ಆ.5ರಿಂದ ಜಿಮ್ ಓಪನ್; ಈ ನಿಯಮ ತಪ್ಪದೇ ಪಾಲಿಸಿ
ಬೆಂಗಳೂರು, ಜುಲೈ 30 : ಕೇಂದ್ರ ಗೃಹ ಇಲಾಖೆ ಅನ್ ಲಾಕ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಗಸ್ಟ್ 5ರಿಂದ ಜಿಮ್‌ಗಳನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಜಿಮ್ ಬಾಗಿಲು ತೆರೆಯುತ್ತಿದೆ.
Recommended Video
ಬೆಂಗಳೂರು ನಗರದಲ್ಲಿ ಜಿಮ್‌ಗಳನ್ನು ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರವೇ ಹಲವು ಜಿಮ್‌ಗಳಲ್ಲಿ ಸ್ಯಾನಿಟೈಸ್ ಕೆಲಸಗಳು ನಡೆಯುತ್ತಿವೆ. "ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ" ಎಂದು ಮಾಲೀಕರು ಹೇಳಿದ್ದಾರೆ.

ಜಿಮ್‌ಗಳಿಗೆ ಬರುವ ಪ್ರತಿಯೊಬ್ಬರೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು. ಜಿಮ್‌ಗಳ ಪ್ರವೇಶ ದ್ವಾರದಲ್ಲಿಯೇ ದೇಹದ ಉಷ್ಣತೆ ಪರಿಶೀಲನೆ ಮಾಡಲಾಗುತ್ತದೆ. ಜಿಮ್ ಪ್ರವೇಶಕ್ಕೂ ಮುನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಬುಧವಾರ ಕೇಂದ್ರ ಗೃಹ ಇಲಾಖೆ ಪ್ರಕಟಿಸಿದ ಮಾರ್ಗಸೂಚಿ ಅನ್ವಯ ಜಿಮ್, ಯೋಗ ಕಲಿಸುವ ಕೇಂದ್ರಗಳು ಆಗಸ್ಟ್ 5ರಿಂದ ಬಾಗಿಲು ತೆರೆಯಲಿವೆ. ಇದಕ್ಕೂ ಮೂರು ದಿನ ಮೊದಲು ಸ್ಯಾನಿಟೈಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರಬೇಕು.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿರುವುದು ಬೆಂಗಳೂರಿನಲ್ಲಿ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51,091ಕ್ಕೆ ಏರಿಕೆಯಾಗಿದೆ. 36,224 ಸಕ್ರಿಯ ಪ್ರಕರಣಗಳು ನಗರದಲ್ಲಿವೆ.












Click it and Unblock the Notifications