ಹೆಬ್ಬಾಳ ಜಂಕ್ಷನ್: ಸಂಚಾರ ಬದಲಾವಣೆ ನಿಯಮ ಜು.8ರಿಂದ ಜಾರಿ
ಬೆಂಗಳೂರು ಜು. 6: ನೀವು ನಿತ್ಯ ಹೆಬ್ಬಾಳ ಮೇಲ್ಸೇತುವೆ ಮೂಲಕ ಸಂಚರಿಸುತ್ತಿದ್ದೀರಾ? ಹಾಗಾದರೆ ಶುಕ್ರವಾರದಿಂದ ನಿಮ್ಮ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ಕಾರಣ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸರ್ಕಾರ ಕೆಲವು ಕ್ರಮ ಕೈಗೊಂಡಿದ. ಈ ಬಗ್ಗೆ ಸವಾರರು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ ನೋಡಿ...
ಬೆಂಗಳೂರಿನ ಹೆಬ್ಬಾಳ ರಸ್ತೆ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕೈಗೊಂಡ ನಿಯಮಗಳು ಇದೇ ಜುಲೈ 8 ರಿಂದ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿವೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಟ್ವೀಟ್ ಮಾಡಿದೆ.
ಬೆಂಗಳೂರಿನಿಂದ ಇತರ ಪ್ರದೇಶಗಳಲ್ಲಿ ತೆರಳಲು ಸಂಪರ್ಕ ಕೊಂಡಿಯಾಗಿರುವ ಹೆಬ್ಬಾಳ ರಸ್ತೆ ಜಂಕ್ಷನ್‌ನಲ್ಲಿ ವರ್ಷಗಳಿಂದಲೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವಾಹನ ಸವಾರರು ಈ ಭಾಗದಲ್ಲಿ ಓಡಾಡಲು ನಿತ್ಯ ಹೈರಾಣಾಗುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಆರ್‌ಸಿಎಲ್, ಪೊಲೀಸ್ ಇಲಾಖೆ (ಸಂಚಾರ ವೀಭಾಗ), ಬಿಡಿಎ ಸೇರಿದಂತೆ ಸಂಬಂಧಿತ ಸಂಸ್ಥೆಗಳ ಅಧಿಕಾರಿಗಳು ನಗರದ ಸಂಚಾರ ದಟ್ಟಣೆಯ ಪ್ರಮುಖ ಜಂಕ್ಷನ್‌ಗಳನ್ನು ಪರೀಶೀಲಿಸಿದ್ದಾರೆ.

ಅಧ್ಯಯನದ ಆಧಾರದಲ್ಲಿ ಸಂಚಾರ ಬದಲಾವಣೆಗೆ ಕ್ರಮ
ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್), ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐಎ) ಸಂಸ್ಥೆಗಳು ಸಂಚಾರ ಸಮಸ್ಯೆ ಪರಿಹಾರ ಕುರಿತು ಅಧ್ಯಯನ ನಡೆಸಿವೆ.
ಈ ಅಧ್ಯಯನಗಳ ಆಧಾರ ಮೇರೆಗೆ ಆಯಾ ಸಂಸ್ಥೆಗಳು ಮತ್ತು ಇಲಾಖೆ ಸಮನ್ವಯದೊಂದಿಗೆ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಿರುವುದಾಗಿ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಬದಲಾವಣೆಗೊಂಡ ಅಂಶಗಳು
* ಯಲಹಂಕ/ಕೊಡಿಗೇಹಳ್ಳಿ/ಕೆಂಪಾಪುರ/ಜಕ್ಕೂರು ಸೇರಿದಂತೆ ಮುಂತಾದ ಕಡೆಗಳಿಂದ ಸರ್ವೀಸ್ ರಸ್ತೆಯ ಮೂಲಕ ನಗರಕ್ಕೆ ಹೋಗುವ ವಾಹನಗಳು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಪ್ರವೇಶಿಸುವಂತಿಲ್ಲ. ಹೆಬ್ಬಾಳ ಜಂಕ್ಷನ್‌ನಲ್ಲಿನ ಲೂಪ್ ರ್‍ಯಾಂಪ್ ಬಳಸಿ ನಗರ ಪ್ರವೇಶಿಸಬೇಕು.

