ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋಡಬಿತ್ತನೆ ಟೆಂಡರ್‌ಗೆ ಸರ್ಕಾರದಿಂದ ತಾತ್ಕಾಲಿಕ ತಡೆ

|
Google Oneindia Kannada News

ಬೆಂಗಳೂರು, ನವೆಂಬರ್ 7: ಯಾವುದೇ ಕಾರಣಕ್ಕೂ ಮೋಡಬಿತ್ತನೆ ಮುಂದುವರೆಸಬಾರದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಜಲಪ್ರಳಯ ಆಗಿದೆ. ಈ ಸಂದರ್ಭದಲ್ಲಿ ಮೋಡಬಿತ್ತನೆ ಬೇಡ ಎನ್ನುವುದು ನನ್ನ ನಿರ್ಧಾರ, ಮೋಡ ಬಿತ್ತನೆಗೆ ಕಳೆದ ಸರ್ಕಾರ 2 ವರ್ಷದ ಟೆಂಡರ್ ಕರೆದಿತ್ತು.

ರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ

ಅವರು ಯಾರಿಗೆ ಟೆಂಡರ್ ಕೊಟ್ಟಿದ್ದಾರೆ ಎನ್ನುವುದು ತಿಳಿದಿಲ್ಲ. ಹೀಗಾಗಿ ಆ ಟೆಂಡರ್ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಯಾರಿಗೆ ಟೆಂಡರ್ ಕೊಟ್ಟಿದ್ದಾರೆ , ಏನು ಆಗಿದೆ ಎನ್ನುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Government Temporarily Stops CloudSeeding Tender

ಹೀಗಾಗಿ ಮೋಡ ಬಿತ್ತನೆ ಟೆಂಡರ್‌ಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ. ಯಾರಿಗೆ ಯಾಕೆ ಗುತ್ತಿಗೆ ಕೊಟ್ಟಿದ್ದಾರೆ ಅದು ನಮಗೆ ಸಂಬಂಧ ಇಲ್ಲ , ರಾಜ್ಯದ ಹಣಕಾಸು ಸರಿಯಾಗಿ ಬಳಕೆಯಾಗಬೇಕು , ಎರಡು ವರ್ಷ ಮೋಡ ಬಿತ್ತನೆ ಅಗ್ರಿಮೆಂಟ್ ಇದೆಯಾ ಎಂದು ವಿಚಾರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಮಳೆ ಬರ್ತಿದೆ ಇನ್ನೇನು ಮೋಡ ಬಿತ್ತನೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮೋಡಬಿತ್ತನೆಯ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The Karnataka Is In Flood Like situation, The decision has been made not to continue cloudseeding for any reason Said Minister KS Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X