• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

50 ಸಾವಿರ ಜನ ರಾಜ್ಯಕ್ಕೆ ಪ್ರವೇಶ, ಹೆಚ್ಚು ಮಂದಿ ಸೋಂಕಿತರು: ಎಚ್ ಕೆ ಪಾಟೀಲ್

|

ಬೆಂಗಳೂರು, ಮಾರ್ಚ್ 23: ರಾಜ್ಯದಲ್ಲಿ ಕೊರೊನಾ ಹರಡುವಿಕೆ ತಡೆಯಬೇಕಾದರೆ ವಿದೇಶದಿಂದ ಬಂದ ಜನರನ್ನು ಮೊದಲು ನಿಯಂತ್ರಿಸಬೇಕು ಎಂಬ ಅಭಿಪ್ರಾಯ ಬಹಳ ದೊಡ್ಡ ಮಟ್ಟದಲ್ಲಿದೆ. ಆದರೆ, ಈಗಾಗಲೇ ಅನೇಕ ಸಂಖ್ಯೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಜನರು ಬಂದಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಕೊರೊನಾ ಸೋಂಕಿತರು ಎಂದು ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

   ಇಂದು ಮಧ್ಯರಾತ್ರಿ 12 ಗಂಟೆ ವರೆಗು ಹೊರಗಡೆ ಬರಬೇಡಿ ಹುಷಾರ್ .. | Oneindia kannada

   ವಿಧಾನಸೌಧದಲ್ಲಿ ಕೊರೊನಾ ಹರಡುವಿಕೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ''ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ 50,000 ಕ್ಕೂ ಹೆಚ್ಚು ಜನ ವಿದೇಶಗಳಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ‌ ಕೊರೊನಾ ಸೋಂಕಿತರು. ಈಗ ನೀವು ರಾಜ್ಯದ ಗಡಿಗಳನ್ನು ಬಂದ್ ಮಾಡಿದ್ರೆ ಏನು ಪ್ರಯೋಜನ'' ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

   ಕೊರೊನಾ : ಮಸೀದಿಗಳಲ್ಲಿ ಪ್ರತಿದಿನ ಮತ್ತು ಶುಕ್ರವಾರದ ನಮಾಜ್‌ಗೆ ನಿಷೇಧ

   'ಬೆಂಗಳೂರಿನ ತಾರಾ ಹೊಟೇಲ್ ಗಳನ್ನೇ ಆಸ್ಪತ್ರೆಗಳಾಗಿ ಪರಿವರ್ತಿಸಿ, ಹಾಗೂ ಹೌಸ್ ಕ್ವಾರಂಟೈನ್ ಆಗಿರುವವರನ್ನು ಅದರಲ್ಲಿರಿಸಿ ಚಿಕಿತ್ಸೆ ಕೊಡಿಸಿ. ಮನೆಯಲ್ಲಿ ಕ್ವಾರಂಟೈನ್ ಮಾಡಿದ್ರೆ ಪ್ರಯೋಜನವಾಗಲ್ಲ. ಅರ್ದ ನಿರ್ಬಂಧ ಮಾಡಿ ಇನ್ನರ್ಧ ಮಾಡಲ್ಲ ಎಂದರೆ ಏನು ಉಪಯೋಗ'' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

   ಇನ್ನು ಕಲುಬುರ್ಗಿಯಲ್ಲಿ ಲ್ಯಾಬ್ ಆರಂಭಿಸಿರುವ ಬಗ್ಗೆ ಮಾತನಾಡಿದ ಎಚಹ್ ಕೆ ಪಾಟೀಲ್, 'ಇದುವರೆಗೆ ಕಲ್ಬುರ್ಗಿಯಲ್ಲಿ ಪ್ರಯೋಗಾಲಯ ಸ್ಥಾಪನೆಯೇ ಆಗಿಲ್ಲ. ಹದಿಮೂರು ದಿನಗಳಾದರೂ ಸಹ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆಯಾಗಿಲ್ಲ.ಇಷ್ಟು ದೊಡ್ಡ ಲೋಪ ಆಗಿರೋದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ' ಎಂದು ಟೀಕಿಸಿದ್ದಾರೆ.

   ಕೊರೊನಾ ಸೋಂಕು ನಿವಾರಣೆಗೆ ಗಂಭೀರ ಕ್ರಮ ಅಗತ್ಯ: ಡಿಕೆಶಿ ಆಗ್ರಹ

   ಇದೇ ವಿಷಯದ ಕುರಿತು ಮಾತನಾಡಿದ ಶಾಸಕ ಡಾ. ಅಜಯ್ ಸಿಂಗ್ 'ಕಲ್ಬುರ್ಗಿಯಲ್ಲಿ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಿದ್ದಾರೆ. ಆದರೆ ಟೆಸ್ಟಿಂಗ್ ಮಾತ್ರ ಪ್ರಾರಂಭವಾಗಿಲ್ಲ. ಈಗಲೂ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   English summary
   Ex Minister Hk patil alleged 'Govt has not correct precautions to avoid COVID 19'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X