* ಏರ್‌ಪೋರ್ಟ್ ಎಲಿವೆಟೆಡ್ ಕಾರಿಡಾರ್‌ನಿಂದ ಬೆಂಗಳೂರು ನಗರದ ಕಡೆಗೆ ಬರುವ ಬಸ್ಸುಗಳು ಹೆಬ್ಬಾಳ ವೃತ್ತದಲ್ಲಿ ನಿಗದಿಪಡಿಸಿದ ಬಸ್ ಬೇ ನಲ್ಲಿ ಲೂಪ್ ರ್‍ಯಾಂಪ್ ಮುಂಚಿತವಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು.
* ಏರ್‌ಪೋರ್ಟ್ ಎಕ್ಸಪ್ರೆಸ್ ಹೆದ್ದಾರಿಯಿಂದ ನಗರಕ್ಕೆ ಚಲಿಸುವ ವಾಹನಗಳು ಮೊದಲಿನಂತೆ ಹೆಬ್ಬಾಳ ಫ್ಲೈಓವರ್ ಮೂಲಕ ನಗರಕ್ಕೆ ಬರಲು ಅನುವು ಮಾಡಿಕೊಡಲಾಗಿದೆ.
* ಏರ್‌ಪೋರ್ಟ್ ಎಕ್ಸಪ್ರೆಸ್ ಹೆದ್ದಾರಿಯಿಂದ ಕೆ.ಆರ್.ಪುರಂ, ತುಮಕೂರು ಕಡೆಗೆ ಚಲಿಸುವವರು ಮೊದಲಿನಂತ ಸರ್ವೀಸ್ ರಸ್ತೆ ಮೂಲಕ ಹಾದು ಹೋಗಬಹುದು.

* ಏರ್‌ಪೋರ್ಟ್ ರಸ್ತೆ ಹೆದ್ದಾರಿ ಮೂಲಕ ಕೆಂಪಾಪುರಕ್ಕೆ ಹೋಗುವವರು ವಿದ್ಯಾಶಿಲ್ಪ/ಯಲಹಂಕ ಬೈಪಾಸ್ ಬಳಿ ಸರ್ವೀಸ್ ರಸ್ತೆಯನ್ನು ಬಳಸುವುದು ಕಡ್ಡಾಯವಾಗಿದೆ.
* ಬದಲಾವಣೆ ಮಾಡಲಾದ ರಸ್ತೆ ಸಂಚಾರ ನಿರ್ವಹಣೆಗೆ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.
* ಹೆಬ್ಬಾಳ ಜಂಕ್ಷನ್‌ನಲ್ಲಿ ಬದಲಾವಣೆಗೊಂಡ ಸಂಚಾರ ನಿಯಮಗಳು ಶುಕ್ರವಾರ ಜು.8ರಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ತರಲು ನಗರ ಸಂಚಾರ ಪೊಲೀಸ್ ಇಲಾಖೆ ನಿರ್ಧರಿಸಿದೆ.
* ಹೆಬ್ಬಾಳ ಜಂಕ್ಷನ್‌ನಲ್ಲಿ ಬಸ್‌ಗಳ ನಿಲುಗಡೆ ಸ್ಥಳ ಬದಲಾವಣೆ, ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲತೆ, ಅಡ್ಡಾದಿಡ್ಡಿ ಬಸ್ ನಿಲುಗಡೆ ನಿಷೇಧ ಸೇರಿದಂತೆ ಮುಂತಾದ ಕ್ರಮಗಳನ್ನು ಹಂತ ಹಂತವಾಗಿ ಸಂಚಾರ ಇಲಾಖೆ ಕೈಗೊಳ್ಳಲಿದೆ.
ವಾಹನ ದಟ್ಟಣೆ ತಡೆಗಟ್ಟಲು ಹೆಬ್ಬಾಳ ಜಂಕ್ಷನ್ ನಲ್ಲಿ ಕೈಗೊಳ್ಳಲಿರುವ ಕೆಲವು ಕ್ರಮಗಳು.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 6, 2022
ಹೆಬ್ಬಾಳ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯ ಸಮಸ್ಯೆ ನಿವಾರಣೆಗೆ ಅಧ್ಯಯನವನ್ನು ಮಾಡಲಾಗಿದ್ದು, ಬೆಂಗಳೂರು ಸಂಚಾರ ಪೊಲೀಸ್, ಬಿಬಿಎಂಪಿ, ಬಿಎಂಆರ್ ಸಿಎಲ್, ಎನ್ ಎಚ್ ಎ,ಮುಂತಾದ
1/2












Click it and Unblock the Notifications