Gst Good News: ಜಿಎಸ್‌ಟಿ ಬೆಲೆಗಳಲ್ಲಿ ಬಿಗ್‌ ಅಪ್ಡೇಟ್ಸ್‌, ಯಾವ ವಸ್ತುಗಳ ಬೆಲೆ ಇಳಿಕೆ ನೋಡಿ!

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯಲ್ಲಿ ಮಹತ್ವದ ಬದಲಾಣೆ ಆಗಲಿದೆ. ಜೆಎಸ್‌ಟಿಗೆ ಸಂಬಂಧಿಸಿದಂತೆ ಆಗಾಗ ಕೆಲವು ಪ್ರಮುಖ ಬದಲಾವಣೆಗಳು ಆಗುತ್ತಿರುತ್ತವೆ. ಇನ್ನು ಜಿಎಸ್‌ಟಿ ಜಾರಿಯಾದ ಮೇಲೆ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು. ಸಣ್ಣ ಸಣ್ಣ ಪದಾರ್ಥಕ್ಕೂ ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಇದನ್ನು ತಪ್ಪಿಸಬೇಕು ಎನ್ನುವ ಆಗ್ರಹ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳು ಆಗುತ್ತಿವೆ. ಈಚೆಗೆ 55ನೇಯ ಜಿಎಸ್​ಟಿ ಕೌನ್ಸಿಲ್ ಸಭೆ ನಡೆದಿದ್ದು, ಇದರಲ್ಲಿ ಕೆಲವು ಪ್ರಮುಖ ಸಲಹೆ ಹಾಗೂ ಶಿಫಾರಸುಗಳನ್ನು ಕೊಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಇದರಿಂದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ಜೆಎಸ್‌ಟಿ ಸಭೆಗಳು ನಡೆದ ಮೇಲೆ ಕೆಲವು ವಸ್ತುಗಳ ಬೆಲೆ ಇಳಿಕೆ ಅಥವಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಬಾರಿ ನಡೆದ ಸಭೆಯಲ್ಲೂ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದ್ದು, ಇದರಿಂದ ಜನರಿಗೆ ಅನುಕೂಲ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಬ್ಯಾಂಕ್‌ ಸಾಲ ಸೇರಿದಂತೆ ಕೆಲವು ವಿಚಾರದಲ್ಲಿ ಶಾಕ್‌ ಸಹ ನೀಡಲಾಗಿದೆ. ಅವುಗಳ ಸಂಪೂರ್ಣ ವಿವರ ಇಲ್ಲಿದೆ.

Gst Good News Big updates in GST prices which items have price reduction

ಉಪ್ಪು ಹಾಗೂ ಮಸಾಲೆ ಸೇರಿಸಿರುವ ಹಾಗೂ ಬೇಯಿಸಿದ ಪಾಪ್​ಕಾರ್ನ್ ಪ್ರೀ-ಪ್ಯಾಕೇಜಿಂಗ್ ಮಾಡದೆ ಮಾರಾಟ ಮಾಡಿದರೆ, ಅದಕ್ಕೆ ಶೇ. 5ರಷ್ಟು ಮಾತ್ರ ಜಿಎಸ್​ಟಿ ಇರಲಿದೆ. ಅದೇ ನೀವು ಪ್ರೀ-ಪ್ಯಾಕೇಜಿಂಗ್ ಮಾಡಿ ಅದನ್ನು ಮಾರಾಟ ಮಾಡಿದರೆ ಅದರ ಬೆಲೆಯೊಂದಿಗೆ ಶೇ 12ರಷ್ಟು ಜಿಎಸ್​ಟಿ ಸೇರಲಿದೆ. ಮೂವಿ ಮಾಲ್‌ಗಳಲ್ಲಿ ಈಗ ಪ್ಯಾಕೇಜಿಂಗ್‌ ಮಾಡಿಯೇ ಕೊಡಲಾಗುತ್ತಿದೆ. ಹೀಗಾಗಿ, ಇದರ ಬೆಲೆ ಇನ್ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

* ಪೌಷ್ಟಿಕಾಂಶಯುಕ್ತ ಸೇರಿದ ಅಕ್ಕಿಯ ಮೇಲಿನ ಜಿಎಸ್​ಟಿ ಬೆಲೆಯನ್ನು ಶೇಕಡ 5ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ. ಇನ್ನು

ಜೀನ್ ಥೆರಪಿ (ಶಸ್ತ್ರಚಿಕಿತ್ಸೆಗೆ ಬದಲಾಗಿ ಈ ವಿಧಾನವನ್ನು ವೈದ್ಯಕೀಯವಾಗಿ ಬಳಸಲಾಗುತ್ತದೆ)ಗೆ ಸಹ ಜಿಎಸ್​ಟಿಯಿಂದ ವಿನಾಯಿತಿ ನೀಡಲು ಹೇಳಲಾಗಿದೆ.

ವಾಹನಗಳ ಮಾರಾಟಗಾರರಿಗೆ ಶಾಕ್‌: ಇನ್ನು ಜಿಎಸ್‌ಟಿಯ ಹೊಸ ಬದಲಾವಣೆಯಿಂದ ಹಳೆಯ ವಾಹನಗಳನ್ನು ಖರೀದಿ ಮಾಡುವವರು ಇಲ್ಲವೇ ಮಾರಾಟ ಮಾಡುವವರಿಗೆ ಸಣ್ಣ ಮಟ್ಟದ ಶಾಕ್‌ ಕಾದಿದೆ ಎಂದೇ ಹೇಳಲಾಗುತ್ತಿದೆ. ಇನ್ಮುಂದೆ ಎಲ್ಲಾ ಮಾದರಿಯ ಹಳೆಯ ವಾಹನಗಳು ಅಥವಾ ಈಗಾಗಲೇ ಬಳಕೆಯಾಗಿರು ವಾಹನಗಳ ಮಾರಾಟದಲ್ಲಿ ಜಿಎಸ್‌ಟಿ ಬೆಲೆಯನ್ನು ಶೇ12ರಿಂದ 18ಕ್ಕೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಶನಿವಾರ ನಡೆದ ಮೀಟಿಂಗ್‌ನಲ್ಲಿ ಚರ್ಚಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳು ಸಹ ಸೇರ್ಪಡೆಯಾಗಲಿವೆ ಎಂದು ಹೇಳಲಾಗಿದೆ.

ಸಾಲಗಾರರಿಗೆ ಸಂಕಷ್ಟ: ಹೊಸ ಜಿಎಸ್‌ಟಿ ಬದಲಾವಣೆಯಿಂದ ಸಾಲಗಾರರಿಗೆ ಸಣ್ಣ ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ.

ಬ್ಯಾಂಕ್‌ಗಳು ಹಾಗೂ ಎನ್​ಬಿಎಫ್​ಸಿ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ)ಗಳು ಸಾಲ ಪಡೆದುಕೊಂಡ ಗ್ರಾಹಕರಿಗೆ ವಿಧಿಸುವ ದಂಡದ ಮೊತ್ತಕ್ಕೆ ಇನ್ಮುಂದಿನ ದಿನಗಳಲ್ಲಿ ಜಿಎಸ್‌ಟಿ ವಿಧಿಸುವುದಕ್ಕೆ ಚರ್ಚಿಸಲಾಗಿದೆ. ಹೀಗಾಗಿ, ಬಡ್ಡಿಯ ಮೊತ್ತ ಇನ್ನಷ್ಟು ಹೆಚ್ಚಳವಾಗುವುದು ಫಿಕ್ಸ್‌ ಅಂತಲೇ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+