ಹೆಬ್ಬಗೋಡಿ ಪೊಲೀಸರ ದೌರ್ಜನ್ಯ ವೈರಲ್ ವಿಡಿಯೋ: ಸುಮೊಟೋ ಕೇಸು ದಾಖಲು

ಬೆಂಗಳೂರು, ಸೆ. 29: ಅಪರಾಧ ಪ್ರಕರಣವೊಂದರಲ್ಲಿ ವಿಚಾರಣೆಗೆ ಕರೆತಂದ ಯುವಕನನ್ನು ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್ ಪೇದೆಯೊಬ್ಬ ದೊಣ್ಣೆಯಿಂದ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರ ಮಾನ ಬೀದಿಯಲ್ಲಿ ಹರಾಜು ಹಾಕಿದೆ. ಪೊಲೀಸರ ದೌರ್ಜನ್ಯ ಸಂಬಂಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ.

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನಂತೆ ಕಾಣುವ ಯುವಕನ ಬಟ್ಟೆ ಬಿಚ್ಚಿಸಿ ಕಿಟಕಿ ಮುಂದೆ ನಿಲ್ಲಿಸಲಾಗಿದೆ. ಆ ಬಳಿಕ ದೊಣ್ಣೆಯಿಂದ ಕುಂಡಿ ಮೇಲೆ ವಿಕೃತವಾಗಿ ಹಲ್ಲೆ ಮಾಡುವ ಪೊಲೀಸ್ ಸಿಬ್ಬಂದಿ, ಆ ಬಳಿಕ ಕೂರಿಸಿ ಕಾಲಿನ ಪಾದಕ್ಕೆ ವಿಕೃತವಾಗಿ ಬಾರಿಸಿದ್ದಾರೆ. ಆತ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಂಡರೂ ಪೊಲೀಸ್ ಪೇದೆ ತನ್ನ ದರ್ಪ ಮುಂದುವರೆಸಿದ್ದಾನೆ.

ಯಾವುದೇ ಆರೋಪಿಯನ್ನು ವಶಕ್ಕೆ ಪಡೆದರೆ ವಿಚಾರಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಪೊಲೀಸರು ಹಲ್ಲೆ ಮಾಡುವ ವಿಡಿಯೋ ನೋಡಿದರೆ ಎಂಥವರಿಗೂ ಪೊಲೀಸರ ಮೇಲೆ ಸಿಟ್ಟು ಮೂಡುತ್ತದೆ. ಪರಿ ಪರಿ ಬೇಡಿಕೊಂಡರೂ ದೊಣ್ಣೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ವಿಡಿಯೋ ನೋಡುಗರನ್ನೇ ಬೆಚ್ಚಿ ಬೀಳಿಸುತ್ತದೆ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವಾ ಎಂಬ ಪ್ರಶ್ನೆ ಕಾಡುತ್ತದೆ. ಇನ್ನು ಈ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿದು ಬಿಟ್ಟಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣರೆಡ್ಡಿ ಪಕ್ಷದ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಲೀಸರ ಕೃತ್ಯವನ್ನು ಖಂಡಿಸಿದ್ದಾರೆ.

Bengaluru: Hebbagodi police brutal assault on youth; Video Goes Viral

ಸ್ವಯಂ ಪ್ರೇರಿತ ದೂರು:

ವಿಚಾರಣೆ ನೆಪದಲ್ಲಿ ಯುವಕನನ್ನು ಕರೆತಂದು ವಿಕೃತವಾಗಿ ಹಲ್ಲೆ ಮಾಡುವ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಮಾನವ ಹಕ್ಕು ಅಯೋಗದ ಸದಸ್ಯ ಆರ್.ಕೆ. ದತ್ತಾ ಅವರು, ''ಹೆಬ್ಬಗೋಡಿ ಪೊಲೀಸರು ಹಲ್ಲೆ ಮಾಡುವ ಈ ಕೃತ್ಯದ ಬಗ್ಗೆ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು'' ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

Bengaluru: Hebbagodi police brutal assault on youth; Video Goes Viral

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ಡಾ. ಕೋನಾ ವಂಶಿ ಕೃಷ್ಣ, ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮಾಡಿರುವ ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Bengaluru: Hebbagodi police brutal assault on youth; Video Goes Viral

Recommended Video

      IPLನಲ್ಲಿ ಉತ್ತಮ ಆಟವಾಡಿ T20 ವಲ್ಡ್ ಕಪ್ ಗೆ ಸ್ಥಾನ ಗಿಟ್ಟಿಸಿಕೊಂಡ ಮೂರು ಆಟಗಾರರು | Oneindia Kannada

      ರವಿಕೃಷ್ಣಾರೆಡ್ಡಿ ಕಿಡಿ:

      "ನಾವು ತಾಲಿಬಾನ್ ಆಡಳಿತದಲ್ಲಿದ್ದೇವಾ ? ಪ್ರಜಾಪ್ರಭುತ್ವ ರಾಜ್ಯದಲ್ಲಿ ಇದ್ದೇವಾ ಎಂಬುದೇ ನನಗೆ ಅನುಮಾನ ಕಾಡುತ್ತಿದೆ. ಯಾವುದೋ ಅಪರಾಧ ಪ್ರಕರಣದಲ್ಲಿ ವಿಚಾರಣೆಗೆ ಕರೆತಂದಿರುವ, ಅಪ್ರಾಪ್ತನಂತೆ ಕಾಣುವ ಬಾಲಕನಿಗೆ ಹಿಂದೆ ಮುಂದೆ ನೋಡದೇ ದೊಣ್ಣೆಯಲ್ಲಿ ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆ ತಲೆ ತಗ್ಗಿಸುವ ಘಟನೆಯಿದು. ವಿಚಾರಣೆ ನೆಪದಲ್ಲಿ ಸಾರ್ವಜನಿಕವಾಗಿ ಹಲ್ಲೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ. ರಾಜ್ಯದಲ್ಲಿ ಮಾನವ ಹಕ್ಕು ಆಯೋಗ ಸತ್ತು ಹೋಗಿದೆ. ಈ ಘಟನೆ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ದೂರು ನೀಡಲಿದೆ. ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಬೆಂಗಳೂರು ಗ್ರಾಮಾಂತರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು" ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+