ಅಂಗವಿಕಲರಿಗೆ ಉದ್ಯೋಗ ನೀಡಲು ಮುಂದಾದ ಹೆಲೊ

ಬೆಂಗಳೂರು, ಮಾರ್ಚ್ 03: ಹೆಲೊ, ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು, ಇಂದು ಕರ್ನಾಟಕದಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡಲು ವೀ ಆರ್ ಯುವರ್ ವಾಯ್ಸ್ ಜೊತೆಗೆ ಪಾಲುದಾರಿಕೆ ಹೊಂದಿತು.

ಹೆಲೊದ ಈ ಪಾಲುದಾರಿಕೆಯಡಿ ಹೆಲೊ ಕೇರ್ ಹೆಸರಿನಲ್ಲಿ ಸಮುದಾಯ ಸೇವೆ ಹೊಣೆಗಾರಿಕೆ ನಿಭಾಯಿಸಲು ಹೊಸದಾಗಿ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸೃಷ್ಟಿಸಲಾಗುತ್ತಿದೆ. ಈ ವೇದಿಕೆಯಡಿ ವಿಶಾಲ ಸಮುದಾಯಕ್ಕೆ ಒಟ್ಟಾರೆ 14 ಭಾರತೀಯ ಭಾಷೆಗಳಲ್ಲಿ ಮಾಹಿತಿಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ಹೆಲೊ ಕೇರ್ ಪ್ರತಿಯೊಬ್ಬರಿಗೂ ಅವಕಾಶ ನೀಡುವ ಮೂಲಕ ಜನಪ್ರಿಯ ವ್ಯಕ್ತಿಗಳು, ನಿರ್ಣಾಯಕರು, ಸೃಜನಶೀಲರು ಹೀಗೆ ಪರಸ್ಪರ ನಡುವೆ ಸಂಪರ್ಕವನ್ನು ಒದಗಿಸಲು ಬಯಸಲಿದೆ.

Helo with We Are Your Voice to Provide Job Opportunities for Differently-Abled

ವೀ ಆರ್ ಯುವರ್ ವಾಯ್ಸ್ ಜೊತೆಗಿನ ಪಾಲುದಾರಿಕೆಯಡಿ ಇತರೆ ಸಿಎಸ್‍ಆರ್ ಕಾರ್ಯಚಟುವಟಿಕೆಗಳು ಆ್ಯಪ್‍ನಲ್ಲಿ ಹೆಲೊ ಕೇರ್ ಪುಟದಲ್ಲಿ ಕಾಣಿಸಿಕೊಳ್ಳಲಿವೆ. ಇದು, ಸಕಾರಾತ್ಮಕ ಮಾಹಿತಿಗಳನ್ನು ಒಳಗೊಳ್ಳಲಿದ್ದು, # ಹ್ಯಾಶ್‍ಟ್ಯಾಗ್ ಮೂಲಕ ಇದನ್ನು ಗುರುತಿಸಬಹುದು. ಪ್ರಾದೇಶಿಕವಾದ ಸಾಮಾಜಿಕ ಮಾಧ್ಯಮ ಜಾಲತಾಣವು ಹೆಚ್ಚಿನ ಜನರಿಗೆ ತಲುಪಲಿದೆ ಎಂಬ ಹಿನ್ನೆಲೆಯಲ್ಲಿ ಹೆಲೊ, ಈಗ ಹೆಲೊ ಕೇರ್ ವೇದಿಕೆಯಲಿ ವಿಸ್ತೃತ್ ಮಾಹಿತಿ ಒದಗಿಸುತ್ತಿದೆ. ಪರಿಸರ, ಆರೋಗ್ಯ, ಕಲೆ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳಿಗೆ ಇದು ಅನ್ವಯಿಸಲಿವೆ.

ವಿ ಆರ್ ಯುವರ್ ವಾಯ್ಸ್ ಒಂದು ಎನ್‍ಜಿಒ ಆಗಿದ್ದು, ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಅಂಗವಿಕರಲ ಕಲ್ಯಾಣ ಇಲಾಖೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಜೊತೆಗೂಡಿ ವೀ ಆರ್ ಯುವರ್ ವಾಯ್ಸ್ ಇತ್ತೀಚೆಗೆ ಉದ್ಯೋಗ ಮೇಳವನ್ನು ಆಯೋಜಿಸಲಿದೆ. ಬೆಂಗಳೂರಿನ ಕೋರಮಂಗಲದ ಮಡಿವಾಳ ಮಾರ್ಕೆಟ್‍ನ ಕೆಎಸ್‍ಆರ್ ಪಿ ಮೈದಾನದಲ್ಲಿ ಆಯೋಜಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+