• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಎಎಪಿ ಸಹಾಯವಾಣಿ

|

ಆಮ್ ಆದ್ಮಿ ಪಕ್ಷದಿಂದ ಮಳೆ ಹಾನಿ ಪ್ರದೇಶಗಳಲ್ಲಿ ಸಾಮಾಜಿಕ ಗಣತಿ, ಸಹಾಯವಾಣಿ ಪ್ರಾರಂಭ

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಬೆಂಗಳೂರು, ಸೆ. 11: ಸತತ ಮೂರು ದಿನಗಳಿಂದ ಸುರಿದ ಮಳೆಗೆ ಅರ್ಧ ಬೆಂಗಳೂರು ನೀರಿನಲ್ಲಿ ಮುಳುಗಿದೆ, ಯಾವೊಬ್ಬ ಜನಪ್ರತಿನಿಧಿಗಳು ಕೂಡ ಜನರ ಗೋಳು ಕೇಳದಂತಹ ಸ್ಥಿತಿಗೆ ತಲುಪಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಸರ್ಕಾರ ಹಾಗೂ ಬಿಬಿಎಂಪಿಯ ಈ ವೈಫಲ್ಯದಿಂದಾಗಿ ಬೆಂಗಳೂರು ನಗರ ದಿನದಿಂದ ದಿನಕ್ಕೆ ನರಕವಾಗುತ್ತಿದೆ. ಆದ ಕಾರಣ ಆಮ್ ಆದ್ಮಿ ಪಕ್ಷ ಮಳೆ ಹಾನಿ ಪ್ರದೇಶಗಳಲ್ಲಿ ಸಾಮಾಜಿಕ ಗಣತಿಯನ್ನು ಮುಂದಿನ 10 ದಿನಗಳ ಕಾಲ ನಡೆಸಲಿದೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.

48 ಗಂಟೆಗಳ ಕಾಲ ಕರ್ನಾಟಕದಲ್ಲಿ ಮಳೆ

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಳೆಯಿಂದ ಪದೇ, ಪದೇ ತೊಂದರೆಗೆ ಒಳಗಾಗುತ್ತಿರುವ ಪ್ರದೇಶಗಳಲ್ಲಿ ಏಕೆ ಸಮಸ್ಯೆ ಆಗುತ್ತಿದೆ ಎಂದು ವರದಿ ಮಾಡಲಾಗುವುದು.

ಕೆಲವು ಪ್ರದೇಶಗಳು ಪದೇ, ಪದೇ ತೊಂದರೆಗೆ ಒಳಗಾಗುತ್ತಿರುವುದು ಏತಕ್ಕೆ ಎಂದು ಕಾರಣ ತಿಳಿದುಕೊಳ್ಳಲಾಗುವುದು. ಸಾರ್ವಜನಿಕರು ಮಳೆಯಿಂದ ತೊಂದರೆಗೆ ಒಳಗಾಗಿದ್ದರೆ ಕೂಡಲೇ ಈ ದೂರವಾಣಿ ಸಂಖ್ಯೆ +91 95134 48694 ಸಂಪರ್ಕಿಸಬಹುದು ಹಾಗೂ ಸಾರ್ವಜನಿಕರು ಮಳೆ ಅವಘಡಗಳ ಫೋಟೊ, ವಿಡಿಯೋ ಮತ್ತು ಗೂಗಲ್ ಲೊಕೇಶನ್ ಕಳುಹಿಸಿದರೇ ಸಹಾಯ ಹಸ್ತ ಚಾಚಲಾಗುವುದು ಎಂದು ಹೇಳಿದರು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ದಾಸರಹಳ್ಳಿ, ಕಗ್ಗದಾಸನಪುರ,ಸುರಂಜನ್‌ ದಾಸ್‌ ರಸ್ತೆಯಲ್ಲಿ ನರಕ ದರ್ಶನ

ಸಾಮಾಜಿಕ ಗಣತಿಯ ಮೊದಲ ಭಾಗವಾಗಿ ಇಂದು ದಾಸರಹಳ್ಳಿ ವ್ಯಾಪ್ತಿಯ ಚೊಕ್ಕಸಂದ್ರ 39 ನೇ ವಾರ್ಡಿನ ಅಶ್ವಥಪುರದಲ್ಲಿ ಅಕ್ಷರಶಃ ನರಕ ದರ್ಶನವಾಯಿತು. ನೂರಾರು ಮನೆಗಳು ನೀರಿನಲ್ಲಿ ಮುಳುಗಿವೆ, ಇಂದು ಬೆಳಿಗ್ಗೆ ಭೇಟಿ ನೀಡಿದಾಗ ಕುಟುಂಬವೊಂದು ನೀರಿನಲ್ಲಿ ನೆನೆದ ತೊಗರಿಬೇಳೆಯನ್ನೇ ಒಣಗಿಸಿಕೊಂಡು ಅಡುಗೆ ಮಾಡುವ ಹೀನ ಸ್ಥಿತಿಗೆ ತಲುಪಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಬೇಸರಿಸಿದರು.

