ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊಸೂರಿಗೆ ಹೆಲಿಕಾಪ್ಟರ್ ಸೇವೆ, ದರವೆಷ್ಟು?

|
Google Oneindia Kannada News

ಬೆಂಗಳೂರು, ಜನವರಿ 12: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸೂರು ಏರೋಡ್ರೋಮ್‌ಗೆ ಇಂಟ್ರಾ-ಸಿಟಿ ಹೆಲಿಕಾಪ್ಟರ್ ಸೇವೆಗಳನ್ನು ಆರಂಭಿಸಿಲಾಗಿದೆ.

ಫ್ಲೈಬ್ಲೇಡ್ ಇಂಡಿಯಾ ಎಂಬುದು ಹಂಚ್ ವೆಂಚರ್ಸ್ ಮತ್ತು ಬ್ಲೇಡ್ ಏರ್ ಮೊಬಿಲಿಟಿ ಇಂಕ್ ನಡುವಿನ ಜಂಟಿ ಉದ್ಯಮವಾಗಿದ್ದು, ಈ ಕಂಪೆನಿಯು ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ವಿಸ್ತರಣೆ ಯೋಜನೆಯ ಭಾಗವಾಗಿ ಈ ನಗರಗಳನ್ನು ಸಂಪರ್ಕಿಸುತ್ತದೆ. ಈ ಹೆಲಿಕಾಪ್ಟರ್‌ ಸೇವೆಯು ಪ್ರತಿ ವ್ಯಕ್ತಿಗೆ 6000 ರೂಪಾಯಿ ಆಗಿರಲಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಸೇವೆಯು ಬೆಳಿಗ್ಗೆ ಗಂಟೆಗೆ ಪ್ರಾರಂಭವಾಗುತ್ತದೆ. ಇದೇ ಹೆಲಿಕಾಪ್ಟರ್‌ಗಳು ಸಂಜೆಗೆ ಹಿಂದಿರುಗುತ್ತದೆ. ಉತ್ತರ ಮತ್ತು ದಕ್ಷಿಣ ಬೆಂಗಳೂರಿನ ನಡುವಿನ ಪ್ರಯಾಣವನ್ನು ಸರಳಗೊಳಿಸುವ ಸಲುವಾಗಿ ಬ್ಲೇಡ್ ಇಂಡಿಯಾ ಈ ಮಾರ್ಗವನ್ನು ಪ್ರಾರಂಭಿಸಿದೆ ಎಂದು ಅರ್ಬನ್ ಏರ್ ಮೊಬಿಲಿಟಿ ಬ್ರ್ಯಾಂಡ್ ಹೇಳಿದೆ.

ಹೊಸೂರು ಹೆಲಿಪ್ಯಾಡ್‌ ನಿಲ್ದಾಣಕ್ಕೆ ಸಾಮಾನ್ಯವಾಗಿ ಪ್ರಯಾಣಿಕರಿಗೆ ರಸ್ತೆಯಲ್ಲಿ 3 ಗಂಟೆಗಳವರೆಗೆ ತಗಲುತ್ತದೆ. ಆದರೆ ಈ ಹೆಲಿಪ್ಯಾಡ್‌ 20 ನಿಮಿಷಗಳಲ್ಲಿ ಪ್ರಯಾಣ ಮಗಿಯುತ್ತದೆ. ಈ ಮಾರ್ಗವು ಜನವರಿ 11ರಿಂದಲೇ ಪ್ರಾರಂಭಗೊಂಡಿದೆ. ಬ್ಲೇಡ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗೆ ಮುಕ್ತವಾಗಿದೆ. ಪ್ರತಿ ವ್ಯಕ್ತಿಗೆ ರೂ 6000 ಆರಂಭಿಕ ವೆಚ್ಚದಲ್ಲಿ ವಿಮಾನ ಟಿಕೆಟ್‌ ಬುಕ್ಕಿಂಗ್‌ನಂತೆ ಈ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಬಹುದು.

ಬ್ಲೇಡ್ ತನ್ನ ದೈನಂದಿನ ವಿಮಾನಗಳನ್ನು ವಿಮಾನ ನಿಲ್ದಾಣದ ಬಳಿಯಿರುವ ಬ್ಲೇಡ್ ಹೆಲಿಪ್ಯಾಡ್ ನಡುವೆ ಸಿಟಿ ಸೆಂಟರ್‌ಗೆ ದಿನಕ್ಕೆ ಮೂರು ವಿಮಾನಗಳನ್ನು ಬೆಳಿಗ್ಗೆ 8:45 ರಿಂದ 10:30 ರವರೆಗೆ ಹೆಚ್ಚಿಸಿದೆ ಮತ್ತು ಮಧ್ಯಾಹ್ನ 3:45 ರಿಂದ ಸಂಜೆ 5 ರವರೆಗೆ ಹಿಂದಿರುಗುವ ಪ್ರಯಾಣವನ್ನು ಮಾಡಿದೆ. ಮುಂಬರುವ ತಿಂಗಳುಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ಪೈಪ್‌ಲೈನ್‌ನಲ್ಲಿ ನಗರದೊಳಗೆ ಹೆಚ್ಚಿನ ಲ್ಯಾಂಡಿಂಗ್ ಪಾಯಿಂಟ್‌ಗಳನ್ನು ಸೇರಿಸಲಾಗುವುದು ಎಂದು ಕಂಪೆನಿ ಹೇಳಿದೆ.

