ಆಫ್‌ಸೆಟ್ ಉತ್ಪಾದನೆಯ ಪಾಲುದಾರಿಕೆ ಇಲ್ಲ: ಎಚ್‌ಎಎಲ್ ಸ್ಪಷ್ಟನೆ

ಬೆಂಗಳೂರು, ನವೆಂಬರ್ 7: ಯಾವುದೇ ಮೂಲ ಸಾಧನ ತಯಾರಕಾ ಕಂಪೆನಿಯ ಆಫ್‌ಸೆಟ್ ಪಾಲುದಾರನಾಗಲು ಇಚ್ಛಿಸಿಲ್ಲ. ಆದರೆ, ವಿಮಾನಗಳ ತಯಾರಿಕೆಯ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆ ಪಾಲುದಾರನಾಗಲು ಬಯಸಿರುವುದಾಗಿ ಎಚ್‌ಎಎಲ್ ತಿಳಿಸಿದೆ.

ರಫೇಲ್ ಒಪ್ಪಂದದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಡಸಾಲ್ಟ್ ಏವಿಯೇಷನ್‌ನ ಬಿಡಿಭಾಗಗಳ ತಯಾರಿಕೆಯ ಪಾಲುದಾರನಾಗಿತ್ತೇ ಎಂಬ ಪ್ರಶ್ನೆಗೆ ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದೇ ಮೂಲ ಸಾಧನ ತಯಾರಿಕಾ ಕಂಪೆನಿಯ ಪಾಲುದಾರನಾಗಲು ನಾವು ಸ್ಪರ್ಧಿಸುತ್ತಿಲ್ಲ. ಅದರ ಬದಲು ಯುದ್ಧ ವಿಮಾನಗಳ ತಯಾರಿಕೆಯ ಸಂಪೂರ್ಣ ತಂತ್ರಜ್ಞಾನ ಹಂಚಿಕೆಯ ಪಾಲುದಾರಿಗೆ ಪಡೆದುಕೊಳ್ಳಲು ಮಾತ್ರ ಎಚ್‌ಎಎಲ್ ಬಯಸುತ್ತದೆ ಎಂದಿದ್ದಾರೆ.

ಇದರಿಂದ ರಫೇಲ್ ಯುದ್ಧ ವಿಮಾನ ತಯಾರಿಕೆಯಲ್ಲಿ ಪಾಲುದಾರಿಕೆ ವಹಿಸುವುದಿಲ್ಲ ಎಂದು ಎಚ್‌ಎಎಲ್‌ ಸ್ಪಷ್ಟಪಡಿಸಿದಂತಾಗಿದೆ.

ತಂತ್ರಜ್ಞಾನ ವರ್ಗಾವಣೆ

ತಂತ್ರಜ್ಞಾನ ವರ್ಗಾವಣೆ

ವಿಮಾನಗಳು, ಹೆಲಿಕಾಪ್ಟರ್‌ಗಳು, ಅದಕ್ಕೆ ಸಂಬಂಧಿಸಿದ ಬಿಡಿಭಾಗಗಳು ಮತ್ತು ಅವುಗಳ ದುರಸ್ತಿ ಹಾಗೂ ನಿರ್ವಹಣೆಯ ಮೇಲೆ ಎಚ್‌ಎಎಲ್ ಗಮನ ಹರಿಸುತ್ತದೆ. ಆಫ್‌ಸೆಟ್ ವ್ಯವಹಾರಗಳನ್ನು ನಡೆಸಲು ಇಚ್ಛಿಸುತ್ತಿಲ್ಲ. ತಂತ್ರಜ್ಞಾನ ವರ್ಗಾವಣೆಯ ಮೂಲಕ ವಿಮಾನ ತಯಾರಿಕೆ ಮಾಡುವುದು ಆಫ್‌ಸೆಟ್ಸ್‌ ತಯಾರಿಕೆಗಿಂತಲೂ ವಿಭಿನ್ನ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಬೇರೆ ಆಫ್‌ಸೆಟ್ ಮುಂದುವರಿಯಲಿದೆ

ಬೇರೆ ಆಫ್‌ಸೆಟ್ ಮುಂದುವರಿಯಲಿದೆ

ವಿವಿಧ ಯೋಜನೆಗಳ ಆಫ್‌ಸೆಟ್ ವ್ಯವಹಾರಗಳನ್ನು ಎಚ್‌ಎಎಲ್‌ನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಅದೇ ಪ್ರಮುಖ ವ್ಯವಹಾರವಾಗಿ ನಡೆಯುತ್ತಿಲ್ಲ. ಈ ರೀತಿಯ ಆಫ್‌ಸೆಟ್ ಉತ್ಪಾದನಾ ಚಟುವಟಿಕೆಗಳನ್ನು ಎಚ್‌ಎಎಲ್ ಮುಂದುವರಿಸಲಿದೆ ಎಂದು ಮಾಧವನ್ ತಿಳಿಸಿದ್ದಾರೆ.

ರಫೆಲ್ ಒಪ್ಪಂದದ ಭಾಗವಲ್ಲ

ರಫೆಲ್ ಒಪ್ಪಂದದ ಭಾಗವಲ್ಲ

ಇದಕ್ಕೂ ಮುನ್ನ ನ.2ರಂದು ಮಾತನಾಡಿದ್ದ ಮಾಧವನ್, ನಾವು ರಫೇಲ್ ಒಪ್ಪಂದದ ವ್ಯವಹಾರದಿಂದ ಸಂಪೂರ್ಣವಾಗಿ ಹೊರಗಿದ್ದೇವೆ. ಒಂದು ಸಮಯದಲ್ಲಿ ನಾವು ಅದರ ಭಾಗವಾಗಿದ್ದೆವು. ಅದು ಸರ್ಕಾರದಿಂದ ನೇರವಾಗಿ ನಡೆಯುವ ಖರೀದಿ. ಅದರ ಬೆಲೆ ಮತ್ತು ನೀತಿ ಬದಲಾವಣೆ ಬಗ್ಗೆ ನಾವು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದಿದ್ದರು.

ರಿಲಯನ್ಸ್‌ಗೆ ಲಾಭದ ಆರೋಪ

ರಿಲಯನ್ಸ್‌ಗೆ ಲಾಭದ ಆರೋಪ

ಎಚ್‌ಎಎಲ್‌ಗೆ ವಿಮಾನ ತಯಾರಿಕೆಯ ಸಾಮರ್ಥ್ಯವಿದ್ದರೂ ಡಸಾಲ್ಟ್ ಕಂಪೆನಿಯ ಆಫ್‌ಸೆಟ್ ತಯಾರಿಕೆಯ ಪಾಲುದಾರಿಕೆಯನ್ನು ಅದಕ್ಕೆ ನೀಡದೆ ಲಾಬಿ ಮಾಡುವ ಮೂಲಕ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಂಬಾನಿ ಸಮೂಹಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ ಎಂದು ಅದು ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+