Get Updates
Get notified of breaking news, exclusive insights, and must-see stories!

ಕೆಐಎನಿಂದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ಗೆ ಸಂಚಾರ ಸುಲಭ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ಗೆ ಸಂಚಾರ ನಡೆಸುವುದು ಈಗ ಮತ್ತಷ್ಟು ಸುಲಭವಾಗಿದೆ.

ಬೆಂಗಳೂರು, ಫೆಬ್ರವರಿ 05; ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ಗೆ ಸಂಚಾರ ನಡೆಸುವುದು ಈಗ ಮತ್ತಷ್ಟು ಸರಳವಾಗಿದೆ. ಕೆಲವೇ ನಿಮಿಷಗಳಲ್ಲಿ ನೀವು ಐಟಿ ಹಬ್ ತಲುಪಬಹುದಾಗಿದೆ.

ವಿವಿಧ ಪ್ರದೇಶಗಳಿಗೆ ಹೆಲಿಕಾಪ್ಟರ್ ಸೇವೆ ನೀಡುವ ಬ್ಲೇಡ್‌ ಕರ್ನಾಟಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದದಿಂದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ಗೆ ಶೀಘ್ರದಲ್ಲೇ ಹೆಲಿಪಾಕ್ಟರ್ ಸೇವೆ ನೀಡಲಿದೆ.

ಬೆಂಗಳೂರು ನಗರದ ಐಟಿ ಹಬ್ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌. ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರು ಈ ಪ್ರದೇಶಕ್ಕೆ ಹೋಗಲು ತಾಸುಗಟ್ಟಲೇ ಸಂಚಾರ ನಡೆಸಬೇಕಾಗಿಲ್ಲ. ಹೆಲಿಕಾಪ್ಟರ್ ಮೂಲಕ ಸುಲಭವಾಗಿ ಸಂಚಾರ ನಡೆಸಬಹುದಾಗಿದೆ.

Helicopter Service Soon Fly Bengaluru Airport To Whitefield And Electronic City Within Minutes

2023ರ ಜನವರಿಯಲ್ಲಿ ಕೆಐಎನಿಂದ 2 ಮಾರ್ಗದಲ್ಲಿ ಬ್ಲೇಡ್ ಸಂಸ್ಥೆ ಈಗಾಗಲೇ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ. ವಿಮಾನ ನಿಲ್ದಾಣದಿಂದ ಹೊಸೂರು ಏರ್‌ಡ್ರೋಮ್‌ಗೆ ಈಗಾಗಲೇ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದ ತಮಿಳುನಾಡಿನ ಕೈಗಾರಿಕಾ ಹಬ್ ಹೊಸೂರು ತಲುಪಲು ರಸ್ತೆ ಮೂಲಕ ಸಾಗಿದರೆ 3 ಗಂಟೆಗಳು ಬೇಕು. ಪ್ರತಿ ಸೀಟಿಗೆ 6 ಸಾವಿರ ರೂ ನೀಡಿದರೆ 20 ನಿಮಿಷದಲ್ಲಿ ಹೆಲಿಕಾಪ್ಟರ್ ಮೂಲಕ ಸಾಗಬಹುದಾಗಿದೆ.

ಬ್ಲೇಡ್ ಕರ್ನಾಟಕ ಈಗಾಗಲೇ ಬೆಂಗಳೂರು-ಮೈಸೂರು, ಬೆಂಗಳೂರು-ಹಂಪಿಗೆ ಹೆಲಿಕಾಪ್ಟರ್ ಸೇವೆ ನೀಡುತ್ತಿದೆ. ಈಗ ವಿಮಾನ ನಿಲ್ದಾಣದಿಂದ ನಗರದ ಐಟಿ ಕಂಪನಿಗಳು ಹೆಚ್ಚಿರುವ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ಗೆ ಸಂಪರ್ಕ ನೀಡಲಿದೆ.

Helicopter Service Soon Fly Bengaluru Airport To Whitefield And Electronic City Within Minutes

ಕಳೆದ ವರ್ಷ ಬ್ಲೇಡ್‌ ಕರ್ನಾಟಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ಹೃದಯ ಭಾಗದ ಹೆಚ್‌ಎಎಲ್‌ಗೆ ಹೆಲಿಕಾಪ್ಟರ್ ಸೇವೆ ಆರಂಭಿಸಿತ್ತು. ವಾರದಲ್ಲಿ 5 ದಿನ ಈ ಸೇವೆ ಲಭ್ಯವಿದೆ. ವಿಮಾನ ನಿಲ್ದಾಣದಿಂದ 15 ನಿಮಿಷದಲ್ಲಿ ಹೆಚ್‌ಎಎಲ್ ತಲುಪಬಹುದಾಗಿದೆ. ರಸ್ತೆ ಮಾರ್ಗದಲ್ಲಿ ಸಂಚಾರ ನಡೆಸಿದರೆ ಸುಮಾರು 2 ಗಂಟೆಗಳು ಬೇಕು.

ಈ ಮಾರ್ಗದಲ್ಲಿ ಬ್ಲೇಡ್ 5 ಸೀಟಿನ ಎರಡು ಹೆಲಿಕಾಪ್ಟರ್ ಓಡಿಸುತ್ತಿದೆ. 3250 ರೂ. ದರವಿದೆ. ಬೆಳಗ್ಗೆ 9 ಗಂಟೆಗೆ ಮೊದಲ ಹೆಲಿಕಾಪ್ಟರ್ ವಿಮಾನ ನಿಲ್ದಾಣದಿಂದ ಹೊರಡಲಿದೆ. ಹೆಚ್‌ಎಎಲ್‌ನಿಂದ 4.15ಕ್ಕೆ ಹೊರಡಲಿದೆ. ಈ ಹೆಲಿಕಾಪ್ಟರ್‌ನಲ್ಲಿ ಸಂಚಾರ ನಡೆಸುವ ಜನರು ಮಾನ್ಯತೆ ಪಡೆದ ಸರ್ಕಾರಿ ದಾಖಲೆ ತೋರಿಸಬೇಕು. 2 ವರ್ಷ ಒಳಗಿನ ಮಕ್ಕಳಿಗೆ ಟಿಕೆಟ್ ಅಗತ್ಯವಿಲ್ಲ.

ಹೆಲಿಕಾಪ್ಟರ್‌ನಲ್ಲಿ ಸಂಚಾರ ನಡೆಸುವವರು 10 ಕೆಜಿ ಲಗೇಜ್ ತೆಗೆದುಕೊಂಡು ಹೋಗಬಹುದು. ಒಂದು ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಬಹುದು. ಆದರೆ ಸಾಕು ಪ್ರಾಣಿಗಳನ್ನು ಕರೆತರುವಂತಿಲ್ಲ.

ಡಿಜಿಸಿಎ ಅನುಮತಿ ಪಡೆದುಕೊಂಡು ಬ್ಲೇಡ್ ದೇಶದ ವಿವಿಧ ನಗರದಲ್ಲಿ ಇಂತಹ ಸೇವೆ ನೀಡುತ್ತಿದೆ. ಕರ್ನಾಟಕದಲ್ಲಿಯೂ ಬ್ಲೇಡ್ ಕರ್ನಾಟಕ ಎಂಬ ಹೆಸರಿನಲ್ಲಿ ಹೆಲಿಕಾಪ್ಟರ್, ಖಾಸಗಿ ವಿಮಾನ ಸೇವೆಯನ್ನು ನೀಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+