ಸಿವಿ ರಾಮನ್ ಹುಟ್ಟುಹಬ್ಬಕ್ಕೆ ಗೂಗಲ್ ನಮನ

ಬೆಂಗಳೂರು, ನ.7: ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರ 125ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಇಂಡಿಯಾ ಸಂಸ್ಥೆ ತನ್ನ ಸರ್ಚ್ ಇಂಜಿನ್ ಮುಖ್ಯಪುಟದಲ್ಲಿ ಸಿವಿ ರಾಮನ್ ಭಾವಚಿತ್ರ ಹಾಗೂ ಕಿರಣಗಳು ಹೊರಸೂಸುತ್ತಿರುವ ಡೂಡ್ಲ್ ಹಾಕುವ ಮೂಲಕ ಗೌರವ ಸಲ್ಲಿಸಿದೆ.

ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 1000ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ.

ಇತ್ತೀಚೆಗೆ ಬೆಂಗಳೂರು ನಂಟು ಹೊಂದಿದ್ದ ವಿಶ್ವಶ್ರೇಷ್ಠ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಡೂಡ್ಲ್ ಹಾಕಲಾಗಿತ್ತು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ನೀಡಿದ್ದ ಕನ್ನಡಿಗರೇ ಆಗಿ ಹೋಗಿದ್ದ ಸಿವಿ ರಾಮನ್ ಅವರ ಗೌರವಾರ್ಥ ಡೂಡ್ಲ್ ಪ್ರಕಟಿಸಲಾಗಿದೆ.

2011ರಲ್ಲಿ 150 ಡೂಡ್ಲ್ ಗಳು ಗೂಗಲ್ ಮುಖ್ಯಪುಟದಲ್ಲಿ ರಾರಾಜಿಸಿದೆ. ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುವ ಗೂಗಲ್, ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸರ್ ಸಿವಿ ರಾಮನ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ಓದಿ..

ತಮಿಳುನಾಡು ಕಂನಾಡು

ತಮಿಳುನಾಡು ಕಂನಾಡು

ತಮಿಳುನಾಡಿನ ತಿರುಚಿನಾಪಳ್ಳಿಯ ತಿರುವಣ್ನೈಕಾವಲ್ ನಲ್ಲಿ ಹುಟ್ಟಿದರೂ ಕಂನಾಡಿನಲ್ಲಿ ನೆಲೆಸಿದ್ದ ಚಂದ್ರಶೇಖರ ವೆಂಕಟರಾಮನ್ ಕರ್ನಾಟಕವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಭೌತವಿಜ್ಞಾನಿ,

ನೊಬೆಲ್ ಪ್ರಶಸ್ತಿ ಪುರಸ್ಕೃತ. ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ. ಭೌತವಿಜ್ಞಾನಕ್ಕೆ ಹೊಸ ಆಯಾಮ ನೀಡಿ, ಭೌತ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೆಸರು ಚಿರಸ್ಥಾಯಿಯಾಗಿ ನೆಲೆಗೊಳಿಸಿ, ಶಾಶ್ವತ ಕೀರ್ತಿ ಪಡೆದ ವಿಜ್ಞಾನಿ. ಬೆಂಗಳೂರಿನಲ್ಲಿ ರಾಮನ್ ಎಫೆಕ್ಟ್ ಬಗ್ಗೆ ಪ್ರಕಟಿಸಿದ್ದು ಸೇರಿದಂತೆ ಅವರ ಅಂತಿಮದಿನಗಳು ಕೂಡಾ ಇಲ್ಲೆ ಕಳೆದು ವಿಧಿವಶರಾದರು.

ಸಂದ ಗೌರವ: 'ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ' (1924), ನೈಟ್ ಹುಡ್ ಪ್ರಶಸ್ತಿ' (1929), 'ನೋಬೆಲ್ ಪ್ರಶಸ್ತಿ (1930), 'ಮೈಸೂರು ಮಹಾರಾಜ' ರಿಂದ 'ರಾಜ ಸಭಾ ಭೂಷಣ ಗೌರವ' (1935), 'ಭಾರತ ರತ್ನ ಪ್ರಶಸ್ತಿ (1954)

