ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡಕಿಗೆ ಓಗೊಡದ ಉತ್ತರ ಕರ್ನಾಟಕ ಜನತೆ: ಸಿಎಂ ಕೃತಜ್ಞತೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 2: ಉತ್ತರ ಕರ್ನಾಟಕದ ಕೆಲವು ಸಂಘಟನೆಗಳು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಮುಂದಾಗಿದ್ದರು ಜತೆಗೆ ಉತ್ತರ ಕರ್ನಾಟಕ ಬಂದ್‌ಗೂ ಕರೆನೀಡಿದ್ದರು, ಇದಕ್ಕೆ ಓಗೊಡದ ಜನತೆಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ದಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದೆ. ಸಮ್ಮಿಶ್ರ ಸರ್ಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದೆ. ಬಂದ್ ತಿರಸ್ಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ರಾಜ್ಯ ಸರ್ಕಾರ, ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸರ್ಕಾರದ ಮೂರು ಕಚೇರಿ ಬೆಳಗಾವಿಗೆ ಶಿಫ್ಟ್: ಎಚ್ಡಿಕೆ ಘೋಷಣೆ ಸರ್ಕಾರದ ಮೂರು ಕಚೇರಿ ಬೆಳಗಾವಿಗೆ ಶಿಫ್ಟ್: ಎಚ್ಡಿಕೆ ಘೋಷಣೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಹಿನ್ನೆಲೆಯಲ್ಲಿ ರೈತರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು.

HDK says thanks to north Karnataka people for not supporting separate movement

ಯಾರೂ ಸಹಾ ದಾರಿ ತಪ್ಪಿಸುವಂತಹ ವಿಚಾರಕ್ಕೆ ಹೋಗಬೇಡಿ. ಸರ್ಕಾರದ ಮೇಲೆ ವಿಶ್ವಾಸ ಇಡುವಂತೆ ಮನವಿ ಮಾಡುತ್ತೇನೆ, ಮುಂದಿನ ವಾರದಿಂದಲೇ ಪ್ರತಿ ಜಿಲ್ಲೆಗೆ ಎರೆಡೆರೆಡು ದಿನಗಳ ಕಾಲ ಭೇಟಿ ನೀಡಿ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ನೀಡಲಾಗುವುದು.

ಉತ್ತರ ಕರ್ನಾಟಕ ಪ್ರತ್ಯೇಕತೆ ಬೇಡ, ಅಭಿವೃದ್ಧಿ ಮಾಡಿ: ಕರವೇಉತ್ತರ ಕರ್ನಾಟಕ ಪ್ರತ್ಯೇಕತೆ ಬೇಡ, ಅಭಿವೃದ್ಧಿ ಮಾಡಿ: ಕರವೇ

ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಬಜೆಟ್‌ನಲ್ಲಿ ಒಂದೂವರ ಸಾವಿರ ಕೋಟಿ ಮೀಸಲಿಟ್ಟಿದ್ದ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದೆ ಈಗಲೂ ಕಕೂಡ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಬೇಡಿಕೆಗಳನ್ನು ಸ್ಪಂದಿಸಲು ಬದ್ಧನಿದ್ದೇನೆ ಆದರೆ ಸ್ವಲ್ಪ ಕಾಲಾವಕಾಶ ಬೇಕು ಹಾಗೂ ವ್ಯವಧಾನದಿಂದ ಯಾವತ್ತೂ ಪ್ರತ್ಯೇಕತೆಯ ಹೋರಾಟಕ್ಕೆ ಧುಮುಕಬಾರದು ಎಂದು ಮನವಿ ಮಾಡಿದರು.

English summary
Chief minister H.D. Kumaraswamy has thanked people of Karnataka who have not supported Karnataka Bandh call on Thursday seeking separate state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X