ಕುಮಾರಸ್ವಾಮಿ ಮೊದಲು ಭ್ರಮೆಯಿಂದ ಹೊರಗೆ ಬನ್ನಿ ಎಂದ ಕಾಂಗ್ರೆಸ್

ಬೆಂಗಳೂರು, ಅಕ್ಟೋಬರ್ 28: ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಮನಸ್ಸಿದ್ದೋ ಅಥವಾ ಇಲ್ಲದೆಯೋ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಕೈಜೋಡಿಸಿತ್ತು.

ಕಾಂಗ್ರೆಸ್ ಒಳಗಿನ ಕಿತ್ತಾಟವೇ ಕೊನೆಗೆ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ಮತ್ತೆ ಉಪ ಚುನಾವಣೆ ಹತ್ತಿರ ಬಂದಿದೆ. ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೋರಾಡುವ ಯಾವುದೇ ಆಸೆ ಇದ್ದಂತಿಲ್ಲ.

ಆದರೆ ಜೆಡಿಎಸ್ ಮಾತ್ರ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾದಂತಿದೆ. ಜೊತೆಗೆ ಈಗ ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಮಾಡಿರುವ ಕೆಲವು ಪೋಸ್ಟ್‌ಗಳು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಹೊಸ ಅಹಿಂದ ನಾಯಕ ಬೇಕು ಎನ್ನುವ ಒತ್ತಾಯವನ್ನು ಪರೋಕ್ಷವಾಗಿ ಮಾಡಿದಂತಿದೆ.

ಇದೀಗ ಯೂಥ್ ಕಾಂಗ್ರೆಸ್ ತಲೆಯಲ್ಲಿ ಹೀಗೆ ಓಡುತ್ತಿರಬಹುದಾ?

ಇದೀಗ ಯೂಥ್ ಕಾಂಗ್ರೆಸ್ ತಲೆಯಲ್ಲಿ ಹೀಗೆ ಓಡುತ್ತಿರಬಹುದಾ?

ಡಿಕೆ ಶಿವಕುಮಾರ್ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕೆಪಿಸಿಸಿ ಕಚೇರಿಯವರೆಗೆ ತೆರಳುತ್ತಿದ್ದ ಮೆರವಣಿಗೆ ಸಂದರ್ಭದಲ್ಲಿ ಜೆಡಿಎಸ್ ಬಾವುಟವನ್ನು ಹಿಡಿದಿದ್ದು ಕಾಂಗ್ರೆಸ್ ನಾಯಕರನ್ನು ಕೆಣಕಿದಂತಾಗಿತ್ತು. ಹಾಗೆಯೇ ಒಕ್ಕಲಿಗರೆಲ್ಲರೂ ಜೆಡಿಎಸ್‌ಗೆ ಬೆಂಬಲ ನೀಡುತ್ತಾರೆ, ಲಿಂಗಾಯತರೆಲ್ಲರೂ ಯಡಿಯೂರಪ್ಪ ಅವರಿಗೆ ಬೆಂಬಲ ನೀಡುತ್ತಾರೆ ಎನ್ನುವುದೆಲ್ಲಾ ಸುಳ್ಳು ಅಹಿಂದ ಮಾತ್ರ ನಮ್ಮ ಜೊತೆ ಇದೆ ಎಂದು ನಂಬಿರುವ ರೀತಿ ಕಾಣುತ್ತಿದೆ.

