ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮುಂಗಾರಿನ ಅಬ್ಬರ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ

|
Google Oneindia Kannada News

ಬೆಂಗಳೂರು ಜೂ.18: ಬೆಂಗಳೂರಿನಲ್ಲಿ ಮುಂಗಾರಿನ ಆರ್ಭಟ ಶುಕ್ರವಾರವು ಮುಂದುವರಿದಿದ್ದು, ಮಹಾದೇವಪುರ ವಲಯ ವ್ಯಾಪ್ತಿಯೊಂದರಲ್ಲೇ ಅತ್ಯಧಿಕ ಮಳೆ ಸುರಿದು ಅವಾಂತರ ಸೃಷ್ಟಿಸಿದೆ. ಮಹಾದೇವಪುರದಲ್ಲಿ ವ್ಯಕ್ತಿಯೊಬ್ಬರು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಕೆ.ಆರ್ ಪುರದಲ್ಲಿನ ಕೃಷ್ಣ ಥಿಯೇಟರ್‌ನ ಗೋಡೆ ಕುಸಿದಿದೆ. ಇನ್ನು ದೇವಸಂದ್ರದ ಬಳಿ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ಕುಸಿದು ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ನೀರಲ್ಲಿ ಕೊಚ್ಚಿ ಹೋದ ಯುವಕ

ಮಹಾದೇವಪುರ ವ್ಯಾಪ್ತಿಯ ಬಸವಂತಪುರದಲ್ಲಿ ಅಪಾರ್ಟಮೆಂಟ್‌ವೊಂದರ ಪಕ್ಕ ರಾಜಕಾಲುವೆ ಹಾದು ಹೋಗಿದೆ. ಧಾರಾಕಾರ ಮಳೆಗೆ ರಾಜಕಾಲುವೆ ಉಕ್ಕಿ ಹರಿದಿದ್ದು, ತಡರಾತ್ರಿ 12ಗಂಟೆ ಸುಮಾರಿಗೆ ಯುವಕನೊಬ್ಬ ರಸ್ತೆ ದಾಟುವ ವೇಳೆ ಆಯತಪ್ಪಿ ಈ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತನನ್ನು 24 ವರ್ಷ ವಯಸ್ಸಿನ ಮಿಥುನ್ ಎಂದು ಗುರುತಿಸಲಾಗಿದೆ.

ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ತಡರಾತ್ರಿಯೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಅಕ್ಕ ಪಕ್ಕದ ನಿವಾಸಿಗಳನ್ನು, ವಾಹನ ಸವಾರರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಕೊಚ್ಚಿ ಹೋದ ವ್ಯಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ತಿಳಿಸಿದೆ. ಇನ್ನೊಂದೆಡೆ, ಭಾರಿ ಮಳೆಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ

ರಾಮಮೂರ್ತಿ ನಗರದ ಚರ್ಚ ರಸ್ತೆಯ ಅಂಬೇಡ್ಕರ್ ನಗರದಲ್ಲಿ ರಾಜಕಾಲುವೆ ತ್ಯಾಜ್ಯದಿಂದ ಕಟ್ಟಿಕೊಂಡು ಮಳೆ ನೀರು ರಸ್ತೆಗೆ ಮತ್ತು ಸುಮಾರು ಹತ್ತು ಮನೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ ಕೆಲ ಕಾಲ ಸಂಚಾರ ಸಮಸ್ಯೆ ಸೃಷ್ಟಿಯಾಗಿತ್ತು.

Heavy Rainfall Under in Mahadevapur Zone: A man washed away in Rajakaluve

ಪ್ರಮುಖ ರಸ್ತೆಗಳಲ್ಲೇ ಮಳೆ ನೀರು:

ಪ್ರಮುಖ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಯಿತು. ಸಂಜೆ ನಂತರ ಆರಂಭವಾದ ಮಳೆಗೆ ನಗರದ ರಸ್ತೆ ಅಂಡರ್ ಪಾಸುಗಳು ಅಕ್ಷರಶಃ ಜಲಾವೃತಗೊಂಡಿವೆ. ಶಿವಾನಂದ ವೃತ್ತ, ಓಕಳಿಪುರಂ, ಯಲಹಂಕದಲ್ಲಿ ರಸ್ತೆ ಅಂಡರ್ ಪಾಸ್‌ಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು. ವಾಹನ ಸವಾರರು ಸಂಚರಿಸಲು ಪರದಾಡಿದರು. ತ್ಯಾಜ್ಯದಿಂದ ಬ್ಲಾಕ್ ಆದ ಪರಿಣಾಮ ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು.

