Gym Trainer: ಹೆಚ್ಚು ಸಮಯ ಕೊಡುತ್ತಿಲ್ಲವೆಂದು ಮನೆ ತೊರೆದ ಪತ್ನಿಗೆ ಹೆದರಿಸಲು ಹೋಗಿ ಸಾವನ್ನಪ್ಪಿದ ಜಿಮ್ ಟ್ರೈನರ್!
ಬೆಂಗಳೂರು ಮೇ 16: ಜಿಮ್ ಟ್ರೈನರ್‌ರೊಬ್ಬರು ಪತ್ನಿಗೆ ಹೆದರಿಸಲು ಹೋಗಿ ನಿಜವಾಗಲೂ ಸಾವು ತಂದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.
ಅಮಿತ್ ಕುಮಾರ್ (28) ಎಂಬಾತ ಸಾವನ್ನಪ್ಪಿದ ದುರ್ದೈವಿ. ಅಮಿತ್ ಮೂಲತ: ಬಿಹಾರ್ ಮೂಲದವರು. ಈ ಸಾವು ಕೌಟುಂಬಿಕ ಕಲಹದಿಂದ ಆಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ಜಿಮ್ ಟ್ರೈನರ್ ತಾವು ಪ್ರೀತಿಸಿದ ಪ್ರೇಯಸಿಯೊಂದಿಗೆ ಮದುವೆಯಾಗಿ ಉತ್ತಮ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಸಂಸಾರದ ಹಳಿ ತಪ್ಪಿತ್ತು.

ಅಮಿತ್ ಕುಮಾರ್ ಪತ್ನಿಯೊಂದಿಗೆ ಗಲಾಟೆ ನಡೆದಿತ್ತು. ಹೀಗಾಗಿ ಪತ್ನಿ ಮನೆ ಬಿಟ್ಟು ಹೋಗಿರುತ್ತಾಳೆ. ಇದರಿಂದಾಗಿ ಅಮಿತ್ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇತ್ತೀಚೆಗೆ ತನ್ನ ಪತ್ನಿ ಹೆಚ್ಚು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವುದು ಅಮಿತ್‌ಗೆ ಬೇಸರ ತಂದಿತ್ತು.
ಇದರಿಂದಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಳಿಕ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಆಕೆಗೆ ವಾಪಸ್ ಮನೆಗೆ ಬರುವಂತೆ ಅಮಿತ್ ಕರೆ ಮಾಡಿ ಹೇಳಿದ್ದಾನೆ. ಆದರೆ ಪತ್ನಿ ಕೇಳಿಲ್ಲ.

ನರ್ಸಿಂಗ್ ಮಾಡುತ್ತಿದ್ದ ಪತ್ನಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಜೊತೆಗೆ ಬೇರೆ ಹುಡುಗನೊಂದಿಗೆ ಹೆಚ್ಚು ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದರಿಂದಾಗಿ ಅಮಿತ್ ವಿಡಿಯೋ ಕಾಲ್ ಮಾಡಿ ಮನೆಗೆ ಬರುವಂತೆ ಪತ್ನಿಗೆ ಹೆದರಿಸಲು ಹೋಗಿದ್ದಾನೆ. ವಿಡಿಯೋ ಕಾಲ್ ಆನ್ ಇರುವಾಗಲೇ ನೇಣು ಬಿಗಿದುಕೊಳ್ಳುವಂತೆ ನಟಿಸಲು ಹೋಗಿ ನಿಜವಾಗಲೂ ನೇಣಿಗೆ ಶರಣಾಗಿದ್ದಾನೆ.
ಮತ್ತೊಂದು ಘಟನೆ
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕತ್ತು ಕೊಯಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆಯಲ್ಲಿ ಶವ ಪತ್ತೆಯಾಗಿದ್ದು ಪ್ರಕರಣ ದಾಖಲಾಗಿದೆ. ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುಧ್ಯಾ(21) ಮೃತ ಯುವತಿ. ಯುಡಿಆರ್ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಆರಂಭಿಸಲಾಗಿದೆ.












Click it and Unblock the Notifications