ವೈದ್ಯರ ದಿನಾಚರಣೆಗೆ ಸಚಿವ ಶ್ರೀರಾಮುಲು ಶುಭಾಶಯ
ಬೆಂಗಳೂರು, ಜುಲೈ 1: ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ. ವೈದ್ಯರ ಸೇವೆಯನ್ನು ನೆನೆದು ಮಾತನಾಡಿದ್ದಾರೆ.
ಒಬ್ಬ ಸೈನಿಕ ಹೇಗೆ ದೇಶವನ್ನು ಕಾಯುತ್ತಾನೋ ಹಾಗೆ ಜಗತ್ತಿನ ಜನರ ಜೀವ ಉಳಿಸುವ ಕೆಲಸವನ್ನು ಡಾಕ್ಟರ್ಸ್ ಮಾಡುತ್ತಾರೆ. ವೈದ್ಯೋ ನಾರಾಯಣೋ ಹರಿ ಅಂತೀವಿ ಎಂದು ಶ್ರೀರಾಮುಲು ಹೇಳಿದ್ದಾರೆ.
ಪ್ರಾಣ ಕೊಡೋ ದೇವರು ಪ್ರಾಣ ಉಳಿಸೋ ಡಾಕ್ಟರ್ಸ್ ಒಂದೇ. ನೂರಾರು ವರ್ಷಗಳ ಹಿಂದೆ ಪ್ಲೇಗ್ ಬಂದಾಗ, 10 ವರ್ಷದ ಹಿಂದೆ h1n1 ಬಂದಿದ್ದಾಗ, ಈಗ ಕೊರೊನ ಬಂದಿರುವ ಈ ಸಂದರ್ಭದಲ್ಲೂ ಡಾಕ್ಟರ್ಸ್ ಹೇಳೋಕೆ ಸಾಧ್ಯವಿಲ್ಲದಷ್ಟು ಕೆಲಸ ಮಾಡಿದ್ದಾರೆ.ತಮಗೆ ಕುಟುಂಬ ಇದ್ದರೂ ಕೂಡ ಜನರಿಗಾಗಿ ಪ್ರಾಣ ಮುಡಿಪಾಗಿ ಇಟ್ಟಿದ್ದಾರೆ ಎಂದಿದ್ದಾರೆ.

ಕೊರೊನಾ ಈ ಸಂದರ್ಭದಲ್ಲಿ ನಾನು 30 ಜಿಲ್ಲೆ ಸುತ್ತಿದ್ದೇನೆ. ಈ ವೇಳೆ ಸುಮಾರು ವೈದ್ಯರನ್ನು ಮಾತನಾಡಿದ್ದೇನೆ.ಅವರೆಲ್ಲ ಧೈರ್ಯದಿಂದ ಚಿಕಿತ್ಸೆ ಕೊಡ್ತಾ ಇದ್ರು. ನಮಗೆ ಭರವಸೆ ತುಂಬಿದ್ದೇ ಅವರಲ್ಲಿದ್ದ ಧೈರ್ಯ. ನನ್ನ ಉಸಿರು ಇರುವವೆಗೂ ಅವರನ್ನು ನಾನು ಮರೆಯಲ್ಲ. ಅವರೆಲ್ಲ ಕಣ್ಣಿಗೆ ಕಂಡ ದೇವರು. ಎಲ್ಲ ವೈದ್ಯರಿಗೂ ಅವರ ಕುಟುಂಬಕ್ಕೂ ವೈದ್ಯ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.












Click it and Unblock the Notifications