H-1B Visa: ಬೆಂಗಳೂರಿನ ಮೇಲೆ ಏನೆಲ್ಲಾ ಪರಿಣಾಮ ಆಗಲಿದೆ, ವಿಮಾನ ಸೇವೆಗೂ ಆರ್ಥಿಕ ಸಂಕಷ್ಟ!
H-1B Visa: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದಲ್ಲಿನ ವಲಸೆ ನೀತಿಯನ್ನು ತಡೆಯುವ ಉದ್ದೇಶದಿಂದ ಹಾಗೂ ಅಮೆರಿಕಾದಲ್ಲಿ ಐಟಿ ಉದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು ಸೇರಿದಂತೆ ಹಲವು ಕಾರಣಗಳಿಗೆ H-1B Visa ಎಚ್1ಬಿ ವೀಸಾದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಈ ಬದಲಾವಣೆಯು ಭಾರತದ ಮೇಲೆ ಅದರಲ್ಲೂ ಐಟಿ ಹಬ್ ಮತ್ತು ಸಿಲಿಕಾನ್ ಸಿಟಿ ಎನ್ನುವ ಖ್ಯಾತಿ ಮತ್ತು ಹೆಗ್ಗಳಿಕೆಯನ್ನು ಗಳಿಸಿರುವಂತಹ ಬೆಂಗಳೂರಿನ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಲಾಗಿದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಣಯವು ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ. ಭಾರತ ಹಾಗೂ ಬೆಂಗಳೂರಿನ ಮೇಲೆ ಯಾವೆಲ್ಲಾ ಪರಿಣಾಮವನ್ನು ಇದು ಉಂಟು ಮಾಡಲಿದೆ. ಅಲ್ಲದೇ ಆರ್ಥಿಕ ನಷ್ಟಕ್ಕೆ ಇದು ಯಾವ ರೀತಿ ಕಾರಣವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇಕ್ ಅಮೆರಿಕಾ ಗ್ರೇಟ್ (ಮತ್ತೆ ಅಮೆರಿಕಾ ಗ್ರೇಟ್ / ಅಮೆರಿಕಾದ ವರ್ಚಸ್ಸು ಮರಳಿ ತರೋಣ) ಎನ್ನುವ ಸಂಕಲ್ಪದೊಂದಿಗೆ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಭಾರತವು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಪರಿಣಾಮವನ್ನು ಬೀರುತ್ತಿದೆ. H-1B ವೀಸಾ ಶುಲ್ಕದಲ್ಲಿನ ಇತ್ತೀಚಿನ ಗಮನಾರ್ಹ ಹೆಚ್ಚಳವು ಬೆಂಗಳೂರು ಮತ್ತು ಇತರ ಭಾರತೀಯ ನಗರಗಳಿಗೆ ಪೆಟ್ಟುಕೊಡಲಿದೆ. ಭಾರತದ ಬುದ್ಧಿವಂತ ಹಾಗೂ ಅತ್ಯುನ್ನತ ಕೌಶಲ್ಯದ ಉದ್ಯೋಗಿಗಳನ್ನು ಅಮೆರಿಕಾಗೆ ಅಲ್ಲಿನ ಕಂಪನಿಗಳು ಈ ವೀಸಾದ ಅಡಿಯಲ್ಲಿ ಕರೆಸಿಕೊಳ್ಳುವುದಕ್ಕೆ ಅವಕಾಶ ಇತ್ತು.
ಬೆಂಗಳೂರಿನಲ್ಲಿ ಸ್ಥಳೀಯ ಬೆಳವಣಿಗೆ ಮತ್ತು ಪ್ರತಿಭಾವಂತರ ಪ್ರೋತ್ಸಾಹಕ್ಕೆ ಈ ನಿರ್ಧಾರದಿಂದ ಹಿನ್ನಡೆ ಆಗಲಿದೆ. ಪ್ರಸ್ತುತ H-1B ಹೊಂದಿರುವವರು ಮತ್ತು ಅವರ ಕುಟುಂಬಗಳಿಗೆ ಭಾರೀ ತೊಂದರೆ ಮತ್ತು ಆರ್ಥಿಕ ಒತ್ತಡವನ್ನು ಉಂಟುಮಾಡುತ್ತದೆ.
H-1B ಶುಲ್ಕ ಹೆಚ್ಚಳವು ಬೆಂಗಳೂರಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ?
US ನಲ್ಲಿ H-1B ವೀಸಾಗಳನ್ನು ನೀಡುವ ಅಥವಾ ಅದಕ್ಕೆ ಆರ್ಥಿಕ ನೆರವು ನೀಡುವ ಹೆಚ್ಚಿನ ವೆಚ್ಚವು ಕಂಪನಿಗಳು ಅಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಹೆಚ್ಚು ದುಬಾರಿಯಾಗಿದೆ. ಇದು ಅವರ ಆಫ್‌ಶೋರಿಂಗ್ ತಂತ್ರಗಳನ್ನು ವೇಗಗೊಳಿಸಲು ಮತ್ತು ಹೆಚ್ಚು ಭಾರತೀಯರನ್ನು ನೇಮಿಸಿಕೊಳ್ಳುವುದಕ್ಕೂ ಸಹಕಾರಿಯಾಗಿತ್ತು. ವಿಶೇಷವಾಗಿ ಬೆಂಗಳೂರಿಗರಿಗೆ ಇದು ವರದಾನವಾಗಿತ್ತು.
ಇನ್ನು ಈ ಬದಲಾವಣೆಯು ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಭಾರತದ ತಂತ್ರಜ್ಞಾನ ಕೇಂದ್ರಗಳಲ್ಲಿ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಆದರೆ ಉದ್ಯೋಗ ನಷ್ಟ ಅಥವಾ ಐಟಿ ವಲಯದಲ್ಲಿ ಉದ್ಯೋಗ ಒತ್ತಡವನ್ನು ಸೃಷ್ಟಿ ಮಾಡಲಿದೆ. ಅಲ್ಲದೇ ವಿದೇಶಿ ವಿನಿಮಯ ಹಣವೂ ಇಳಿಕೆಯಾಗಲಿದೆ.
ಹೆಚ್ಚಿನ ವೀಸಾ ಶುಲ್ಕಗಳು ಮತ್ತು ಉದ್ಯೋಗ ನಷ್ಟದ ಸಾಧ್ಯತೆಯನ್ನು ಸೃಷ್ಟಿಸಲಿದೆ. ಇನ್ನು ಬೆಂಗಳೂರಿನ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಪ್ರಯಾಣ ಹೆಚ್ಚಾಗಿ ಮಾಡುತ್ತಿದ್ದರು. ವಿಮಾನ ಸೇವೆಯಿಂದ ಆರ್ಥಿಕ ವಹಿವಾಟು ಹಾಗೂ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳೂ ಸಹ ವೇಗ ಪಡೆದುಕೊಂಡಿತ್ತು. ಆದರೆ ಇದೀಗ ಅಮೆರಿಕಾಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದ್ದು. ಇದು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications