ನಾಯಿ ದತ್ತು ತೆಗೆದುಕೊಳ್ಳಿ ಪ್ಲೀಸ್ ಎಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ಬೆಂಗಳೂರಿನ ಜನರಲ್ಲಿ ವಿಭಿನ್ನವಾದ ಮನವಿಯನ್ನು ಮಾಡುವುದಕ್ಕೆ ಪ್ರಾರಂಭಿಸಿವೆ. ಪೂರ್ವ ನಗರ ಪಾಲಿಕೆ ಹಾಗೂ ವಿವಿಧ ಪಾಲಿಕೆಗಳಿಂದ ಬೆಂಗಳೂರಿಗರಲ್ಲಿ ವಿಭಿನ್ನವಾದ ಮನವಿಯನ್ನು ಮಾಡುತ್ತಿವೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಆಡಳಿತ ನಡೆಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪಾಲಿಕೆಗಳಿಂದ ಭಿನ್ನ ಮನವಿ ಕೇಳಿ ಬಂದಿದೆ. ಅದೇ ಬೀದಿ ನಾಯಿ ದತ್ತು ತೆಗೆದುಕೊಳ್ಳಿ ಪ್ಲೀಸ್ ಎನ್ನುವುದು. ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮುದಾಯ (ಬೀದಿ) ನಾಯಿಗಳ ದತ್ತು ಪಡೆಯಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮತ್ತು ವ್ಯಾಪ್ತಿಯಲ್ಲಿನ ಸಂಸ್ಥೆಗಳ (ಶಿಕ್ಷಣ, ಆಸ್ಪತ್ರೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೈದಾನ ಸೇರಿದಂತೆ ಸಮುದಾಯ (ಬೀದಿ) ನಾಯಿಗಳ ಕಲ್ಯಾಣ, ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮನವಿ ಮಾಡಿರುವುದಾಗಿ ಪಾಲಿಕೆ ಹೇಳಿದೆ.

ಪೂರ್ವ ನಗರ ಪಾಲಿಕೆಯ ಪ್ರಕಾರ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು(ಎನ್.ಜಿ.ಒ) ಬೀದಿ ನಾಯಿಗಳನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿಗಳನ್ವಯ ದತ್ತು ಪಡೆಯಲು ಮುಂದಾಗುವಂತೆ ಆಯುಕ್ತರಾದ ಡಿ.ಎಸ್ ರಮೇಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರಿನ ವಿವಿಧ ಪಾಲಿಕೆಗಳು ಸಹ ಇದೇ ಮಾದರಿಯನ್ನು ಅನುಸರಿಸಿವೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 59,820 ಬೀದಿನಾಯಿಗಳು ಇವೆ ಎಂದು 2023ರ ಬೀದಿನಾಯಿ ಸಮೀಕ್ಷೆಯಿಂದ ವರದಿಯಾಗಿದೆ. ಮುಂದುವರಿದು ಪೂರ್ವ ನಗರ ಪಾಲಿಕೆಯ ವಿವಿಧ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 369 ಬೀದಿನಾಯಿಗಳು ಇರುವುದು ದೃಢಪಟ್ಟಿವೆ.
ಬೀದಿನಾಯಿಗಳ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ, ಲಸಿಕಾ ಅಭಿಯಾನ, ಪಶು ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ಬೀದಿನಾಯಿಗಳ ದತ್ತು ಕಾರ್ಯಕ್ರಮವು ಕೇವಲ ಒಂದು ಪ್ರಾಣಿ ಕಲ್ಯಾಣ ಕ್ರಮವಲ್ಲ; ಇದು ನಗರದ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿದ್ದು, ನಾಗರಿಕರು ಮತ್ತು ಸ್ಥಳೀಯ ಆಡಳಿತದ ನಡುವೆ ಸಹಭಾಗಿತ್ವವನ್ನು ಬಲಪಡಿಸುತ್ತದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
ಬೀದಿನಾಯಿಗಳ ದತ್ತು ಯೋಜನೆಯ ಮುಖ್ಯ ಉದ್ದೇಶಗಳು
1. ಬೀದಿನಾಯಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಜೀವನ ಪರಿಸರ ವ್ಯವಸ್ಥೆಯನ್ನು ಒದಗಿಸುವುದು.
2. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣದ ಮೂಲಕ ನಗರದಲ್ಲಿ ಪ್ರಾಣಿ-ಮನುಷ್ಯರ ನಡುವೆ ಸಹಬಾಳ್ವೆ ವಾತಾವರಣ.
3. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದು.
4. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಮತ್ತು ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವುದು.
ದತ್ತು ನೀಡಲಾಗುವ ನಾಯಿಗಳ ಆರೋಗ್ಯ ಮತ್ತು ಸುರಕ್ಷತೆ
ನಗರ ಪಾಲಿಕೆಯ ವತಿಯಿಂದ ದತ್ತು ನೀಡಲಾಗುವ ಎಲ್ಲಾ ಬೀದಿ ನಾಯಿಗಳಿಗೆ ಕೆಲವೊಂದು ಉಚಿತ ಸೇವೆಗಳನ್ನು ನೀಡುವುದಾಗಿ ತಿಳಿಸಲಾಗಿದೆ.
1. ಸಂಪೂರ್ಣ ಆರೋಗ್ಯ ತಪಾಸಣೆ
2. ಅಗತ್ಯ ಲಸಿಕೆ ನೀಡಲಾಗುವುದು
3. ಸಂತಾನಹರಣ ಶಸ್ತ್ರಚಿಕಿತ್ಸೆ ನಿರ್ವಹಿಸಲಾಗುವುದರಿಂದ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಎರಡೂ ದೃಢವಾಗುತ್ತದೆ.
ಪ್ರಾಣಿ ಪ್ರಿಯರಲ್ಲಿ ಮನವಿ
ಬೀದಿ ನಾಯಿಗಳ ದತ್ತು ಮೂಲಕ ಪ್ರಾಣಿ ಕಲ್ಯಾಣ, ಸಾರ್ವಜನಿಕ ಆರೋಗ್ಯ ಮತ್ತು ಸಹಬಾಳ್ವೆ ನಗರ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು, ಬೀದಿ ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ಇರುವ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ಅಪಾರ್ಟ್ಮೆಂಟ್ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಈ ಮಾನವೀಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಈ ಮೂಲಕ ಮನವಿ ಮಾಡಲಾಗಿದೆ. ಇಂತಹ ಮಾನವೀಯ ಕ್ರಮಗಳು ಬೆಂಗಳೂರನ್ನು ಇನ್ನಷ್ಟು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಗರವನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Gold Price: ಚಿನ್ನದ ಬೆಲೆ 2026ರಲ್ಲಿ ಇನ್ನಷ್ಟು ಏರಿಕೆ ಆಗುತ್ತಾ? ಹೂಡಿಕೆದಾರರ ಕುತೂಹಲ ಕೆರಳಿಸಿದ ಬಾಬಾ ವಂಗಾ ಭವಿಷ್ಯ -
ಅವರವರ ಆಹಾರ ನೆಮ್ಮದಿಯಿಂದ ತಿನ್ನಲಿ ಬಿಡಿ: ವಿಷ್ಣು ಹಳೆಯ ಫೋಟೋ ಹಾಕಿ ನಟ ಡಾಲಿ ಬೆಂಬಲಕ್ಕೆ ನಿಂತ ಜನ -
Karnataka Weather Updates: ವಾಯುಭಾರ ಕುಸಿತ: ಬೆಂಗಳೂರು ಸೇರಿ ಕರ್ನಾಟಕದ ಈ ಭಾಗಗಳಲ್ಲಿ ಚಳಿ ಹೆಚ್ಚಳ, ಮಳೆ ಸಾಧ್ಯತೆ -
Video Viral: ವಾರಾಂತ್ಯದಲ್ಲಿ ಬೆಂಗಳೂರಿನ ಅವ್ಯವಸ್ಥೆ ಎತ್ತಿ ತೋರಿಸಿದ ಐಐಟಿ ಜೋಡಿಯ ವಿಡಿಯೋ, ನೆಟ್ಟಿಗರು ಏನಂದ್ರು -
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡಗೆ ನಿಂದನೆ: ಕೇರಳ ಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ -
ಜನವರಿ 26ರ ದಿನ ಭವಿಷ್ಯ: ಉತ್ತಮ ನಿರ್ಧಾರ ಕೈಗೊಳ್ಳಲು ಇದು ಸುದಿನ, ಯಾವ ರಾಶಿಯವರಿಗೆ ಶುಭ-ಅಶುಭ? -
HD Kumaraswamy: ಕುಮಾರಸ್ವಾಮಿ ಫೋನ್ ಮಾಡಿದ್ರು ಡೋಂಟ್ ಕೇರ್: ರಾಮನಗರ ಡಿಸಿಗೆ ಖಡಕ್ ಎಚ್ಚರಿಕೆ -
Gold: ಗದಗ - ಲಕ್ಕುಂಡಿ: ನಿಧಿ ನೀಡಿದ ಕುಟುಂಬಕ್ಕೆ ನಿವೇಶನ ಸೇರಿ ಮೂರು ಭರ್ಜರಿ ಗಿಫ್ಟ್ ಕೊಟ್ಟ ಸರ್ಕಾರ -
Gold Rate Jan 26: ಜನವರಿ 26ರಂದು ಚಿನ್ನ - ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Siddaramaiah: 77ನೇ ಗಣರಾಜ್ಯೋತ್ಸವ; ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಸಂದೇಶವೇನು? -
Gilli: ಬಿಗ್ಬಾಸ್ ವಿನ್ನರ್ ಗಿಲ್ಲಿಯನ್ನ ಕೈದಿಯಂತೆ ಕರೆತಂದ ಪೊಲೀಸರು, ವಿಡಿಯೋ ವೈರಲ್ -
Lakkundi Gold Found Case: ಲಕ್ಕುಂಡಿಯಲ್ಲಿ 'ಚಿನ್ನ' ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದಲ್ಲಿ ಬಿರುಕು












Click it and Unblock the Notifications