ಮರದ ಕೊಂಬೆಗಳು ಧರೆಗೆ

ಯಲಹಂಕ, ಮಹಾದೇವಪುರ, ಕೆ.ಆರ್ ಪುರಂ, ಮೆಜೆಸ್ಟಿಕ್ ಸುತ್ತಮುತ್ತ, ಕಾಟನ್ ಪೇಟೆ, ವಿದ್ಯಾರಣ್ಯಪುರ, ಕೆ.ಆರ್ ಮಾರುಕಟ್ಟೆ, ಟೌನ್ ಹಾಲ್, ರಾಜಾಜಿನಗರ, ನಾಯಂಡಹಳ್ಳಿ ಸೇರಿದಂತೆ ವಿವಿಧೆಡೆ ಮುಖ್ಯರಸ್ತೆಗಳಲ್ಲೇ ಮಳೆ ನೀರು ತುಂಬಿ ಹರಿದಿದೆ. ಅದರಲ್ಲೇ ವಾಹನ ಸವಾರರು ಸಂಚರಿಸಿದ್ದಾರೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ನೀರು ನಿಂತಿದೆ.

Heavy Rainfall Under in Mahadevapur Zone: A man washed away in Rajakaluve

ಯಲಹಂಕದ ಬಿಇಎಲ್ ಲೇಔಟ್‌ನಲ್ಲಿನ ಎಂಇಎಸ್ ಕಾಲೇಜು ಮುಂದೆ, ಎಚ್‌ಎಂಟಿ ಲೇಔಟ್ ವಿದ್ಯಾರಣ್ಯಪುರ, ಪೂರ್ವ ವಲಯದ ಮಣಿಪಾಲ್ ಆಸ್ಪತ್ರೆ ಹಿಂಭಾಗ ತಲಾ ಒಂದು ಮರದ ಕೊಂಬೆ ಮುರಿದೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಬಿಬಿಎಂಪಿ ಸಿಬ್ಬಂದಿ ಕೊಂಬೆ ತೆರವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಸಹಾಯವಾಣಿ ತಿಳಿಸಿದೆ.

ಹೊರಮಾವುನಲ್ಲಿ 146ಮಿ.ಮೀ. ಅಧಿಕ ಮಳೆ ದಾಖಲು:

ಮಹಾದೇವಪುರ ವ್ಯಾಪ್ತಿಯ ಹೊರಮಾವು ವೊಂದರಲ್ಲೇ ಅತ್ಯಧಿಕ 146 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ದೊಡ್ಡಾನೆಕ್ಕುಂದಿ 106 ಮಿ.ಮೀ, ಎಚ್ ಎ ಎಲ್ ವಿಮಾನ ನಿಲ್ದಾಣ 103 ಮಿ.ಮೀ., ಯಲಹಂಕ ಮತ್ತು ಜಕ್ಕೂರು ತಲಾ 88 ಮಿ.ಮೀ., ಅಟ್ಟೂರ 86ಮಿ.ಮೀ., ಕೊಡಿಗೇಹಳ್ಳಿ 73ಮಿ.ಮೀ., ರಾಜ್ ಮಹಲ್ ಗುಟ್ಟಹಳ್ಳಿ 68 ಮಿ.ಮೀ., ಕೆ.ಆರ್ ಪುರಂ 77ಮಿ.ಮೀ., ಹೂಡಿ 72ಮಿ.ಮೀ., ಕುಶಾಲನಗರ 33ಮಿ.ಮೀ., ವಿಶ್ವನಾಥ ನಾಗೇನಹಳ್ಳಿ 32ಮಿ.ಮೀ, ನಾಗಪುರ 29ಮಿ. ಮೀ. ಮಳೆ ದಾಖಲಾಗಿದೆ. ಕೆಲವು ಬಡಾವಣೆಗಳಲ್ಲಿ ಬೆಳಗ್ಗೆವರೆಗೂ ಸೋನೆ ಮಳೆ ಸುರಿದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ತಿಳಿಸಿದೆ.

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
A man washed away in the rajkaluve zone of Mahadevapur on Friday(June 17), Heavy Rainfall Under in Mahadevapur Zone, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X