"ಗೌರಿ ಲಂಕೇಶ್ ನಮ್ಮಮ್ಮ, ಅವರು ನನ್ನ ಹೃದಯದಲ್ಲಿ ಜೀವಂತವಾಗಿರುತ್ತಾರೆ"

ಬೆಂಗಳೂರು, ಸೆಪ್ಟೆಂಬರ್ 6: "ಗೌರಿ ಲಂಕೇಶ್ ನಮ್ಮಮ್ಮ ಇದ್ದಹಾಗೇ. ಅವರು ನನ್ನ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ" ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ, ಗೌರಿ ಲಂಕೇಶ್ ಅವರ ಮಾನಸ ಪುತ್ರ ಕನ್ನಯ್ಯ ಕುಮಾರ್ ಟ್ವೀಟ್ ಮಾಡಿದ್ದಾರೆ.

ಗೌರಿ ಲಂಕೇಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕನ್ನಯ್ಯ ಕುಮಾರ್ ಗೌರಿ ಲಂಕೇಶ್ ಅವರನ್ನು ಆಗಾಗ ಭೇಟಿಯಾಗಿ ಸಲಹೆ-ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ನನಗೆ ಧೈರ್ಯವಾಗಿ ಸತ್ಯ ಹೇಳುವುದನ್ನು ಕಲಿಸಿದ್ದೇ ಗೌರಿ ಲಂಕೇಶ್ ಎಂಬುದನ್ನೂ ಕನ್ನಯ್ಯ ಕುಮಾರ್ ಸ್ಮರಿಸಿದ್ದಾರೆ.

Gouri Lankesh was like a mother to me., will always be alive in my heart: Kanhaiya Kumar

ಆಕೆ ನಿರ್ಭೀತ ವ್ಯಕ್ತಿತ್ವದವರು, ಅವರ ಸಾವು ತೀವ್ರ ಆಘಾತ, ದುಃಖ ತಂದಿದೆ. ಆಕೆಯನ್ನು ಹೇಡಿಗಳು ಕೊಂದಿದ್ದಾರೆ. ಅವರ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಸಹ ಟ್ವೀಟ್ ಮಾಡಿದ್ದಾರೆ.

ದೇಶವಿರೋಧಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಜೆಎನ್ ಯು ವಿದ್ಯಾರ್ಥಿಯಾಗಿದ್ದ ಕನ್ನಯ್ಯ ಅವರನ್ನು ಬಂಧಿಸಲಾಗಿತ್ತು. ಯುವಕನ ದಿಟ್ಟ ವ್ಯಕ್ತಿತ್ವ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಗೌರಿ ಲಂಕೇಶ್ ಅವರು ಕನ್ನಯ್ಯ ಅವರನ್ನು ಪುತ್ರವಾತ್ಸಲ್ಯದಿಂದ ನೋಡುತ್ತಿದ್ದರು.

ಇಷ್ಟೇ ಅಲ್ಲ, ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥರಾದ ಜಿಗ್ನೇಶ್ ಮೆವಾನಿ, ಉಮರ್ ಖಾಲಿದ್, ಶೆಶ್ಲಾ ರಶೀದ್ ಸಹ ಗೌರಿ ಲಂಕೇಶ್ ಅವರ ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ನಮ್ಮೆಲ್ಲರಿಗೂ ಅವರು ತಾಯಿಯಂತಿದ್ದರು, ಇದೀಗ ತಾಯಿಯನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+