• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದರೋಡೆ

|

ಬೆಂಗಳೂರು, ಫೆಬ್ರವರಿ 27: ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಬೆಳಗಿನ ಜಾವ ಮೂವರು ಮಹಿಳೆಯರನ್ನು ತಂಡವೊಂದು ಅಡ್ಡಹಾಕಿ ದರೋಡೆ ಮಾಡಿದೆ.

ಬೆಳಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ಉದ್ಯೋಗಿ ಸುಮನಾ ರಾಯ್ ಎಂಬುವವರು ದೂರು ನೀಡಿದ್ದಾರೆ. ಚೆನ್ನೈಗೆ ತೆರಳುವ ಸಂಬಂಧ ತಾಯಿ ಮತ್ತು ಚಿಕ್ಕಮ್ಮನ ಜೊತೆ ರೈಲು ನಿಲ್ದಾಣಕ್ಕೆ ಬಂದು ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿಗಾಗಿ ಕಾಯುತ್ತಿದ್ದರು.

ಪೊಲೀಸರಂತೆ ಬರುವ ಕಳ್ಳರು ಹೇಗೆಲ್ಲಾ ನಿಮ್ಮನ್ನು ಯಾಮಾರಿಸ್ತಾರೆ ನೋಡಿ..

ಈ ವೇಳೆ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದ ಐದು ಮಂದಿಯ ಗ್ಯಾಂಗ್ ಇವರನ್ನು ಸುತ್ತುವರೆದು ದರೋಡೆ ನಡೆಸಿದೆ. ರಾಯ್ ಅವರ ಬಳಿ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅದರಲ್ಲಿ ಎರಡು ಚಿನ್ನದ ಬಳೆಗಳು 50 ಸಾವಿರ ನಗದು, ಮೊಬೈಲ್ , ಆಧಾರ್ ಕಾರ್ಡ್ ಸೇರಿ ವಿವಿಧ ದಾಖಲೆಗಳಿದ್ದವು.

ಎಲ್ಲ ಸೇರಿ 1.65 ಲಕ್ಷ ರೂ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ರಾಯ್ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ದರೋಡೆ ಕೋರರ ಸುಳಿವು ಸಿಕ್ಕಿದೆ. ಅವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
Five goons robbed a lady in city railway station. This was happened during early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X