Water Crisis: ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರವಾಗುತ್ತಾ ಹೆಸರುಘಟ್ಟ ಕೆರೆ!?
ಬೆಂಗಳೂರು, ಏಪ್ರಿಲ್. 11: ರಾಜ್ಯ ರಾಜಧಾನಿ ಬೆಂಗಳೂರಿನ ನೀರಿನ ಬಿಕ್ಕಟ್ಟಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಹೊಸ ಯೋಜನೆಯೊಂದನ್ನು ರೂಪಿಸಿದೆ. ನಗರದ ಹೊರವಲಯದಲ್ಲಿರುವ ಹೆಸರಘಟ್ಟ ಕೆರೆಯಿಂದ ನೀರಿನ ಅವಶ್ಯಕತೆಗಳನ್ನು ಪೂರೈಸಲು ನೀರನ್ನು ಹೊರತೆಗೆಯಲು ಯೋಜಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಹರಸರಘಟ್ಟ್ ಕೆರೆಯಿಂದ ನೀರು ಪಂಪ್ ಮಾಡುವ ಯೋಜನೆ ಪ್ರಾರಂಭಿಸಬೇಕೆ ಬೇಡವೇ ಎಂಬುದು ಮೇ ತಿಂಗಳಲ್ಲಿನ ನೀರಿನ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಇತ್ತೀಚೆಗೆ ಹೆಸರಘಟ್ಟ ಕೆರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.

ಹೆಸರಘಟ್ಟ ಕೆರೆಯನ್ನು ಬುಧವಾರ ಪರಿಶೀಲಿಸಿದ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ, ಜಲಾನಯನದಲ್ಲಿ 0.3 ಟಿಎಂಸಿ ಅಡಿ ನೀರಿದ್ದು, ಸುತ್ತಮುತ್ತಲಿನ ಅಂತರ್ಜಲ ಮಟ್ಟವೂ ಆರೋಗ್ಯಕರವಾಗಿದೆ. 10 MLD ನೀರನ್ನು ಪಂಪ್ ಮಾಡಲು ಸಂಪನ್ಮೂಲ ಸಾಕಾಗುತ್ತದೆ. ಹೆಸರಘಟ್ಟದಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಪಂಪಿಂಗ್ ಸ್ಟೇಷನ್ ಕೂಡ ಇದೆ, ಇದನ್ನು ನೀರನ್ನು ಪಂಪ್ ಮಾಡಲು ಬಳಸಬಹುದು ಎಂದು ಮಾಹಿತಿ ನೀಡಿದ್ದಾರೆ.
"ಇಲ್ಲಿಂದ ನೀರು ಪಂಪ್ ಮಾಡಬಹುದು. ಹೆಸರಘಟ್ಟ ಪಂಪಿಂಗ್ ಸ್ಟೇಷನ್‌ಗೆ ಸಂಪರ್ಕವಿರುವ ಪ್ರದೇಶಗಳಿಗೆ ಪಂಪಿಂಗ್ ನೆಟ್‌ವರ್ಕ್ ಮೂಲಕ ಪೂರೈಕೆ ಮಾಡಲು ಸಾಧ್ಯವಿದೆ. ಇತರ ಸ್ಥಳಗಳಿಗೆ ಮತ್ತು ನೀರಿನ ಟ್ಯಾಂಕರ್‌ಗಳ ಮೂಲಕವೂ ಸರಬರಾಜು ನೀರು ಸರಬರಾಜು ಮಾಡಲಾಗುವುದು" ಎಂದು ಹೇಳಿದ್ದಾರೆ.

ಹೆಸರಘಟ್ಟ ಕೆರೆಯಿಂದ ನೀರು ಪಂಪ್ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದರೂ, ಮೇ ತಿಂಗಳಿನಲ್ಲಿ ಕೊರತೆಯಾದರೆ ಮಾತ್ರ ನೀರು ಹರಿಸಲಾಗುವುದು ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿಯೂ ಬೆಂಗಳೂರಿನಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಅರ್ಕಾವತಿ ಮತ್ತು ವೃಷಭಾವತಿ ಪುನಶ್ಚೇತನದ ಅಗತ್ಯ
ನಗರದಲ್ಲಿ ನೀರಿನ ಬಿಕ್ಕಟ್ಟು ಮುಂದೆ ಬರದಂತೆ ತಡೆಯಲು ಬೆಂಗಳೂರಿನಲ್ಲಿರುವ ಜಲಮೂಲಗಳ ಪುನಶ್ಚೇತನಕ್ಕೆ 'RRR' ಜನಾಂದೋಲನ ನಡೆಸಲು ಜಲಮಂಡಳಿ ಸಜ್ಜಾಗಿದೆ. ಅರ್ಕಾವತಿ ಮತ್ತು ವೃಷಭಾವತಿ ನದಿ ಪಾತ್ರಗಳಲ್ಲಿ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಮತ್ತು ಉತ್ತಮ ನೀರಿನ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಪುನರುಜ್ಜೀವನಗೊಳಿಸಬೇಕು ಎಂದು ರಾಮಪ್ರಸಾತ್ ಮನೋಹರ್ ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಟ್ರಿಪಲ್ ಆರ್' ಯೋಜನೆಯು ಜುಲೈ 2026 ರ ವೇಳೆಗೆ ಬೆಂಗಳೂರಿನ ನೀರನ್ನು ಹೆಚ್ಚುವರಿ ಮಾಡುವ ಗುರಿಯನ್ನು ಹೊಂದಿದೆ. ಅರ್ಕಾವತಿ ಮತ್ತು ವೃಷಭಾವತಿಯನ್ನು ಪುನರುಜ್ಜೀವನಗೊಳಿಸುವುದು, ಮಳೆನೀರಿನಿಂದ ಅಂತರ್ಜಲ ಮರುಪೂರಣಗೊಳಿಸುವುದು ಮತ್ತು ನಗರದ 185 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಮೂರು ಅಂಶಗಳನ್ನು ಈ ಅಭಿಯಾನ ಹೊಂದಿದೆ.












Click it and Unblock the Notifications