ಕಳ್ಳನೆಂದು ಭಾವಿಸಿ ಬ್ಯಾಂಕ್ ಉದ್ಯೋಗಿಯನ್ನು ಕೊಲೆ ಮಾಡಿದ್ದ ಸೆಕ್ಯುರಿಟಿ ಗಾರ್ಡ್ ಸೆರೆ
ಬೆಂಗಳೂರು, ಜು. 10: ಕಳ್ಳನೆಂದು ಭಾವಿಸಿ ಬ್ಯಾಂಕ್ ಉದ್ಯೋಗಿಯ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ ಸೆಕ್ಯುರಿಟಿ ಗಾರ್ಡ್‌ನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಶ್ಯಾಮನಾಥ ರೀ ಬಂಧಿತ ಸೆಕ್ಯುರಿಟಿ ಗಾರ್ಡ್. ಈತ ಇದೇ ಜು. 05 ರಂದು ರಾತ್ರಿ ಮಾರತಹಳ್ಳಿ ಸಮೀಪ ಸಿಟಾಟೆಲ್ ಅಪಾರ್ಟ್ ಮೆಂಟ್‌ನಲ್ಲಿ ಅಪರಿಚಿತ ವ್ಯಕ್ತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದ. ಕೊಲೆಯಾದ ಬಳಿಕ ತಲೆ ಮರೆಸಿಕೊಂಡಿದ್ದ ಶ್ಯಾಮನಾಥ್ ರೀ ಎಂಬಾತನನ್ನು ಎಚ್‌ಎಎಲ್ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಆಕಸ್ಮಿಕ ಕಗ್ಗೊಲೆ: ಛತ್ತೀಸಘಡ ಮೂಲದ ಬ್ಯಾಂಕ್ ಉದ್ಯೋಗಿ ಟ್ರೈನಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಜು. 05 ರಂದು ರಾತ್ರಿ ಸ್ನೇಹಿತರ ಪಾರ್ಟಿ ಮಾಡಿದ್ದ. ಆ ಬಳಿಕ ಒಬ್ಬನೇ ನಡೆದುಕೊಂಡು ಸ್ನೇಹಿತನ ಮನೆಗೆ ತೆರಳಿದ್ದ.

ಮೊಬೈಲ್‌ನಲ್ಲಿ ಅಡ್ರೆಸ್ ಕೇಳುತ್ತಾ ಹೋಗಿದ್ದ. ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್ ಆಫ್ ಆಗಿ ಗೊಂದಲ ಶುರುವಾಗಿತ್ತು. ದಾರಿ ತಪ್ಪಿ ಬೇರೆಯದ್ದೇ ಅಪಾರ್ಟ್ ಮೆಂಟ್‌ಗೆ ಹೋಗಿದ್ದ.
Recommended Video
ಅಪಾರ್ಟ್ ಮೆಂಟ್ ಒಳಗೆ ಅಪರಿಚಿತ ವ್ಯಕ್ತಿ ಬರುವುದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್, ಆತನನ್ನು ಪ್ರಶ್ನೆ ಮಾಡಿದ್ದಾನೆ. ಯಾರು ನೀನು? ಯಾಕೆ ಇಷ್ಟೊತ್ತಲ್ಲಿ ಬಂದಿದ್ಧೀಯ ಎಂದು ಎಷ್ಟೇ ಕೇಳಿದ್ರೂ ಛತ್ತೀಸ್ ಘಡ ಮೂಲದ ವ್ಯಕ್ತಿ ಬಾಯಿ ಬಿಟ್ಟಿಲ್ಲ. ಬದಲಿಗೆ ಅಪರಿಚಿತನ ಮನೆಗೆ ನುಗ್ಗಲು ಯತ್ನಿಸಿದ್ದಾನೆ. ಕಳ್ಳನಿರಬಹುದು ಎಂದು ಭಾವಿಸಿ ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ. ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ಎಚ್‌ಎಎಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ತಲೆ ಮರೆಸಿಕೊಂಡಿದ್ದ ಶ್ಯಾಮನಾಥ್ ಎಂಬಾತನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications