Property: ಫ್ಲ್ಯಾಟ್‌ ಖರೀದಿದಾರರಿಗೆ ಹೊಸ ರೂಲ್ಸ್‌, ಇಲ್ಲಿದೆ ವಿವರ

ಬೆಂಗಳೂರಿನಲ್ಲಿ ಫ್ಲ್ಯಾಟ್‌ ಖರೀದಿಸುವ ಕನಸು ಕಂಡವರಿಗೆ ಹೈಕೋರ್ಟ್‌ ಶಾಕ್‌ ಕೊಟ್ಟಿದೆ. ನಗರದಲ್ಲಿ ಹೆಚ್ಚು ಪೈಪೋಟಿ ಇರುವ ಕಾರಣಕ್ಕೆ ಬಹುತೇಕರು ನಿರ್ಮಾಣಕ್ಕೂ ಮುನ್ನವೇ ಫ್ಲ್ಯಾಟ್‌ ಖರೀದಿಗೆ ಮುಂಗಡವಾಗಿ ಹಣ ನೀಡಿ ಬುಕಿಂಗ್‌ ಮಾಡುತ್ತಾರೆ. ಇದಕ್ಕಾಗಿ ಅಡ್ವಾನ್ಸ್‌ ಕೂಡ ಕೊಡುತ್ತಾರೆ. ಮುಂಗಡ ಹಣ ನೀಡುವುದರಿಂದ ಫ್ಲ್ಯಾಟ್‌ ಸಿಕ್ತಲ್ಲಾ ಎಂದು ನೆಮ್ಮದಿಯಾಗಿ ಇರುತ್ತಿದ್ದರು. ನಿರ್ಮಾಣವಾದ ನಂತರ ಬಾಕಿ ಹಣ ಕೊಟ್ಟು ಫ್ಲ್ಯಾಟ್‌ಗೆ ಪ್ರವೇಶಿಸುತ್ತಿದ್ದರು. ಆದರೆ ಇನ್ನು ಮುಂದೆ ಫ್ಲ್ಯಾಟ್‌ ಕಾಯ್ದಿರಿಸುವವರಿಗೆ ಹೊಸ ನಿಯಮವೊಂದು ಜಾರಿ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವ ಆದೇಶ ಹೊರಡಿಸಿದೆ.

ಕಟ್ಟಡ ನಿರ್ಮಾಣಕ್ಕೂ ಮುನ್ನವೇ ವಸತಿ ಸಂಕೀರ್ಣಗಳಲ್ಲಿ ಫ್ಲ್ಯಾಟ್‌ಗಳಲ್ಲಿ ಕಾಯ್ದಿರಿಸುವ ಖರೀದಿದಾರರು ಇದಕ್ಕೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದು ಕಡ್ಡಾಯ ಎಂದು ಹೈಕೋರ್ಟ್‌ ಹೇಳಿದೆ. ಕೇಂದ್ರ, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರಡಿ (ಸಿಜಿಎಸ್‌ಟಿ) ಫ್ಲ್ಯಾಟ್‌ ನೋಂದಣಿಗೂ ಮುನ್ನವೇ ಈ ಜಿಎಸ್‌ಟಿ ಪಾವತಿ ಮಾಡಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವರು ರಿಟ್‌ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಈ ಅರ್ಜಿಗಳನ್ನು ವಜಾ ಮಾಡುವ ಮೂಲಕ ಜಿಎಸ್‌ಟಿ ಪಾವತಿ ಬಗ್ಗೆ ಆದೇಶಿಸಿದೆ.

GST Mandatory For Buyers Booking Flats Property Before Construction Karnataka High Court

ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ಆ ಆದೇಶಿಸಿದೆ. ಖರೀದಿದಾರರು ಕಟ್ಟಡದ ಕಂಪ್ಲೀಶನ್‌ ಸರ್ಟಿಫಿಕೇಟ್‌ (ಸಿಸಿ) ಪಡೆಯುವ ಮುನ್ನವೇ ಮುಂಗಡ ಹಣ ಅಥವಾ ಪೂರ್ತಿ ಹಣ ಹಾಕಿದ್ದರೆ ಅದು ಕೂಡ ಸೇವೆ (ಸರ್ವಿಸ್‌) ಎಂದು ಪರಿಗಣಿಸಲಾಗುವುದು. ಹಾಗಾಗಿ ಮುಂಗಡ ಪಾವತಿ ಹಣಕ್ಕೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಸಿಜಿಎಸ್‌ಟಿ ನಿಬಂಧನೆಯ ಪ್ರಕಾರ ಕಟ್ಟಡ ನಿರ್ಮಾಣ ಕೆಲಸ ಮುಗಿಯುವ ಮೊದಲೇ ಒಪ್ಪಂದ ಮಾಡಿಕೊಂಡರೆ ಅದು ಕೂಡ ಕೆಲಸದ ಒಪ್ಪಂದ ಎಂದು ಪರಿಗಣಿಸಲಾಗುವುದು, ಇದಕ್ಕೆ ಕೂಡ ನಿರ್ದಿಷ್ಟ ದರದಲ್ಲಿ ಸೇವಾ ತೆರಿಗೆ (ಸರ್ವಿಸ್‌ ಟ್ಯಾಕ್ಸ್‌) ಪಾವತಿಸಬೇಕು ಎಂದು ಹೇಳಿದೆ. ಅಲ್ಲದೆ ನೋಟಿಸ್‌ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಕೋರ್ಟ್‌ ವಜಾ ಮಾಡಿದೆ. ನೀವು ಈಗಾಗಲೇ ಫ್ಲ್ಯಾಟ್‌ ಹಂಚಿಕೆಯ ನೋಂದಣಿ ಮಾಡಿಸಿಕೊಳ್ಳದಿದ್ದರೆ, ಬಿಡಿಎ ಹೇಳಿರುವ ಜಿಎಸ್‌ಟಿ ಹಣವನ್ನು ಕಾನೂನಿನ ಪ್ರಕಾರ ಪಾವತಿಸಿ, ಇದಾದ ನಂತರವೇ ನೀವು ಫ್ಲ್ಯಾಟ್‌ ವಹಿವಾಟು ಪೂರ್ಣಗೊಳಿಸಿಕೊಳ್ಳಲು ಅರ್ಹತೆ ಪಡೆಯಲಿದ್ದೀರಿ ಎಂದು ಅರ್ಜಿದಾರರಿಗೆ ಸ್ಪಷ್ಟನೆ ನೀಡಿದೆ.

GST Mandatory For Buyers Booking Flats Property Before Construction Karnataka High Court

ಬೆಂಗಳೂರಿನ ವಳಗೆರೆಹಳ್ಳಿ 6ನೇ ಹಂತದ ಬಿಡಿಎ ವಸತಿ ಸಂಕೀರ್ಣದಲ್ಲಿ 2018ರಲ್ಲಿ ಎರಡು ಬಿಎಚ್‌ಕೆ ಫ್ಲ್ಯಾಟ್‌ ಹಂಚಿಕೆಯಾಗಿತ್ತು. ಈ ಫ್ಲ್ಯಾಟ್‌ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲೇ ಅದನ್ನು ಖರೀದಿಸಲು ಸ್ಪಲ್ಪ ಹಣವನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಬಳಿಕ ಅದೇ ವರ್ಷವೇ ಫ್ಲ್ಯಾಟ್‌ ನಿರ್ಮಾಣ ಕೆಲಸ ಮುಗಿದಿತ್ತು. ಬಳಿಕ ಇದರ ನೋಂದಣಿ ವೇಳೆ ಸಿಜಿಎಸ್‌ಟಿ ಕಾಯ್ದೆ-2017ರ ಅನ್ವಯ ಜಿಎಸ್‌ಟಿ ಸೇರಿಸಿ ಉಳಿದ ಹಣ ಪಾವತಿಸಿ ಬಳಿಕ ಫ್ಲ್ಯಾಟ್‌ ನೋಂದಣಿ ಮಾಡಿಕೊಳ್ಳುವಂತೆ ಬಿಡಿಎ ಹೇಳಿತ್ತು. ಇದನ್ನು ಪ್ರಶ್ನಿಸಿ ಫ್ಲ್ಯಾಟ್‌ ಖರೀದಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+