ಆರ್.ಅಶೋಕ್‌ಗೆ ಮತ್ತೆ ನಿರಾಳ: ಹೈಕೋರ್ಟ್‌ನಿಂದ ತಡೆಯಾಜ್ಞೆ
ಬೆಂಗಳೂರು, ಸೆ.26:ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧದ ಎಸಿಬಿ ತನಿಖೆಗೆ ಹೈಕೋರ್ಟ್ ಮತ್ತೆ ಐದು ವಾರಗಳ ತಡೆಯಾಜ್ಞೆ ನೀಡಿದ್ದು, ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರಿನ ಸೋಮನಹಳ್ಳಿಯಲ್ಲಿ 8 ಎಕರೆ ಬಗರ್ ಹುಕುಂ ಭೂಮಿ ಅಕ್ರಮವಾಗಿ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ. ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಮಂಗಳವಾರ ಅಸ್ತು ಎಂದಿತ್ತು.
ಮಂಗಳವಾರವಷ್ಟೇ ಅರ್ಜಿಯನ್ನು ವಜಾಗೊಳಿಸಿ ತನಿಖೆ ನಡೆಸಲು ಹಸಿರು ನಿಶಾನೆ ತೋರಿದ್ದ ಹೈಕೋರ್ಟ್ ಇದೀಗ ಅಶೋಕ್ ಪರ ವಕೀಲ ಕೋರ್ಟ್ ಗೆ ಹಾರಾಗಿ ಮಂಗಳವಾರ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ, ಅಲ್ಲಿಯವರೆಗೆ ಎಫ್‌ಐಆರ್ ಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ನ್ಯಾಪೀಠ ಇದನ್ನು ಮಾನ್ಯ ಮಾಡಿದೆ.

ಬೆಂಗಳೂರು ಉತ್ತರ ತಾಲೂಕಿನ ಭೂ ಪರಿವರ್ತನೆ ಸಮಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆರ್ ಅಶೋಕ್ ಸೋಮನಹಳ್ಳಿಯ ಬಗರ್ ಹುಕುಂ ಭೂಪ್ರದೇಶದಲ್ಲಿ 8 ಎಕರೆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದಾಗಿ ಆರೋಪಿಸಲಾಗಿತ್ತು.2004ರಲ್ಲಿ ಆರ್ ಅಶೋಕ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು.
ಈ ಅವಧಿಯಲ್ಲಿ ಹಾಲಿ ಮೇಯರ್ ಆಗಿರುವ ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿಗೆ ಉತ್ತರ ಹಳ್ಳಿ ಸಮೀಪದ ಸುಮನಹಳ್ಳಿಯಲ್ಲಿ 8 ಎಕರೆ ಜಮೀನನ್ನು ಅಶೋಕ್ ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ವಿರುದ್ಧ ಸೆಕ್ಷನ್ 13(1)(c), 13(1)(d), 13(2) ಐಪಿಸಿ 420 & 120(b) ಅಡಿಯಲ್ಲಿ ದೂರು ದಾಖಲಾಗಿತ್ತು.












Click it and Unblock the Notifications