• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಕರ್ಣ ಎಂದ ಎಚ್ಡಿಕೆ,ಅಲ್ಲ ನೀವು ನಂಬಿಕೆ ದ್ರೋಹಿ ಎಂದ ಬಿಎಸ್‌ವೈ

By Nayana
|
   ಎಚ್ ಡಿ ಕುಮಾರಸ್ವಾಮಿಯನ್ನ ನಾನಾ ರೀತಿಯಲ್ಲಿ ನಿಂದಿಸಿದ ಬಿ ಎಸ್ ಯಡಿಯೂರಪ್ಪ | Oneindia Kannada

   ಬೆಂಗಳೂರು, ಜು.9: ವಿಧಾನಸಭೆಯಲ್ಲಿ ಸೋಮವಾರ ಕಾವೇರಿದ ಚರ್ಚೆ, ಇದಕ್ಕೆ ಕಾರಣವಾಗಿದ್ದು ರೈತರ ಚರ್ಚೆಯಲ್ಲ ಬದಲಾಗಿ ಮಾವು ಬೆಳಗಾರರ ಸಮಸ್ಯೆಯೂ ಅಲ್ಲ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಾಂದರ್ಭಿಕ ಶಿಶು ಎಂಬ ಟೀಕೆ ಇಡೀ ಚರ್ಚೆಗೆ ಕಾರಣವಾದರೆ, 12 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ಸಮ್ಮಿಶ್ರ ಸರ್ಕಾರ ಪೋಸ್ಟ್‌ಮಾರ್ಟಂ ಕೂಡ ಕಾವೇರಿದ ಚರ್ಚೆಗೆ ಕಾರಣವಾಯಿತು.

   ರಾಜ್ಯಪಾಲರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಮ್ಮನ್ನು ಸಾಂದರ್ಭಿಕ ಶಿಶುವೆಂದು ಟೀಕಿಸುತ್ತಿರುವವರಿಗೆ ಮಾರುತ್ತರ ನೀಡುತ್ತಾ ಮಹಾಭಾರತದಲ್ಲಿ ಕರ್ಣ ಕೂಡ ಸಾಂದರ್ಭಿಕ ಶಿಶುವಾಗಿದ್ದ ಆದರೆ ಕರ್ಣ ಯಾವತ್ತೂ ತನ್ನ ನಂಬಿದವರಿಗೆ ಮೋಸ ಮಾಡಲಿಲ್ಲ, ಬದಲಾಗಿ ತನ್ನ ಸೃಷ್ಟಿಸಿದ ತಾಯಿಗೆ ದ್ರೋಹಮಾಡಿ, ತನ್ನನ್ನು ತ್ಯಾಗ ಮಾಡಿದ ಎಂದು ತಮ್ಮನ್ನು ಕರ್ಣನಿಗೆ ಹೋಲಿಸಿಕೊಂಡು ಸಮ್ಮಿಶ್ರ ಸರ್ಕಾರದ ಪ್ರಸ್ತುತತೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಯತ್ನಿಸಿದರು.

   ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ, ಬೆಂಬಲ ಬೆಲೆ ಹೆಚ್ಚಳ

   ಇದಕ್ಕೆ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನೀವು ಸಾಂದರ್ಭಿಕ ಶಿಶು ಮಾತ್ರವಲ್ಲ ನೀವೊಬ್ಬ ನಂಬಿಕೆ ದ್ರೋಹಿ, 12 ವರ್ಷಗಳ ಹಿಂದೆ 2006ರಲ್ಲಿ ಸಮ್ಮಿಶ್ರ ನನನ್ನ ಜತೆ ಸರ್ಕಾರ ಸಚಿಸುವ ಮೊದಲೇ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಬೆನ್ನಿಗೆ ಚೂರಿ ಹಾಕಿದಿರಿ, ಅದಾದ ಬಳಿಕ 20 ತಿಂಗಳ ಮುಖ್ಯಮಂತ್ರಿಯಾದಿರಿ.