ನವೆಂಬರ್ ನಲ್ಲಿ ಹುಟ್ಟು ಸಾವು

ನವೆಂಬರ್ ನಲ್ಲಿ ಹುಟ್ಟು ಸಾವು

ರ್. ಸಿ.ವಿ. ರಾಮನ್ ಜನಿಸಿದ್ದು, 1888ರ ನವೆಂಬರ್ 7ರಂದು. 82 ವರ್ಷಗಳ ತುಂಬು ಜೀವನ ನಡೆಸಿದ ರಾಮನ್ ಕೊನೆಯುಸಿರೆಳೆದದ್ದೂ ನವೆಂಬರ್ನಲ್ಲೇ. ಭೌತವಿಜ್ಞಾನಕ್ಕೆ ಅಭೂತಪೂರ್ವ ಕಾಣಿಕೆ ಇತ್ತ ಅವರು, ಭೌತಿಕ ಶರೀರ ತೊರೆದದ್ದು, 1970ರ ನವೆಂಬರ್ 21ರಂದು. ಹುಟ್ಟು - ಸಾವುಗಳೆರಡನ್ನೂ ನವೆಂಬರ್‌ನಲ್ಲೇ ಕಂಡರು

ರಾಮನ್ ಎಫೆಕ್ಟ್

ರಾಮನ್ ಎಫೆಕ್ಟ್

ರಾಮನ್ ಸಂಶೋಧನೆ ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದೇ ಜಗದ್ವಿಖ್ಯಾತ. 1928ರ ಫೆಬ್ರವರಿ 28ರಲ್ಲಿ ಕೆಎಸ್ ಕೃಷ್ಣನ್ ಜತೆ ಆವಿಷ್ಕಾರವಾದ ಸಂಗತಿಯನ್ನು ಮಾರ್ಚ್ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿಜ್ಞಾನ ವೇದಿಕೆಯಲ್ಲಿ ಹಂಚಿಕೊಂಡಾಗ ಅಲ್ಲಿದ್ದ ಸದಸ್ಯರಿಗೆ ರೋಮಾಂಚಕ ಅನುಭವ. ಜಗತ್ತಿಗೇ ತಿಳಿಯದ ಹೊಸ ವಿಷಯವನ್ನು ಸಂಶೋಧಕರ ಬಾಯಿಂದಲೇ ಕೇಳಿ ತಿಳಿಯುವ ಅವಿಸ್ಮರಣೀಯ ಸದವಕಾಶ ಸಿಕ್ಕಿತ್ತು.

ಆಕಾಶದ ನೀಲಿ ಬಣ್ಣ ಅಚ್ಚರಿ

ಆಕಾಶದ ನೀಲಿ ಬಣ್ಣ ಅಚ್ಚರಿ

ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಎನ್ನುವ ವಿಚಾರ ಬೆಳಕಿಗೆ ಬಂತು.

ರಾಮನ್ ಪರಿಣಾಮ ವಿವರಣೆ

ರಾಮನ್ ಪರಿಣಾಮ ವಿವರಣೆ

ಬೆಳಕಿನ ಕಿರಣಗಳು ಪಾರದರ್ಶಕ ವಸ್ತುಗಳ ಮೂಲಕ ಹರಿಯುವಾಗ ಹಲವು ಅಣುಗಳಿಂದ ಚೈತನ್ಯ ಪಡೆದು, ಕೆಲವು ಅಣುಗಳಿಗೆ ಚೈತನ್ಯ ನೀಡುತ್ತವೆ. ಆ ರೀತಿ ಚದುರಲ್ಪಟ್ಟ ಬೆಳಕು ಪತನಗೊಂಡ ಬೆಳಕಿಗಿಂತಲೂ ಕಡಿಮೆ ತರಂಗಾಂತರ ಹಾಗೂ ಹೆಚ್ಚು ತರಂಗಾಂತರ ಹೊಂದಿರುತ್ತದೆ. ಬೆಳಕು ಬಿಳಿಯ ಬಟ್ಟೆ ಅಥವಾ ಬಿಳಿ ಕಾಗದದ ಮೇಲೆ ಹಾಯ್ದಾಗ ಯಾವುದೇ ವ್ಯತ್ಯಾಸ ಆಗದು. ಆದರೆ ಅದೇ ಬೆಳಕು ಬಣ್ಣದ ಬಟ್ಟೆ ಅಥವಾ ಬಣ್ಣದ ಕಾಗದದ ಮೇಲೆ ಬಿದ್ದಾಗ, ಸ್ವಲ್ಪ ಬೆಳಕು (ಸ್ಪೆಕ್ಟ್ರಂ) ವರ್ಣದಲ್ಲಿ ಸೇರಿ ಚದುರುವುದರಿಂದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆಯಾದರೂ ಅದು ಅದರ ನೈಜ ವರ್ಣವಲ್ಲವೆಂಬ ವಿಚಾರಧಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+