ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ: ವಿ.ಆರ್. ವಾಲಾ
ಬೆಂಗಳೂರು, ಜನವರಿ 26: ದೇಶದಲ್ಲಿ ಕರ್ನಾಟಕವು ಅತಿ ಹೆಚ್ಚು ಪ್ರಗತಿ ಹೊಂದಿದ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಹೂಡಿಕೆಗಳನ್ನು ಆಕರ್ಷಿಸುವಲ್ಲಿ 2 ನೇ ಬಾರಿಯೂ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ವಜೂಭಾಯಿ ಆರ್ .ವಾಲಾ ಹೇಳಿದರು.
ಬೆಂಗಳೂರಿನ ಮಾಣೆಕೆ ಷಾ ಪೆರೇಡ್ ಮೈದಾನದಲ್ಲಿ 69ನೇ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, 22 ರಿಂದ 35 ಲಕ್ಷ ಕೃಷಿಕರ 8,165 ಕೋಟಿ ಮೊತ್ತದ ಕೃಷಿ ಸಾಲವನ್ನು ಹಾಗೂ 19,410 ನೇಕಾರರ ಅನುಕೂಲಕ್ಕಾಗಿ 53.64 ಕೋಟಿ ರೂ. ಸಾಲಗಳನ್ನು ಮನ್ನಾ ಮಾಡುವ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದರು.
ಆರ್ಯಭಟ ಪ್ರಶಸ್ತಿ ಪುರಸ್ಕೃತ ಟಿ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿಕ್ಕಬಿದರಕಲ್ಲು ಉತ್ತರ ವಲಯದ 650 ವಿದ್ಯಾರ್ಥಿಗಳಿಂದ ಪುಣ್ಯಭೂಮಿ ಭಾರತ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು, ನಾವು ಪ್ರಚಂಡ ಭಾರತೀಯರು ವಿಶಾಲ ಹೃದಯದವರು ನೃತ್ಯ ರೂಪಕ ಪ್ರದರ್ಶಿಸಿಸದರು,.

ಟಿ. ಶಶಿಕುಮಾರ್ ಹಾಗೂ ರಾಜೇಶ್ ನೃತ್ಯ ನಿರ್ದೇಶನದಲ್ಲಿ ಬಸವಣ್ಣನಗರದ ಫ್ಲಾರೆನ್ಸ್ ಪಬ್ಲಿಕ್ ಶಾಲೆ ಹಾಗೂ ಹೂಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ರಾಷ್ಟ್ರ ಧ್ವಜಕ್ಕೆ ವಾಯುಸೇನೆಯ ಹೆಲಿಕಾಪ್ಟರ್ ನಿಂದ ಧ್ವಜಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸೇನೆ, ಬಿಎಸ್ ಎಫ್,ಪೊಲೀಸ್ ಬ್ಯಾಂಡ್, ಕೆಎಸ್ ಆರ್ ಪಿ, ಗೃಹರಕ್ಷಕದಳದವರು ಭಾಗಿಯಾಗಿದ್ದರು.












Click it and Unblock the Notifications