ಭ್ರಮೆಯಿಂದ ಹೊರಬನ್ನಿ ಸಾರ್

ಭ್ರಮೆಯಿಂದ ಹೊರಬನ್ನಿ ಸಾರ್

ಜಾತ್ಯಾತೀತ ಮೌಲ್ಯಗಳನ್ನು ಪಾಲಿಸುವ ಜೆಡಿಎಸ್ ಪಕ್ಷ ಅಧಿಕಾರಕ್ಕಾಗಿ ಎಂದಿಗೂ ಕೋಮುವಾದಿ ಪಕ್ಷಗಳ ಜೊತೆ ಕೈ ಜೋಡಿಸುವುದಿಲ್ಲ, ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುವುದಿಲ್ಲ, ಜೆಡಿಎಸ್ ಒಕ್ಕಲಿಗ ನಾಯಕರನ್ನು ಬೆಳೆಸುತ್ತದೆ, ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ , ನಿಖಿಲ್ ಕುಮಾರಸ್ವಾಮಿವರಿಗಿಂತ ಹಿರಿಯ ನಾಯಕ ಜೆಡಿಎಸ್ ನಲ್ಲಿ ಮತ್ತೊಬ್ಬರಿಲ್ಲ, ಹೀಗಾಗಿ ಕುಮಾರಸ್ವಾಮಿಯ ನಂತರ ಅವರೇ ಜೆಡಿಎಸ್ ನ ಸಿ.ಎಂ.ಅಭ್ಯರ್ಥಿ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಯೂಥ್ ಕಾಂಗ್ರೆಸ್ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದೆ.

ಹಬ್ಬದ ದಿನವೇ ಕಾಂಗ್ರೆಸ್ ಜಾಲತಾಣದಲ್ಲಿ ಹೀಗೊಂದು ಪೋಸ್ಟ್‌

ಹಬ್ಬದ ದಿನವೇ ಕಾಂಗ್ರೆಸ್ ಜಾಲತಾಣದಲ್ಲಿ ಹೀಗೊಂದು ಪೋಸ್ಟ್‌

ಒಂದು ಕಡೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಹಾರ್ ಜೈಲಿನವರೆಗೂ ಡಿಕೆ ಶಿವಕುಮಾರ್ ಭೇಟಿ ಮಾಡಲು ತೆರಳಿದ್ದು, ಹಾಗೆಯೇ ಡಿಕೆ ಶಿವಕುಮಾರ್ ಬಿಡುಗಡೆಯಾದ ಬಳಿಕ ಏರ್‌ಪೋರ್ಟ್‌ವರೆಗೂ ಆಗಮಿಸಿದ್ದು ನೋಡಿದರೆ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿಗೆ ಒಲವು ಇದ್ದಂತೆ ತೋರುತ್ತದೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಕಿಂಚಿತ್ತೂ ಇಷ್ಟವಿಲ್ಲ ಎಂಬುದು ಕೂಡ ಸಾಬೀತಾಗುತ್ತಿದೆ. ಹಬ್ಬದ ದಿನ ಬೆಳ್ಳಂಬೆಳಗ್ಗೆಯೇ ಹೊಸ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್ ಯಾವುದೇ ಜಾತಿಯನ್ನಲ್ಲ ಅಹಿಂದದಲ್ಲಿ ನಂಬಿಕೆ ಇಟ್ಟಿರುವಂತೆ ಗೋಚರಿಸುತ್ತಿದೆ.

ಎಚ್ಡಿಕೆ ಕುಟುಂಬ ರಾಜಕಾರಣದ ಬಗ್ಗೆ ಮಾತು

ಎಚ್ಡಿಕೆ ಕುಟುಂಬ ರಾಜಕಾರಣದ ಬಗ್ಗೆ ಮಾತು

ಇವರು ಇವರ ಕುಟುಂಬಕ್ಕೆ ಅಧಿಕಾರ ಎಂದೂ ಮುಖ್ಯವಾಗಿಲ್ಲ. ಇವರದ್ದು ಜಾತ್ಯಾತೀತ ಪಕ್ಷ, ಇವರು ಎಂದೂ ಕುಟುಂಬ ರಾಜಕಾರಣ ಮಾಡುವುದಿಲ್ಲ, ಕುಮಾರಸ್ವಾಮಿ ಬಹುಮತ ಪಡೆದು ಸಿಎಂ ಆಗಿದ್ದರು ಜೆಡಿಎಸ್ ಪಕ್ಷ ತನ್ನ, ನಾಯಕರನ್ನು ಬೆಳೆಸುತ್ತದೆ.

ಕುಮಾರಸ್ವಾಮಿ ಎಂದಿಗೂ ತಮ್ಮ ಜಾತ್ಯಾತೀತ ಮೌಲ್ಯಗಳನ್ನು ಬಿಟ್ಟು ಕೋಮುವಾದಿ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+