Bengaluru Property: ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್: ಎ ಖಾತಾ ಪರಿವರ್ತನೆ ಶುಲ್ಕ ರಿಯಾಯಿತಿ, ಹೊಸ ಅಪ್ಡೇಟ್ಸ್‌

B Khata to A Khata: ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಆಸ್ತಿದಾರರಿಗೆ ಹಾಗೂ ಬಿ ಖಾತಾ ಆಸ್ತಿದಾರರಿಗೆ ಮತ್ತೊಂದು ಬಂಪರ್ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ. ಆಸ್ತಿಗಳನ್ನು ಬಿ - ಖಾತಾದಿಂದ ಎ - ಖಾತಾ ಆಸ್ತಿ ಪರಿವರ್ತನೆಗೆ ಸರ್ಕಾರವು ವಿನಾಯಿತಿ ನೀಡಿದೆ. ಬಿ - ಖಾತಾದಿಂದ ಎ- ಖಾತಾ ಆಸ್ತಿ ಪರಿವರ್ತನೆಗೆ ಗೈಡ್‌ಲೈನ್ಸ್‌ ವ್ಯಾಲ್ಯೂ ಮೊತ್ತವನ್ನು ಶೇ 5ರಿಂದ ಶೇ 2ಕ್ಕೆ ಇಳಿಸಲಾಗಿದೆ. ಇದೀಗ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಇನ್ನೆಷ್ಟು ದಿನ ಬಾಕಿ ಉಳಿದಿದೆ ಎನ್ನುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.

ಕರ್ನಾಟಕ ಸರ್ಕಾರ - ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್ ಕೊಡಲಾಗಿದೆ. ಬೆಂಗಳೂರು ನಗರ ಪಾಲಿಕೆಗಳಾದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತಿಸಲು ಕೇವಲ ನಿಗದಿತ ಶುಲ್ಕ ಶೇ. 5%ರ ಬದಲಿಗೆ ಶೇ.2% ಇರಲಿದೆ. ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ ಈಗಲೇ ಅರ್ಜಿ ಸಲ್ಲಿಸಿ BBMP eAasthi.karnataka.gov.in/BtoAKhata ಎಂದು ಹೇಳಲಾಗಿದೆ.

B Khata

ಶೇ.60ರಷ್ಟು ಉಳಿತಾಯ

ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಯನ್ನು ಈಗ ಮಾಡಿಕೊಂಡರೆ, ಆಸ್ತಿದಾರರಿಗೆ ಶೇ 60ರಷ್ಟು ಉಳಿತಾಯ ಆಗಲಿದೆ. ಈ ರಿಯಾಯಿತಿಯು 23.08.2026 ರವರೆಗೆ ಮಾತ್ರ ಲಭ್ಯ ಇರಲಿದೆ. ಈ ಮೊತ್ತವು ಕಳೆದ ಬಾರಿ ಸರ್ಕಾರದ ನೀಡಿದ್ದ ರಿಯಾಯಿತಿಗಿಂತಲೂ ಹೆಚ್ಚಾಗಿದೆ. ಕಳೆದ ಬಾರಿ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶೇ 5ರಷ್ಟು ಶುಲ್ಕವನ್ನು ವಿಧಿಸಿತ್ತು. ಆದರೆ ಇದೀಗ ಆಸ್ತಿಗಳ ಪರಿವರ್ತನೆಗೆ ಕರ್ನಾಟಕ ಸರ್ಕಾರವು ಶೇ 2 ಶುಲ್ಕ ವಿಧಿಸಿದೆ.

ಆಸ್ತಿಗಳ ಡಿಜಿಟಲೀಕರಣ

ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆಯೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಬೆಂಗಳೂರಿನ ಆಸ್ತಿ ಮಾಲೀಕರ ದಾಖಲೆಗಳನ್ನು ಡಿಜಿಟಲೀಕರಣ‌ ಮಾಡಲಾಗಿದೆ. ಇ ಖಾತ ಮೂಲಕ ಭೂ ಗ್ಯಾರಂಟಿ ನೀಡಲಾಗಿದೆ.‌‌ ಈ ನಗರಕ್ಕೆ ಬಂದು ಕಷ್ಟ ಪಟ್ಟು ಆಸ್ತಿ ಸಂಪಾದಿಸಿದ್ದಾರೆ ಅವರ ಪರವಾಗಿ ನಮ್ಮ ಸರ್ಕಾರ ನಿಂತಿದೆ. ಬಿ ಖಾತೆಯಿಂದ ಎ ಖಾತೆ ಮಾಡಿಕೊಡಲಾಗುತ್ತಿದೆ. ಕಷ್ಟಕಟ್ಟು ಆಸ್ತಿ ‌ಸಂಪಾದಿಸಿದವರ ಪರವಾಗಿ ನಮ್ಮ ಸರ್ಕಾರವಿದೆ ಎಂದು ಅವರು ಹೇಳಿದ್ದಾರೆ.

A-B & E-Khata: ಎ- ಖಾತಾ, ಬಿ - ಖಾತಾ ಮತ್ತು ಇ ಖಾತಾದಲ್ಲಿ ಮಹತ್ವದ ಬದಲಾವಣೆ, ಹೊಸ ಅಪ್ಡೇಟ್ಸ್‌ ಇಲ್ಲಿದೆ
A-B & E-Khata: ಎ- ಖಾತಾ, ಬಿ - ಖಾತಾ ಮತ್ತು ಇ ಖಾತಾದಲ್ಲಿ ಮಹತ್ವದ ಬದಲಾವಣೆ, ಹೊಸ ಅಪ್ಡೇಟ್ಸ್‌ ಇಲ್ಲಿದೆ

ನಗರದ ಅಭಿವೃದ್ಧಿಗೆ 1.25 ಲಕ್ಷ ಕೋಟಿ ಯೋಜನೆ

ಬೆಂಗಳೂರು ನಗರದ ಅಭಿವೃದ್ದಿಗೆ 1.25 ಲಕ್ಷ ಕೋಟಿ ರೂ. ಕಾರ್ಯಕ್ರಮ ರೂಪಿಸಿದ್ದೇನೆ. ಕೆಂಪೇಗೌಡರು ಕೇವಲ ಒಕ್ಕಲಿಗರ ಆಸ್ತಿಯಲ್ಲ.‌ ಎಲ್ಲಾ ಜಾತಿ ಧರ್ಮದವರನ್ನು ಸೇರಿಸಿ ಈ ಕಾರ್ಯಕ್ರಮ ರೂಪಿಸಬೇಕು. ಆಗ ಮಾತ್ರ ಕೆಂಪೇಗೌಡರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+