ಬೆಂಗಳೂರಲ್ಲಿ ಗುಡುಗು ಸಹಿತ ಭಾರಿ ಮಳೆ, ಅಲ್ಲಲ್ಲಿ ಆಲಿಕಲ್ಲು
ಬೆಂಗಳೂರು, ಮೇ 17: ನಗರದಲ್ಲಿ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗುತ್ತಿದೆ. ಜಯನಗರ, ಶಾಂತಿನಗರ, ,ಮೆಜೆಸ್ಟಿಕ್ ಇನ್ನೂ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಆಗುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಳೆದ ಒಂದು ವಾರದಿಂದಲೂ ಸಹ ನಗರದಲ್ಲಿ ಅನಿಯಮಿತವಾಗಿ ಮಳೆ ಆಗುತ್ತಲೇ ಇದ್ದು, ಇಂದಿನ ಮಳೆ ಜೋರು ಪಡೆದುಕೊಂಡಿದೆ.
ಮಳೆಯಿಂದಾಗಿ ನಗರದ ಕೆಲ ಭಾಗಗಳಲ್ಲಿ ಈಗಾಗಲೇ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ. ಸಂಚಾರ ಸಹ ಕೆಲವೆಡೆ ಅಸ್ತವ್ಯಸ್ಥಗೊಂಡಿದೆ.

ಜಯನಗರ, ಕಾರ್ಪೊರೇಷನ್, ಶಾಮತಿನಗರ, ಮೆಜೆಸ್ಟಿಕ್, ಡಬಲ್ ರಸ್ತೆ, ವಿಲ್ಸನ್ ಗಾರ್ಡನ್, ಕಲಾಸಿಪಾಳ್ಯ, ಮಾರ್ಟೆಕ್ ಪ್ರದೇಶ ಇನ್ನೂ ಹಲವು ಕಡೆ ಆಲಿಕಲ್ಲು ಮತ್ತು ಭಾರಿ ಗುಡುಗು ಸಹಿತ ಮಳೆ ಆಗುತ್ತಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಇನ್ನೂ ಕೆಲವು ದಿನ ಮಳೆ ಹೀಗೆಯೇ ಮುಂದುವರೆಯಲಿದೆ. ಇಂದು ರಾತ್ರಿಯೂ ಸಹ ಮಳೆ ಆಗುವ ಸಂಭವ ಇದೆ ಎನ್ನಲಾಗಿದೆ. ಕಳೆದ ಕೆಲ ತಿಂಗಳಿನಿಂದ ಬಿಸಿಲಿಗೆ ತತ್ತರಿಸಿದ್ದ ಬೆಂಗಳೂರಿಗರಿಗೆ ಕೆಲವು ದಿನಗಳಿಂದ ಬೀಳುತ್ತಿರುವ ಮಳೆ ತಂಪು ನೀಡುತ್ತಿವೆ.












Click it and Unblock the Notifications