ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಾಪ್‌ನಿಂದ ಆರ್ಡರ್ ಮಾಡಿ ದಿನಸಿ ಮನೆ ಬಾಗಿಲಿಗೆ ಪಡೆಯಿರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಇನ್ನುಮುಂದೆ ವಾಟ್ಸಾಪ್ ಮೂಲಕ ಆರ್ಡರ್ ಮಾಡಿ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.

ಮಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೋಮ್ ಡೆಲಿವರಿ ಸಹಾಯವಾಣಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ ವಿತರಣೆವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ ವಿತರಣೆ

ಲಾಕ್‌ಡೌನ್ ಇರುವುದರಿಂದ ಜನರಿಗೆ ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನೀವು ವಾಟ್ಸಾಪ್ ಮೂಲಕ ಆರ್ಡರ್ ಮಾಡಿದರೆ ದಿನಸಿ ಸಾಮಾನುಗಳು ನಿಮ್ಮ ಮನೆಗೆ ಬರಲಿವೆ.

Grocery Delivery To Your Doorstep In Bengaluru From Karnataka Government

08061914960ಗೆ ನಿಮಗೆ ಬೇಕಾದ ಆಹಾರ ಸಾಮಗ್ರಿಗಳ ಲಿಸ್ಟ್‌ ನೀಡಿದರೆ ಅವರು ನಿಮ್ಮ ಮನೆಗೆ ಆಹಾರ ಪದಾರ್ಥಗಳನ್ನು ಕಳುಹಿಸುತ್ತಾರೆ.

ಸಾಕಷ್ಟು ಖಾಸಗಿ ಏಜೆನ್ಸಿ ಜೊತೆಗೆ ಸರ್ಕಾರ ಕೈಜೋಡಿಸಿದ್ದು 5 ಸಾವಿರ ಡೆಲಿವರಿ ಏಜೆಂಟ್‌ಗಳನ್ನು ನೇಮಿಸಲಾಗಿದೆ. ಇದರಿಂದಾಗಿ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.

ಐದು ವರ್ಷದ ಮಗುವಿಗೆ ರೈಲಿನಲ್ಲಿ ಔಷಧಿ ತರಿಸಿದ ಕೇಂದ್ರ ಸಚಿವಐದು ವರ್ಷದ ಮಗುವಿಗೆ ರೈಲಿನಲ್ಲಿ ಔಷಧಿ ತರಿಸಿದ ಕೇಂದ್ರ ಸಚಿವ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಜವಾಬ್ದಾರಿಯನ್ನು ಹೊತ್ತಿದೆ.

ಅಗತ್ಯವಸ್ತುಗಳನ್ನು ಆರ್ಡರ್ ಮಾಡಲು ಹೀಗೆ ಮಾಡಿ
-ನಿಮ್ಮ ಮೊಬೈಲ್‌ನಲ್ಲಿ 08061914960 ನಂಬರ್ ಸೇವೆ ಮಾಡಿ
-ಮೆಸೇಜ್ ಮೂಲಕ Hi ಎಂದು ಕಳುಹಿಸಿ
-ನಿಮ್ಮ ಲೊಕೇಷನ್ /ವಿಳಾಸ ಶೇರ್ ಮಾಡಿ
-ಅದರಲ್ಲಿ ಟೈಪ್ ಎ ದಿನಬಳಕೆ ವಸ್ತುಗಳು ಹಾಗೂ ತರಕಾರಿಗಳು, ಅಥವಾ ಬಿ ಔಷಧ.
-ಯಾವ ವಸ್ತುಗಳು ನಿಮಗೆ ಬೇಕಾಗಿವೆ ಎಂದು ಬರೆದು ಆಹಾರ ಸಾಮಗ್ರಿಗಳ ಲಿಸ್ಟ್‌ ಫೋಟೊ ತೆಗೆದು ಸೆಂಡ್ ಮಾಡಿ
-ಮೆಸೇಜ್ ಕಳುಹಿಸಿದ ಬಳಿಕ ನಿಮ್ಮ ಆರ್ಡರ್ ಪ್ಲೇಸ್ ಆಗಿದೆ ಎಂದು ಮೆಸೇಜ್ ಬರುತ್ತದೆ.
-ಟ್ರಾನ್ಸ್ಯಾಕ್ಷನ್ ಐಡಿಯೊಂದಿಗೆ ಕನ್ಫರ್ಮೇಷನ್ ಮೆಸೇಜ್ ಲಭ್ಯವಾಗಲಿದೆ.
-ನೀವು ಹೇಳಿರುವ ಸ್ಥಳಕ್ಕೆ ಬಂದು ವಸ್ತುಗಳನ್ನು ಒದಗಿಸುತ್ತಾರೆ. ವಸ್ತುಗಳ ಬೆಲೆಯ ಬಿಟ್ಟು ಡೆಲಿವರಿ ಚಾರ್ಜ್ 10 ರೂ ನೀಡಬೇಕಾಗುತ್ತದೆ.

English summary
Karnataka government and bbmp will facilitate doorstep delivery of Groceries To People. Grocery list on a call or on whatsapp and delivery time will be sent to them .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X