ಸ್ವಾಯತ್ತತೆ ಕಳೆದುಕೊಂಡ ಎಚ್‌ಎಎಲ್ ಇನ್ನು ವಾಯುಪಡೆಯ ಸ್ವತ್ತು
ಬೆಂಗಳೂರು, ಆಗಸ್ಟ್ 6: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಬೆಂಗಳೂರು ವಿಭಾಗವನ್ನು ಭಾರತೀಯ ವಾಯುಪಡೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಲಘು ಸಮರ ವಿಮಾನವನ್ನು ದೇಶೀಯವಾಗಿಯೇ ಉತ್ಪಾದಿಸುವ ಯೋಜನೆಯ ವೆಚ್ಚ ಮತ್ತು ವಿಳಂಬ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಎಲ್‌ಸಿಎ ಯೋಜನೆಯ ಮುಂದಿನ ಹಂತ ಅಂದರೆ ಎಂಕೆ 2 ಮಾದರಿಯ ನಿರ್ಮಾಣ ಕಾರ್ಯ ಅನುಷ್ಠಾನಗೊಳ್ಳುವ ಸೂಕ್ಷ್ಮ ಸನ್ನಿವೇಶದಲ್ಲಿ ಈ ಬದಲಾವಣೆ ಕಂಡುಬಂದಿದೆ.ಸ್ವಾಯತ್ತ ಸ್ಥಾನಮಾನಕ್ಕೆ ಕುತ್ತು ಬರಬಹುದೆಂಬ ಭೀತಿಯಿಂದಾಗಿ, ವಿಮಾನ ನಿರ್ಮಾಣ ವಿಭಾಗ ಹಸ್ತಾಂತರವನ್ನು ಎಚ್‌ಎಎಲ್ ವಿರೋಧಿಸುತ್ತಾ ಬಂದಿತ್ತು.
ಆದರೂ ಎಚ್‌ಎಎಲ್‌ಗೆ ನಿಗಧಿತ ಅವಧಿ ಮತ್ತು ವೆಚ್ಚದಲ್ಲಿ ಸೇನೆಗೆ ಸಮರ ವಿಮಾನ, ಕ್ಯಾಪ್ಟರ್‌ಗಳನ್ನು ಒದಗಿಸುವುದು ಕಷ್ಟಸಾಧ್ಯವಾಗಿತ್ತು. ಇದಕ್ಕೆ ವೃತ್ತಿಪರತೆ ಕೊರತೆ ಕಾರಣ ಎಂಬ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.

ಎಚ್‌ಎಎಲ್‌ನ ಬೆಂಗಳೂರು ಸಂಕೀರ್ಣವನ್ನು ಐಎಎಫ್‌ಗೆ ಹಸ್ತಾಂತರಿಸುವಂತೆ ಸರ್ಕಾರ ಸೂಚಿಸಿದೆ. ಇದರೊಂದಿಗೆ ಎಚ್‌ಎಎಲ್‌ನ ವಿಮಾನ ನಿರ್ಮಾಣ ವಿಭಾಗ ಐಎಎಫ್ ಅಧೀನ ಸೇರ್ಪಡೆ ಆದಂತಾಗಿದೆ. ಈ ಹಸ್ತಾಂತರ ಪ್ರಕ್ರಿಯೆಗೆ ಕೆಲವು ತಿಂಗಳು ತಗುಲಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಂಶೋಧನೆ ಅಭೀವೃದ್ಧಿ ಸಂಘಟನೆ ಅಧೀನದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ, ಏರೋನಾಟಿಕಲ್ ಡೆವಲಾಪ್‌ಮೆಂಟ್, ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್‌ಮೆಂಟ್ ಸಂಸ್ಥೆಗಳನ್ನು ಸೀಘ್ರವೇ ವಾಯುಪಡೆ ಸಿಬ್ಬಂದಿ ಮುಖ್ಯಸ್ಥರ ನೇರ ಹಿಡಿತಕ್ಕೆ ತರಲು ಸರ್ಕಾರ ನಿರ್ಧರಿಸಿದೆ.












Click it and Unblock the Notifications