ಸಣ್ಣ ವ್ಯಾಪಾರ ಪ್ರವಾಸ

ಸಣ್ಣ ವ್ಯಾಪಾರ ಪ್ರವಾಸ

ಹೊಸೂರು ಏರೋಡ್ರೋಮ್‌ನ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಬ್ಲೇಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ, "ಹೊಸೂರು ಐಟಿ ಮತ್ತು ಉತ್ಪಾದನಾ ಕಂಪನಿಗಳು ಮತ್ತು ಎಂಎನ್‌ಸಿಗಳ ದಟ್ಟಣೆಯ ನಗರವಾಗಿದೆ. ಅನೇಕ ಕಾರ್ಪೊರೇಟ್ ಪ್ರಯಾಣಿಕರು ಮತ್ತು ಸ್ಥಳೀಯರು ಕೆಲಸಕ್ಕಾಗಿ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಪ್ರಯಾಣಿಸಬೇಕಾಗಿರುವುದರಿಂದ ಸಣ್ಣ ವ್ಯಾಪಾರ ಪ್ರವಾಸದಲ್ಲಿ 3 ಗಂಟೆಗಳವರೆಗೆ ರಸ್ತೆಯಲ್ಲಿ ಕಳೆಯುವುದು ಅನಾನುಕೂಲ ಮತ್ತು ಅನುತ್ಪಾದಕವಾಗಿದೆ. ಹಾಗಾಗಿ ನಾವು ಈ ಸೇವೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಕಾರ್ಪೊರೇಟ್ ಪ್ರಯಾಣಿಕರಿಗೆ ಅನುಕೂಲ

ಕಾರ್ಪೊರೇಟ್ ಪ್ರಯಾಣಿಕರಿಗೆ ಅನುಕೂಲ

ರಸ್ತೆಯಲ್ಲಿ ಸುಮಾರು 3 ಗಂಟೆಗಳ ಕಾಲ ಕಾರಿನಲ್ಲಿ ಸಮಯ ಹೋಗುವುದರಿಂದ 20 ನಿಮಿಷಗಳಲ್ಲಿ ತ್ವರಿತವಾಗಿ ಹೆಲಿಕಾಪ್ಟರ್‌ನಿಂದ ಈಗ ಹೊಸೂರು ತಲುಪಬಹುದಾಗಿದೆ. ಹಾಗಾಗಿ ಕಾರ್ಪೊರೇಟ್ ಪ್ರಯಾಣಿಕರು ವೆಚ್ಚಕ್ಕಿಂತ ದಕ್ಷತೆಯನ್ನು ಆರಿಸಿಕೊಳ್ಳುತ್ತಾರೆ. ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನ ವಿವಿಧ ಲ್ಯಾಂಡಿಂಗ್ ಪಾಯಿಂಟ್‌ಗಳೊಂದಿಗೆ ಆಕಾಶದ ಮೂಲಕ ಉತ್ತಮ ಸಂಪರ್ಕವನ್ನು ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್

ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್

ಈವ್ ಕಂಪೆನಿ ಜೊತೆಗಿನ ಸಹಭಾಗಿತ್ವದ ಅಡಿಯಲ್ಲಿ ಈ ವರ್ಷದ ಆರಂಭದಲ್ಲಿ ಬ್ಲೇಡ್ ಇಂಡಿಯಾ ಸಹಿ ಹಾಕಿದೆ. ಭಾರತವು 2026ರ ವೇಳೆಗೆ 200 eVTOL ಗಳನ್ನು ಪಡೆಯುತ್ತದೆ. ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಏರ್‌ಕ್ರಾಫ್ಟ್‌ಗಳು ಶಬ್ದ ಮತ್ತು ಪರಿಸರದ ಮೇಲಿನ ಹಾನಿಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತದೆ. ಅಕ್ಟೋಬರ್ 2022ರಲ್ಲಿ ಬೆಂಗಳೂರು ಉಡಾವಣೆಯು ಅರ್ಬನ್ ಏರ್ ಮೊಬಿಲಿಟಿಗಾಗಿ ಪೈಲಟ್ ಯೋಜನೆಯಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಮತ್ತು ಗೋವಾಗೆ ವಿಸ್ತರಣೆ

ಕರ್ನಾಟಕ ಮತ್ತು ಗೋವಾಗೆ ವಿಸ್ತರಣೆ

ಬ್ಲೇಡ್ ಇಂಡಿಯಾ ನವೆಂಬರ್ 2019ರಲ್ಲಿ ಮುಂಬೈ, ಪುಣೆ ಮತ್ತು ಶಿರಡಿ ನಡುವೆ ಮಹಾರಾಷ್ಟ್ರದಲ್ಲಿ ತನ್ನ ಮೊದಲ ವಿಮಾನಗಳನ್ನು ಪ್ರಾರಂಭ ಮಾಡಿತು. ಅಂದಿನಿಂದ ಬ್ಲೇಡ್‌ ತನ್ನ ನಿಗದಿತ ಆಸನದ ಹೆಲಿಕಾಪ್ಟರ್ ವಿಮಾನಗಳನ್ನು ಕರ್ನಾಟಕಕ್ಕೆ (ಕೂರ್ಗ್, ಹಂಪಿ ಮತ್ತು ಕಬಿನಿ) ಮತ್ತು ಗೋವಾಕ್ಕೆ ವಿಸ್ತರಿಸಿದೆ. ಅದರ ಬೆಡ್-ಟು-ಬೆಡ್ ಏರ್ ಮೆಡೆವಾಕ್ ಸೇವೆ ಬ್ಲೇಡ್ ಕೇರ್ ಮತ್ತು ಅದರ ಚಾರ್ಟರ್ ಸೇವೆ ಬ್ಲೇಡ್ ಎನಿವೇರ್ ಅನ್ನು ಪ್ರಾರಂಭಿಸಿತು.

English summary
Intra-city helicopter services have been started from bengaluru's Kempegowda International Airport to Hosur Aerodrome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X