Bengaluru Weather: ಸಿಲಿಕಾನ್ ಸಿಟಿಗೆ ತಂಪೆರೆದ ಮಳೆರಾಯ, ಜೂನ್ 3ರ ವರೆಗಿನ ಹವಾಮಾನ ಮುನ್ಸೂಚನೆ

ಬೆಂಗಳೂರು: ತೀವ್ರ ಬಿಸಿಲಿನಿಂದ ಹೈರಾಣಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಗುರುವಾರ ವ್ಯಾಪಕ ಮಳೆ ದಾಖಲಾಗಿ, ನಗರದಲ್ಲಿ ತಂಪು ಅನುಭವವಾಗಿದೆ. ಬೊಮ್ಮನಹಳ್ಳಿ, ಮಹಾದೇವಪುರ, ಕೋರಮಂಗಲ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಜೋರು ಆಗಿದ್ದರೆ ರಾಜಾಜಿನಗರ, ಯಶವಂತಪುರ, ಯಲಹಂಕ ಭಾಗದಲ್ಲಿ ಮಬ್ಬು ವಾತಾವರಣ ಕಂಡು ಬಂದು ಕೆಲವೆಡೆ ಹಗುರ ಮಳೆ ಸುರಿದಿದೆ. ಜೂನ್ 3ರ ವರೆಗಿನ ಬೆಂಗಳೂರು ಹವಾಮಾನ (Bengaluru Weather Forecast) ಮುನ್ಸೂಚನೆ ಇಲ್ಲಿದೆ.

ಗುರುವಾರ ಮುಂಜಾನೆಯಿಂದ ಸಾಮಾನ್ಯ ವಾತಾವರಣ ಹಾಗೂ ಚುರುಕಿನ ಬಿಸಿಲು ಕಂಡು ಬಂತು. ಸಂಜೆ ಹೊತ್ತಿಗೆ ಹಲವು ಬಡಾವಣೆಗಳಲ್ಲಿ ಮಳೆ ಸುರಿದು ಸಂಚಾರ ಕೆಲವೆಡೆ ಅಸ್ತವ್ಯಸ್ತವಾಯಿತು. ಕೆಲ ಹೊತ್ತು ರಸ್ತೆಗಳ ಮೇಲೆ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಮುಂಗಾರು ಮಳೆಯ (Monsoon Rain 2026) ಆಗಮನದ ನಿರೀಕ್ಷೆಯಲ್ಲಿರುವ ಜನರು ಇಂದಿನ ಮಳೆಯನ್ನು ಖಷಿಯಿಂದಲೇ ಸ್ವಾಗತಿಸಿದರು.

Bengaluru Heavy Rain

ಬೊಮ್ಮನಹಳ್ಳಿಯಲ್ಲಿ ಅಧಿಕ ಮಳೆ, ರಸ್ತೆ ಸಂಚಾರ ನಿಧಾನ

ಸಿಲ್ಕ್‌ಬೋರ್ಡ್ ಜಂಕ್ಷನ್, ಮಹಾದೇವಪುರ ರಸ್ತೆ, ಹೊರ ವರ್ತುಲ ರಸ್ತೆ (ORR), ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿ ನಗರ ಭಾಗಗಳ ಪ್ರಮುಖ ರಸ್ತೆಗಳಲ್ಲಿ ಮಳೆಯಿಂದಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ರಾತ್ರಿ 10 ಗಂಟೆವರೆಗಿನ ಮಾಹಿತಿ ಪ್ರಕಾರ, ಬೊಮ್ಮನಹಳ್ಳಿಯಲ್ಲಿ ಅಧಿಕ ಮಳೆ 44.5 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ತಿಳಿಸಿದೆ.

Monsoon Rain: ಮುಂಗಾರು ಆಗಮನ ವಿಳಂಬ, ಜೂನ್ ಮೊದಲ ವಾರ ಗುಡ್‌ನ್ಯೂಸ್ ಸಾಧ್ಯತೆ: ಐಎಂಡಿ
Monsoon Rain: ಮುಂಗಾರು ಆಗಮನ ವಿಳಂಬ, ಜೂನ್ ಮೊದಲ ವಾರ ಗುಡ್‌ನ್ಯೂಸ್ ಸಾಧ್ಯತೆ: ಐಎಂಡಿ

ಇನ್ನುಳಿದಂತೆ ಕೋರಮಂಗಲದಲ್ಲಿ 42.5 ಮಿಲಿ ಮೀಟರ್, ದೊರೆಸಾನಿಪಾಳ್ಯ 40 ಮಿಲಿ ಮೀಟರ್, ವಿದ್ಯಾಪೀಠ 28.5 ಮಿಲಿ ಮೀಟರ್, ಅರಕೆರೆ 28 ಮಿಲಿ ಮೀಟರ್, ಕೋಣನಕುಂಟೆ 26.5 ಮಿಲಿ ಮೀಟರ್, ಪಟ್ಟಾಭಿರಾಮನಗರ 25 ಮಿಲಿ ಮೀಟರ್, ವನ್ನಾರಪೇಟೆ 18 ಮಿಲಿ ಮೀಟರ್, ಸಿಂಗಸಂದ್ರ-2ದಲ್ಲಿ 17.5 ಮಿಲಿ ಮೀಟರ್ ಮತ್ತು ವಿವಿ ಪುರಂ ನಲ್ಲಿ 13 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇತರ ಕೆಲವು ಬಡಾವಣೆಗಳಲ್ಲಿ ಹಗುರ ಆಗಿದೆ.

ನಗರದ ಪ್ರಮುಖ ಭಾಗಗಳಲ್ಲಿ ಸಂಜೆ ತಾಪಮಾನ

ಬೆಂಗಳೂರು ನಗರ ಭಾಗದಲ್ಲಿ ಸಂಜೆ ಗರಿಷ್ಠ 32.4 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ಇಂಟರ್‍‌ನ್ಯಾಷನಲ್ ಏರ್‍‌ಪೋರ್ಟ್ ಕ್ರಮವಾಗಿ 33.4 ಡಿಗ್ರಿ ಸೆಲ್ಸಿಯಸ್ ಮತ್ತು 22.1 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಕ್ರಮವಾಗಿ 33.2 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಜೂನ್ 3ರ ವರೆಗಿನ ಬೆಂಗಳೂರು ಹವಾಮಾನ ಮುನ್ಸೂಚನೆ

ಬೆಂಗಳೂರಿನಲ್ಲಿ ಇಂದು ಗುರುವಾರ ವ್ಯಾಪಕ ಮಳೆ ಬರಲಿರುವ ಪ್ರಯುಕ್ತ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ನೀಡಿತ್ತು. ನಾಳೆ ಶುಕ್ರವಾರದಿಂದ ಜೂನ್ 3ರವರೆಗೆ ನಗರಾದ್ಯಂತ ಅಲ್ಲಲ್ಲಿ ಜೋರು ಬಿರುಗಾಳಿ ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ನಿರೀಕ್ಷೆಗಳಿವೆ. ಈ ಅವಧಿಯಲ್ಲಿ ನಗರದಲ್ಲಿ ಹಗಲು ವಾತಾವರಣ ಬಿಸಿಲು ಸಹಿತ ಸಾಮಾನ್ಯವೆಂಬಂತೆ ಕಂಡು ಬಂದರೂ ಸಂಜೆ ಇಲ್ಲವೇ ರಾತ್ರಿ ಹೊತ್ತಿಗೆ ಹಗುರದಿಂದ ಸಾಧಾರಣ ಮಳೆ ಆಗಬಹುದು. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+