ಬೆಂಗಳೂರು ದಕ್ಷಿಣದ ಜನರಿಗೆ ಮತ್ತೆ ಸಂಕಷ್ಟ ತಂದ ಮಳೆ
ಬೆಂಗಳೂರು, ಅಕ್ಟೋಬರ್ 15 : ಬೆಂಗಳೂರು ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ನಗರದ ದಕ್ಷಿಣ ಭಾಗದಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದೆ. ಬಿಡದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ರಾಜಾಜಿನಗರ, ವಿಜಯನಗರ, ಕೆಂಗೇರಿ, ರಾಜರಾಜೇಶ್ವರಿ ನಗರ, ಕೋರಮಂಗಲ, ಬೊಮ್ಮನಹಳ್ಳಿ, ಎಚ್.ಎಸ್.ಆರ್ ಲೇಔಟ್, ಬಿ.ಟಿ.ಎಂ.ಲೇಔಟ್ ಶಿವಾಜಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ.

ಶನಿವಾರ ರಾತ್ರಿ ಬಿಟಿಎಂ ಲೇಔಟ್ ಸಮೀಪದ ಹೊಂಗಸಂದ್ರ ವಾರ್ಡ್‌ನ ಮನೆಗಳಿಗೆ ನೀರು ನುಗ್ಗಿದೆ. ಬೇಗೂರು ಕೆರೆಯ ಕೋಡಿ ತುಂಬಿ ನೀರು ಲೇಔಟ್‌ಗೆ ಹರಿದುಬಂದಿದೆ. ಅನುಗ್ರಹ ಲೇಔಟ್, ಎಚ್‌ಎಸ್‌ಆರ್ ಲೇಔಟ್ ನಲ್ಲಿಯೂ ಭಾರೀ ಮಳೆ ಸುರಿದಿದೆ.
ಶುಕ್ರವಾರ ರಾತ್ರಿ ಮಳೆ ಸುರಿದ ವೇಳೆ ಕುರುಬರಹಳ್ಳಿಯ 17ನೇ ಅಡ್ಡ ರಸ್ತೆಯಲ್ಲಿರುವ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ನಿಂಗಮ್ಮ, ಪುಷ್ಪಾ ಅವರ ಶವ ಇನ್ನೂ ಸಿಕ್ಕಿಲ್ಲ. 4 ತಂಡಗಳು ಶವಕ್ಕಾಗಿ ಭಾನುವಾರ ಬೆಳಗ್ಗೆಯೂ ಹುಡುಕಾಟ ನಡೆಸುತ್ತಿವೆ.
ಮೀನಗಾರರರು ನೀರು ಪಾಲು : ಬಿಡದಿಯ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶನಿವಾರ ಸಂಜೆ ಮೀನು ಹಿಡಿಯಲು ಇಬ್ಬರು ಹೋಗಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications