ಬೇಕಾಬಿಟ್ಟಿ ಪೊಲೀಸ್ ವರ್ಗಾವಣೆ ನಿಲ್ಲಿಸಿ : ರಾಜ್ಯಪಾಲರು

ಗುರುವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಪೊಲೀಸ್ ಇಲಾಖೆಯಲ್ಲಿ ಇತ್ತಿಚೆಗೆ ನಡೆದ ಬೇಕಾಬಿಟ್ಟಿ ವರ್ಗಾವಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಇಲಾಖೆಯಲ್ಲಿನ ನಿಯಮದಂತೆ ವರ್ಗಾವಣೆ ನಡೆಯದಿದ್ದರೆ, ಅಲ್ಲಿ ಭ್ರಷ್ಟಾಚಾರವಿದೆ ನಡೆಯುತ್ತಿದೆ ಎಂದು ಅರ್ಥ ಎಂದು ಅಭಿಪ್ರಾಯಪಟ್ಟರು.
ಒಂದು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಪೊಲೀಸ್ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವೂ ಕಾರಣವಾಗುತ್ತದೆ ಎಂದು ತಿಳಿಸಿದ ಅವರು, ಇಲಾಖೆಯಲ್ಲಿ ಬೇಕಾಬಿಟ್ಟಿಯಾಗಿ ನಡೆಯುವ ವರ್ಗಾವಣೆಗಳಿಗೆ ತಡೆ ಹಾಕಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. (ಸಿಎಂ ಬೆಸ್ಟ್, ಕೆಲವು ಸಚಿವರು ವೇಸ್ಟ್)
ಮಹಿಳೆಯದ ಮೇಲೆ ದೌರ್ಜನ್ಯವಾಗದಂತೆ ಪೊಲಿಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ ಅವರು, ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿಕೊಂಡು ದೌರ್ಜನ್ಯ ತಡೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು. ಬೆಂಗಳೂರಿನಂತಹ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಪೊಲೀಸರ ಅವಶ್ಯಕತೆ ಇದೆ ಎಂದು ತಿಳಿಸಿದರು. (ಸಿದ್ದು ಸರಕಾರವನ್ನು ಜಾಲಾಡಿದ ರಾಜ್ಯಪಾಲರು)
ಕರ್ನಾಟಕ ಶಾಂತಿಯುತ ರಾಜ್ಯವಾಗಿತ್ತು. ಆದರೆ, ಕೆಲವು ದಿನಗಳಿಂದ ಇತರ ರಾಜ್ಯಗಳಂತೆ ಕರ್ನಾಟದಕದಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ರಾಜ್ಯಪಾಲರು ಆತಂಕ ವ್ಯಕ್ತಪಡಿಸಿದರು. (ಕಾಂಗ್ರೆಸಿಗರಿಗೆ ರಾಜ್ಯಪಾಲರ ಖಡಕ್ ಉತ್ತರ)












Click it and Unblock the Notifications