ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡ ಗೂಗಲ್

|
Google Oneindia Kannada News

ಬೆಂಗಳೂರು, ಜುಲೈ 28: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ. ಮೆಟ್ರೋ ಸಂಚಾರದ ಹೊರತಾಗಿಯೂ, ಹಲವು ರಸ್ತೆಗಳ ವೈಟ್ ಟಾಪಿಂಗ್, ಗುಂಡಿಗಳು, ರಸ್ತೆ ದುರಸ್ಥಿ ಕಾರ್ಯಗಳಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಆದರೆ ಬೆಂಗಳೂರಿನ ಜನರ ಟ್ರಾಫಿಕ್ ತಲೆ ಬಿಸಿ ಕಡಿಮೆ ಮಾಡಲು ಗೂಗಲ್ ಸಿದ್ಧವಾಗಿದೆ!.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದೊಂದಿದೆ ಗೂಗಲ್, ಬೆಂಗಳೂರು ಪೊಲೀಸರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ರಸ್ತೆ ಅಗೆಯುವುದಕ್ಕೆ ನಿಷೇಧ ಹೇರಿದ ಬಿಬಿಎಂಪಿ!ರಸ್ತೆ ಅಗೆಯುವುದಕ್ಕೆ ನಿಷೇಧ ಹೇರಿದ ಬಿಬಿಎಂಪಿ!

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ 10 ಭಾರತೀಯ ನಗರಗಳಲ್ಲಿ ಪರವಾನಗಿ ಪಡೆದ ಸ್ಥಳೀಯ ಪಾಲುದಾರರ ಹೊಸ ಚಿತ್ರಗಳೊಂದಿಗೆ 150,000 ಕಿಲೋ ಮೀಟರ್ ಗಿಂತಲೂ ಹೆಚ್ಚು ವ್ಯಾಪಿಸಿರುವ ಬೀದಿ ರಸ್ತೆಗಳ (ಸ್ಟ್ರೀಟ್ ವ್ಯೂವ್) ಮಾಹಿತಿಯನ್ನು ಗೂಗಲ್ ಮ್ಯಾಪ್ಸ್‌ನಲ್ಲಿ ನೀಡಲಾಗಿದೆ.

"ಇದರಿಂದ ಸ್ಥಳೀಯ ಪೊಲೀಸರಿಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ನಗರದಾದ್ಯಂತ ಟ್ರಾಫಿಕ್ ದಟ್ಟಣೆಯನ್ನು ತಿಳಿಯಲು ಪೊಲೀಸರಿಗೆ ಸಹಾಯವಾಗಲಿದೆ. ಮತ್ತು ಅದನ್ನು ನಿರ್ವಹಿಸಲು ಸಹಾಯ ಮಾಡಲಿದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಗೂಗಲ್ ಇದನ್ನು ಕೋಲ್ಕತ್ತಾ ಮತ್ತು ಹೈದರಾಬಾದ್‌ ನಗರಗಳಿಗೂ ವಿಸ್ತರಿಸಲಿದೆ" ಎಂದು ಗೂಗಲ್ ಕಂಪನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

 ಸಿಗ್ನಲ್‌ನಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ

ಸಿಗ್ನಲ್‌ನಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ

ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ ಮಾತನಾಡಿ, "ಗೂಗಲ್‌ ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ನಗರ ನಮ್ಮ ಬೆಂಗಳೂರು. ಕಂಪನಿಯು ಒದಗಿಸಿದ ಮಾಹಿತಿಯ ಪ್ರಕಾರ, ಗೂಗಲ್‌ನ ಪರಿಷ್ಕೃತ ಯೋಜನೆಯಿಂದ ಹಗಲಿನಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುವ ಸಮಯವನ್ನು ಸರಾಸರಿ ಶೇಕಡ 20 ರಷ್ಟು ಕಡಿಮೆ ಮಾಡಿದೆ" ಎಂದು ಹೇಳಿದ್ದಾರೆ.

"ಟ್ರಾಫಿಕ್ ದಟ್ಟಣೆ, ರಸ್ತೆ ಅಪಘಾತ, ಇಂಧನ ಬಳಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಗೂಗಲ್‌ನ ಪರಿಷ್ಕೃತ ಯೋಜನೆ ಸಹಾಯಕವಾಗಲಿದೆ" ಎಂದು ಅವರು ಹೇಳಿದರು.