   ಬಜೆಟ್ ಕುರಿತ ಆರೋಪಕ್ಕೆ ಸದನದಲ್ಲಿ ಉತ್ತರ ಕೊಟ್ಟ ಕುಮಾರಸ್ವಾಮಿ

   HDK describes himself as Karna, BSY accuses him cheater

   ನಂತರ ನನಗೆ 20 ತಿಂಗಳ ಅವಧಿಯನ್ನು ಬಿಟ್ಟುಕೊಡಲಿಲ್ಲ. ಹೀಗೆ ನಿಮ್ಮ ರಕ್ತದಲ್ಲೇ ನಂಬಿಸಿ ಮೋಸ ಮಾಡುವ ಗುಣ ಇದೆ ಎಂದು ಟೀಕಿಸಿದರು.

   ಅವರ ಈ ಬಿರುಸಿನ ಮಾತುಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಆಕ್ರೋಶಕ್ಕೆ ಒಳಗಾದರು ನನ್ನ ರಕ್ತದ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ, ಯಾವ ಸಂದರ್ಭದಲ್ಲಿ ನಾನು ಸರ್ಕಾರ ರಚಿಸಿದ್ದೆ, ನನ್ನ ಮನೆಗೆ ಮಧ್ಯರಾತ್ರಿ ಬಂದು ಸಚಿವನಾಗಿ ಮಾಡಿದರೆ ಸಾಕೆಂದು ಗೋಗರಿದಿದ್ದರಿ ಅದೆಲ್ಲ ಮರೆತು ಈಗ ನನ್ನ ಬಗ್ಗೆ ಮಾತನಾಡುತ್ತಿದ್ದೀರಿ ಎಂದುರು.

   ಇದರ ಮಧ್ಯೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯಲು ಮುಂದಾದರು ಆಗ, ತಿರುಗೇಟು ನೀಡಿದ ಕುಮಾರಸ್ವಾಮಿ ನಾನಿದ್ದ ದೆಹಲಿ ಹೋಟೆಲ್‌ನಲ್ಲಿ ಕೊಠಡಿಗೆ ಬಂದಿದ್ದಿರಿ ಆವಾಗ ಏನು ಮಾತಾಡಿದ್ದಿರಿ ಎಂದು ಹೇಳಿದರೆ ಈ ನಿಮಗೆ ಸಮಸ್ಯೆಯಾಗುತ್ತಿದೆ ಈ ರೀತಿ ಹಲವಾರುವಿಚಾರ ನನಗೆ ಗೊತ್ತಿದೆ . ನನ್ನ ಹಿನ್ನೆಲೆ ಮತ್ತು ನನ್ನ ಚಾರಿತ್ರ್ಯದ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಿ ಎಂದು ಎಚ್ಚರಿಕೆ ನೀಡಿದರು.

   ಆಗ ಮಧ್ಯೆ ಪ್ರವೇಶಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌ ಇಬ್ಬರು ನಾಯಕರಿಗೆ ತಿಳಿಹೇಳಿ ಆವೇಶದಿಂದ ಮಾತನಾಡಿದರೆ ಇಬ್ಬರ ಮರ್ಯಾದೆಯೂ ಹೋಗುತ್ತದೆ. ಸದನದಲ್ಲಿ ಘನತೆ ಹಾಗೂ ಗೌರವಕ್ಕೆ ತಕ್ಕಂತೆ ಮಾತನಾಡಬೇಕು ಎಂದು ತಿಳಿ ಹೇಳಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಬೆಂಗಳೂರು ಸುದ್ದಿಗಳುView All

   English summary
   Chief minister HD kumaraswamy has himself described as Karna of Mahabharath, who was sacrifice his soul for his own people. but Former chief minister and opposition leader BS Yeddyurappa accused HD kumaraswamy as Cheater not transferred his power to latter in 2006 coalition government.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more