ಏರ್ ಶೋ ವಿಶೇಷ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಬೆಂಗಳೂರು, ಫೆಬ್ರವರಿ.03: ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಬೆಂಗಳೂರಿನ ಯಲಹಂಕ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಈ ಮಾಹಿತಿ ತಿಳಿದುಕೊಂಡಿರಬೇಕು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆ ಹೆಬ್ಬಾಳ ಮೇಲ್ಸೇತುವೆಯಿಂದ ಸಾದಹಳ್ಳಿ ಗೇಟ್ ವರೆಗೆ ಎರಡೂ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿಷೇಧಿಸಲಾಗಿದೆ.

ಫೆಬ್ರವರಿ.3ರಿಂದ ಫೆಬ್ರವರಿ.5ರವರೆಗೂ ಹೆಬ್ಬಾಳದ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್​ವರೆಗೂ ಏಕಮುಖ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಏರೋ ಇಂಡಿಯಾ ಪ್ರದರ್ಶನದ ಪಾಸ್ ಉಳ್ಳವರಿಗೆ, ವಿಐಪಿ, ತುರ್ತು ಸೇವಾ ವಾಹನಗಳು ಮತ್ತು ಬಿಎಂಟಿಸಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Bangalore Hebbal Flyover Road Restricted For 3 Days Due To Air India Show


ಏರೋ ಇಂಡಿಯಾದಲ್ಲಿ ಕೊವಿಡ್-19 ಶಿಷ್ಟಾಚಾರ ಪಾಲನೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯ ನಡುವೆ ಏರೋ ಇಂಡಿಯಾ 2021ರ ಕಾರ್ಯಕ್ರಮವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಡೆಯಲಿದೆ. ಪ್ರತಿವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್ ಇಂಡಿಯಾ ಶೋವನ್ನು ಈ ಬಾರಿ ಕೇವಲ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಾಸ್ಕ್ ಧರಿಸುವುದು, ಪ್ರಯಾಣಕ್ಕೂ 72 ಘಂಟೆಗಳ ಮುನ್ನ ಕೊವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಳ್ಳುವುದು, ರಸ್ ಹರಡದಂತೆ ಕಡ್ಡಾಯವಾಗಿ ಮಿಲಿಟರಿ ವಿಮಾನದಲ್ಲೇ ಪ್ರಯಾಣಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+