Property Tax: ಆಸ್ತಿ ತೆರಿಗೆ ಮೇಲೆ ಭರ್ಜರಿ ಡಿಸ್ಕೌಂಟ್, ಕಸದ ಟ್ಯಾಕ್ಸ್‌ಗೂ ಬ್ರೇಕ್‌!

Property Tax: ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ರಾಜ್ಯದ ಎರಡು ಮಹಾನಗರ ಪಾಲಿಕೆಯಿಂದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಆಸ್ತಿದಾರರು ಕಾಲ ಮಿತಿಯ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಿದರೆ ಆಸ್ತಿ ತೆರಿಗೆಯ ಮೇಲೆ ಶೇ 5ರಷ್ಟು ಆಸ್ತಿ ತೆರಿಗೆ ವಿನಾಯಿತಿ ಸಿಗಲಿದೆ. ಅಲ್ಲದೇ ಕೆಲವೊಂದು ಹೆಚ್ಚುವರಿ ಶುಲ್ಕಗಳನ್ನು ಸಹ ತೆಗೆದುಹಾಕಲಾಗಿದೆ. ಇದರಿಂದ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗಿದೆ. ರಾಜ್ಯದ ಯಾವೆಲ್ಲಾ ಮಹಾನಗರಗಳ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿ / ಡಿಸ್ಕೌಂಟ್ ಘೋಷಿಸಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯದಲ್ಲಿ ಬೆಲೆ ಏರಿಕೆಯ ನಡುವೆಯೇ ಎರಡು ಮಹಾನಗರ ಪಾಲಿಕೆಗಳು ಆಸ್ತಿ ತೆರಿಗೆಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಅಂದರೆ 2025- 2026ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಬಂಪರ್‌ ಅಂತಲೇ ಹೇಳಲಾಗುತ್ತಿದೆ. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದೆ. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಈ ಎರಡು ಪಾಲಿಕೆಗಳು ಕೊಟ್ಟಿರುವ ಗುಡ್‌ನ್ಯೂಸ್‌ಗಳೇನು ಎನ್ನುವುದನ್ನು ನೋಡೋಣ...

Good News for Property Owners Huge Discount on Property Tax and No Garbage Tax

ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ಆಸ್ತಿದಾರರಿಗೂ ಆಸ್ತಿ ತೆರಿಗೆ ಪಾವತಿಯ ಮೇಲೆ ಬರೋಬ್ಬರಿ ಶೇ 5ರಷ್ಟು ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಸಹ ಆಸ್ತಿ ತೆರಿಗೆಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಬಿಬಿಎಂಪಿಯು 2025 -2026ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30-04-2025ರ ಒಳಗಾಗಿ ಪಾವತಿ ಮಾಡಿದರೆ, ನಿಮಗೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ಮೂಲಕ ಶೇ 5ರಷ್ಟು ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಬಿಬಿಎಂಪಿ ಆಸ್ತಿ ತೆರಿಗೆ ವೆಬ್‌ ಮೂಲಕ ಪಾವತಿ ಮಾಡುವುದು ಹೇಗೆ: ಇನ್ನು ಆಸ್ತಿದಾರರು ಅತ್ಯಂತ ಸರಳವಾಗಿ ಆನ್‌ಲೈನ್‌ಲ್ಲಿಯೇ ಬಿಬಿಎಂಪಿಯ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. http //bbmptax.karnataka.gov.in ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ನೀವು ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಅವಕಾಶ ನೀಡಲಾಗಿದೆ.

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಿಂದಲೂ ಬಂಪರ್

ಇನ್ನು ಇದೇ ಸಂದರ್ಭದಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಸಹ ಬಂಪರ್ ಗುಡ್‌ನ್ಯೂಸ್‌ ನೀಡಿದೆ. ಆಸ್ತಿ ತೆರಿಗೆಯ ಮೇಲೆ ಶೇ5ರಷ್ಟು ಡಿಸ್ಕೌಂಟ್ ಘೋಷಿಸಲಾಗಿದ್ದು. ಆಸ್ತಿದಾರರು ಆಸ್ತಿ ತೆರಿಗೆಯನ್ನು ಮೇ 31ನೇ ತಾರೀಖಿನ ಒಳಗೆ ಪಾವತಿ ಮಾಡಿದರೆ ಆಸ್ತಿ ತೆರಿಗೆಯ ಮೇಲೆ 5% ರಿಯಾಯತಿ ಸಿಗಲಿದೆ. ಆನ್‌ಲೈನ್ ಮೂಲಕ ಪಾವತಿಸಲು ಈ ಲಿಂಕ್ https://hdmc.in/WebsiteHDMC/PropertySearch.aspx ಬಳಸಿ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ.

ಇದರೊಂದಿಗೆ ನಾಲ್ಕು ಪ್ರಮುಖ ಗುಡ್‌ನ್ಯೂಸ್‌ಗಳನ್ನು ಸಹ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ನೀಡಿದೆ.

* UGD (ಒಳಚರಂಡಿ) ಬಳಕೆ ಶುಲ್ಕ ಸಂಪೂರ್ಣ ರದ್ದು ಮಾಡಲಾಗಿದೆ.

* ಮೊದಲಿದ್ದ SWM (ಘನತ್ಯಾಜ್ಯ ನಿರ್ವಹವಣೆ ಉಪಕರ)ಸೆಸ್‌ ರದ್ದು ಮಾಡಲಾಗಿದೆ.

* ಘನತ್ಯಾಜ್ಯ ನಿರ್ವಹಣೆ ಬಳಕೆ ಶುಲ್ಕ ಯಥಾಸ್ಥಿತಿ ಮುಂದುವರಿಯಲಿದೆ.

* ಖಾಲಿ ಜಾಗಕ್ಕೆ ನಿಗದಿಪಡಿಸಿದ್ದ SWM ಬಳಕೆ ಶುಲ್ಕ ಪ್ರತಿ ಚ. ಅಡಿಗೆ 50 ಪೈಸೆಯಿಂದ 25 ಪೈಸೆಗೆ ಇಳಿಕೆ ಮಾಡಲಾಗಿದೆ ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರು ದಿನ ಮಾತ್ರ ಅವಕಾಶ: ಇನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ ಟ್ಯಾಕ್ಸ್‌ ರಿಯಾಯಿತಿ ಪಡೆಯುವುದಕ್ಕೆ ಇನ್ನು ಮೂರು ದಿನಗಳು ಮಾತ್ರ ಕಾಲಾವಕಾಶವಿದೆ. ಬಿಬಿಎಂಪಿಯ ಪ್ರಾಪರ್ಟಿ ಟ್ಯಾಕ್ಸ್‌ನಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯುವುದಕ್ಕೆ ನೀವು ಏಪ್ರಿಲ್‌ 30ರ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಬೇಕು. ಆಗ ಮಾತ್ರ ರಿಯಾಯಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+