Government Employees: ಜಿಬಿಎ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳು - ಸಿಬ್ಬಂದಿಗೆ ಈ ಕಾರಣಕ್ಕೆ ವೇತನ ಕಡಿತ, ಎಫ್‌ಐರ್‌ ಎಚ್ಚರಿಕೆ

Government Employee: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಆಯುಕ್ತರು ಮುಂದಾಗಿದ್ದಾರೆ.

ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗಣತಿದಾರರಿಂದ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿ ನಿಧಾನವಾಗಿದ್ದು ತೃಪ್ತಿಕರವಾಗಿಲ್ಲ. ಹೀಗಾಗಿ ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Government Employee

ಬೆಂಗಳೂರು ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 23,500 ಗಣತಿದಾರರು ಮತ್ತು 2,900 ಮೇಲ್ವಿಚಾರಕರಿದ್ದು, ಇವರಲ್ಲಿ ಸುಮಾರು 6,000 ಮಂದಿ ಅನುಮತಿಯಿಲ್ಲದೆ ಗೈರಾಗಿದ್ದಾರೆ. ಇವರಿಗೆ ಕಾರಣ ಕೇಳಿ ನೋಟಿಸ್‌ಗಳು, ದೈನಂದಿನ ಎಸ್‌ಎಂಎಸ್‌ಗಳು ಮತ್ತು ಕರೆಗಳ ಮೂಲಕ ಸಂಪರ್ಕಿಸಲಾಗುತ್ತಿದೆ. ತಕ್ಷಣ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ "ಕೆಲಸ ಇಲ್ಲ-ವೇತನ ಇಲ್ಲ" (No Work-No Pay) ನಿಯಮ, ಸೇವೆ ವ್ಯತ್ಯಯ (Break-in-Service) ಆದೇಶಗಳು ಜಾರಿಗೊಳ್ಳಲಿವೆ ಹಾಗೂ ಅತ್ಯಂತ ನಿರ್ಲಕ್ಷ್ಯ ತೋರಿದವರ ವಿರುದ್ಧ ಎಫ್‌ಐಆರ್ ಕೂಡಾ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಈ ಮೂಲಕ ಸೂಚಿಸಲಾಗಿದೆ. ಇಲ್ಲವಾದಲ್ಲಿ 24-04-2026 ರೊಳಗೆ ಸೂಕ್ತ ಕ್ರಮಕ್ಕೆ ಆದೇಶಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಭಾರತದ ಜನಗಣತಿ-2027 ರ ಮೊದಲನೇ ಹಂತದ ಕಾರ್ಯವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027 ರಲ್ಲಿನ 2ನೇ ಹಂತದ ಜನಗಣತಿ ಕಾರ್ಯದ ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಪೂರ್ಣಗೊಳಿಸುವ ಹಾಗೂ ಉದ್ದೇಶದಿಂದ ಕನಿಷ್ಠ ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರನ್ನು ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ. ಈ ಸುವರ್ಣಾಕಾಶವನ್ನು ಆಸಕ್ತ, ವಿದ್ಯಾರ್ಥಿಗಳು, ಪುರುಷ ಹಾಗೂ ಮಹಿಳೆಯವರು ಉಪಯೋಗಿಸಿಕೊಂಡು ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಲು ಆಯುಕ್ತರು ಮನವಿ ಮಾಡಿದ್ದಾರೆ.

Government Employees: ನೇರ ಸಂದರ್ಶನ (ವಾಕ್ ಇನ್) ದಿನಾಂಕ- ಸ್ಥಳ ವಿವರ

ದಿನಾಂಕ: 22-04-2026 ರಂದು (ಬುಧವಾರ)

ಸಮಯ: ಬೆಳಿಗ್ಗೆ 9ಕ್ಕೆ

ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್), ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+