತ PA ವ್ಯವಸ್ಥೆ ಹೊಂದುವುದು ಪ್ರಯೋಜನಕಾರಿ ಆಗಿದೆ. ಆದರೆ ಅದು ಸರಿಯಾಗಿ ಮತ್ತು ಮನಬಂದಂತೆ ಕಾರ್ಯ ನಿರ್ವಹಿಸಬೇಕು ಐಟಿ ಉದ್ಯೋಗಿಯೊಬ್ಬರು ಅಭಿಪ್ರಾಯ ಹಂಚಿಕೊಂಡರು.
ದೃಶ್ಯ ಪ್ರದರ್ಶನಕ್ಕೂ, ಆಡಿಯೋ ಸಿಂಕ್ರೋನೈಸ್ ಆಗಿಲ್ಲ
ಬಿಎಂಟಿಸಿ ತನ್ನೆಲ್ಲ ಫ್ಲೀಟ್‌ಗಳಲ್ಲಿ ಆಡಿಯೊ ಪ್ರಕಟಣೆಗಳನ್ನು ಅಳವಡಿಸಲು ಹೈಕೋರ್ಟ್ ನಿರ್ದೇಶನ ನೀಡಿದ ತಕ್ಷಣ ಘೋಷಣೆ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಆದರೆ ಇದರ ಜಾರಿ ಸವಾಲಾಗಿದೆ. ಬಸ್‌ಗಳಲ್ಲಿ ಡಿಸ್‌ಪ್ಲೈ (ಪರದೆ) ಮುಂದಿನ ನಿಲ್ದಾಣ ತೋರಿಸುತ್ತದೆ. ಆದರೆ ಆಡಿಯೋ ಅದಕ್ಕೆ ಸಿಂಕ್ರೋನೈಸ್ ಆಗಿಲ್ಲ. ಕೆಲವು ಸಮಯಗಳಲ್ಲಿ, ಯಾವುದೇ ಆಡಿಯೊ ಇಲ್ಲದೆ ಸ್ಕ್ರೋಲಿಂಗ್ ಪ್ರದರ್ಶನ ಮಾತ್ರ ಇರುತ್ತದೆ. ಈ ಬಗ್ಗೆ ನಾವು ಸ್ಥಿರತೆ ಖಚಿತಪಡಿಸಿಕೊಳ್ಳುತ್ತೇವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?











Click it and Unblock the Notifications