ವಾಹನ ತಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆವಾಹನ ತಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

 ವರ್ಷಾಂತ್ಯಕ್ಕೆ ಭಾರತದ 50 ನಗರಗಳಿಗೆ ವಿಸ್ತರಣೆ

ವರ್ಷಾಂತ್ಯಕ್ಕೆ ಭಾರತದ 50 ನಗರಗಳಿಗೆ ವಿಸ್ತರಣೆ

2022 ರ ಅಂತ್ಯದ ವೇಳೆಗೆ, ಭಾರತದಲ್ಲಿ ಗಲ್ಲಿ ವೀಕ್ಷಣೆಯನ್ನು 50 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲು ಗೂಗಲ್ ಉದ್ದೇಶಿಸಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಥಳೀಯ ಪಾಲುದಾರರು ಗಲ್ಲಿ ವೀಕ್ಷಣೆಯನ್ನು ಸಂಪೂರ್ಣವಾಗಿ ಅನಿಮೇಟೆಡ್ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಸ್ತೆ ಮುಚ್ಚುವಿಕೆ ಮತ್ತು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ದಟ್ಟಣೆಯ ವಲಯಗಳನ್ನು ತಪ್ಪಿಸಲು ಗೂಗಲ್ ಮ್ಯಾಪ್ ಕೆಲಸ ಮಾಡುತ್ತದೆ. ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಎಂಟು ಭಾರತೀಯ ನಗರಗಳಲ್ಲಿನ ನಾಗರಿಕರಿಗೆ ಸಹಾಯ ಮಾಡಲು ಗೂಗಲ್‌ ಸಂಚಾರ ಪೊಲೀಸರು ಮತ್ತು ಸಂಗ್ರಾಹಕರೊಂದಿಗೆ ಸಹ ಕೈಜೋಡಿಸಿದೆ.

 ಈ ಹಿಂದೆ ಅನುಮತಿ ನಿರಾಕರಿಸಿದ್ದ ಕೇಂದ್ರ

ಈ ಹಿಂದೆ ಅನುಮತಿ ನಿರಾಕರಿಸಿದ್ದ ಕೇಂದ್ರ

ಭದ್ರತಾ ಕಾರಣಗಳಿಗಾಗಿ ರಸ್ತೆಗಳು ಮತ್ತು ಇತರ ಸ್ಥಳಗಳ ವಿಹಂಗಮ ಚಿತ್ರಗಳನ್ನು ತೋರಿಸಲು ಸರ್ಕಾರ ಈ ಹಿಂದೆ ಅನುಮತಿ ನೀಡಿರಲಿಲ್ಲ. ಆದರೀಗ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸ್ಟ್ರೀಟ್ ವ್ಯೂ ಸೌಲಭ್ಯ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಮೃತಸರ, ಅಹಮದ್‌ನಗರಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಎರಡು ಸ್ಥಳೀಯ ಕಂಪನಿಗಳ ಸಹಭಾಗಿತ್ವದಲ್ಲಿ ಈ ಸೇವೆಯನ್ನ ಪರಿಚಯಿಸಲಿದೆ.

 ಜೆನೆಸಿಸ್ ಮತ್ತು ಟೆಕ್‌ ಮಹೀಂದ್ರಾ ಸಹಯೋಗ

ಜೆನೆಸಿಸ್ ಮತ್ತು ಟೆಕ್‌ ಮಹೀಂದ್ರಾ ಸಹಯೋಗ

ಜೆನೆಸಿಸ್ ಇಂಟರ್ನ್ಯಾಶನಲ್ ಮತ್ತು ಟೆಕ್ ಮಹೀಂದ್ರಾ ಸಹಭಾಗಿತ್ವದಲ್ಲಿ ಸ್ಟ್ರೀಟ್ ವ್ಯೂ ಅನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.

ಜೆನೆಸಿಸ್ ಇಂಟರ್ನ್ಯಾಶನಲ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಾಜಿದ್ ಮಲಿಕ್ ಪ್ರತಿಕ್ರಿಯೆ ನೀಡಿ, "ಭಾರತದ ಎಲ್ಲಾ ಪ್ರಮುಖ ನಗರಗಳ ಸ್ಟ್ರೀಟ್ ಇಮೇಜಿಂಗ್ ಅನ್ನು ಪ್ರದರ್ಶಿಸಿದ ಮೊದಲ ಭಾರತೀಯ ಸಂಸ್ಥೆ ನಮ್ಮದು. ಭಾರತೀಯ ನಗರಗಳ ಫೋಟೋಗಳನ್ನು ಇನ್ನೂ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ದೇಶದ ಹೆಗ್ಗುರುತುಗಳು, ನಮ್ಮ ಅಕ್ಕ ಪಕ್ಕದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅಥವಾ ಪ್ರವಾಸಗಳನ್ನು ಆಯೋಜನೆ ಮಾಡಲು ಅನುಕೂಲವಾಗುತ್ತದೆ" ಎಂದು ಹೇಳಿದ್ದಾರೆ.

English summary
Google ties up with Bengaluru Traffic Police reduce road traffic problems, Street View is offered on Google Maps with new imagery licenced from local partners spanning more than 150,000km across 10 Indian cities, including Bengaluru. revised plan by Google resulted in an average 20% reduction in waiting time at traffic signal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X