   Zameer Ahmed ಗರಂ Sambargi ವಿರುದ್ಧ ಬಿತ್ತು ಸಿಕಾಪಟ್ಟೆ ಸೆಕ್ಷನ್ | Oneindia Kannada

   ಕಳೆದ 4 ತಿಂಗಳ ಹಿಂದಿನಿಂದಲೇ ಆಮ್ ಆದ್ಮಿ ಪಕ್ಷ ಮಳೆ ಅವಘಡದ ಬಗ್ಗೆ ಪದೇ, ಪದೇ ಎಚ್ಚರಿಕೆ ನೀಡುತ್ತಲೇ ಬಂದಿತ್ತು ಹಾಗೂ ಆಮ್ ಆದ್ಮಿ ಪಕ್ಷ ಸುಮಾರು 500ಕ್ಕೂ ಹೆಚ್ಚು ತಗ್ಗು ಪ್ರದೇಶಗಳು ನಗರದಾದ್ಯಂತ ಇವೆ ಎಂದು ಸಮೀಕ್ಷೆ ಮಾಡಿ ತಿಳಿಸಿತ್ತು. ರಾಜ ಕಾಲುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಮಾಹಿತಿ ನೀಡುವ ಸೆನ್ಸಾರ್ ಅಳವಡಿಕೆಗೆ 15 ಕೋಟಿ, ಚರಂಡಿ ನಿರ್ವಹಣೆ, ತುರ್ತುಪರಿಸ್ಥಿತಿ ನಿರ್ವಹಣೆಗೆ ಮೀಸಲಿಟ್ಟಿರುವ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

   ಸುರಂಜನ್ ದಾಸ್ ರಸ್ತೆ, ಕಗ್ಗದಾಸನಪುರ, ಬಾಗಮನೆ ಟೆಕ್ಪಾರ್ಕ್ ಹಿಂದಿನ ಪ್ರದೇಶಗಳಲ್ಲಿ ಇಂದು ಸಮಾಜಿಕ ಗಣತಿ ಮಾಡಲಾಯಿತು. ಈ ಪ್ರದೇಶಗಳ ಪರಿಸ್ಥಿತಿ ಕಳೆದ 14 ವರ್ಷಗಳಿಂದಲೂ ಕೆಟ್ಟದಾಗಿದೆ. ಕೇವಲ 5 ನಿಮಿಷ ಮಳೆ ಬಂದರೂ ಸಾಕು ನಾಲ್ಕು ಅಡಿ ನೀರು ನಿಲ್ಲುತ್ತದೆ ಎಂದು ಸಿ.ವಿ.ರಾಮನ್ ನಗರದ ಮುಖಂಡರಾದ ಬೈರಸಂದ್ರ ಜಗದೀಶ್ ಬಾಬು ಅವರು ಆರೋಪಿಸಿದರು.

   ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೂ ಬೆಂಗಳೂರಿನ ಉಸ್ತುವಾರಿಯನ್ನು ಅಘೋಷಿತವಾಗಿ ವಹಿಸಿಕೊಂಡಿರುವ ಸಚಿವ ಆರ್.ಅಶೋಕ್ ಕಾಣೆಯಾಗಿದ್ದಾರೆ. ಜೀವ ರಕ್ಷಣಾತ್ಮಕ ಸಲಕರಣೆಗಳಾಗಲಿ, ಎನ್ಡಿಆರ್ಎಫ್ ತಂಡವಾಗಲಿ ಯಾವುದೂ ಜನರ ನೆರವಿಗೆ ನಿಲ್ಲದಾಗಿವೆ. ಜನರ ಸಂಕಷ್ಟಕ್ಕೆ ನೆರವಾಗದಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ತಲುಪಿರುವುದು ನಾಚಿಕೆ ಗೇಡು.

   ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಕೂಡಲೇ ನಗರ ಪ್ರದಕ್ಷಿಣೆ ಮಾಡಿ ತಕ್ಷಣದ ತುರ್ತು ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಮತ್ತು ಸಮರೋಪಾದಿಯಲ್ಲಿ ಪರಿಹಾರ ನೀಡಬೇಕು ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವೆಂಕಟೇಗೌಡ ಆಕ್ರೋಶ ವ್ಯಕ್ತಪಡಿಸಿದರು.

   English summary
   Bengaluru Heavy Rain, AAP releases Helpline number for Rain hit layouts in the city and condemn in ablity of BBMP and officials.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X