ಜ್ಯುವೆಲರ್ಸ್ ಗೋಡೆ ಕೊರೆದು 3 ಕೋಟಿ ಬೆಲೆಯ 5 ಕೆಜಿ ಚಿನ್ನ ದರೋಡೆ
ಬೆಂಗಳೂರು, ಏಪ್ರಿಲ್ 21: ಚಿನ್ನದ ಆಭರಣದ ಮಳಿಗೆಯ ಗೋಡೆ ಕೊರೆದು ಆಭರಣದ ಅಂಗಡಿಯಲ್ಲಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ 5 ಕೆಜಿ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಬೆಂಗಳೂರಿನ ದಕ್ಷಿಣವಲಯಲ್ಲಿರುವ ಜೆಪಿ ನಗರ ಒಂದನೇ ಹಂತದ ಬಳಿ ಇರುವ ಪ್ರಿಯದರ್ಶನಿ ಜ್ಯುವೆಲರ್ಸ್‌ನಲ್ಲಿ ಭಾನುವಾರ ರಾತ್ರಿ ಈ ದರೋಡೆ ನಡೆದಿದ್ದು, ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿದ್ದ ಚಿನ್ನಾಭರಣದ ಈ ಮಳಿಗೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ನಿಷ್ಕ್ರಿಯಯಗೊಳಿಸಲು ವಿದ್ಯುತ್ ತಂತಿಗಳನ್ನು ಕಿತ್ತು ಸಿಸಿಟಿವಿ ಕ್ಯಾಮೆರಗಳು ಆನ್ ಆಗದಂತೆ ಮಾಡಿ ಜ್ಯುವೆಲರರ್ಸ್ ಒಳಗೆ ನುಗ್ಗಿರುವ ಕಳ್ಳರು ಚಿನ್ನ ದೋಚಿದ್ದಾರೆ.
ಚಿನ್ನದ ಅಂಡಿಯನ್ನು ದೋಚಲು ಮುಂಚಿತವಾಗಿಯೇ ಪ್ಲಾನ್ ಮಾಡಿಕೊಂಡಿದ್ದ ಕಳ್ಳರು ಪಕ್ಕದ ಕಟ್ಟಡದಲ್ಲಿ ಮನೆಯೊಂದರಲ್ಲಿ ಎರಡನೇ ಮಹಡಿಯಲ್ಲಿ ಮನೆ ಬಾಡಿಗೆ ಪಡದಿದ್ದರು ಎನ್ನಲಾಗಿದ್ದು ಇಬ್ಬರು ಸೇರಿಕೊಂಡು ಚಿನ್ನ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆಭರಣದ ಮಳಿಗೆ ಮೂರು ಕಟ್ಟಡವನ್ನು ಹೊಂದಿದ್ದರು ಚಿನ್ನ ದರೋಡೆಗೆ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿಕೊಂಡಿದ್ದರು ಕಳ್ಳರು ಆಭರಣ ಮಳಿಗೆಯನ್ನು ಹೇಗೆ ಕಳ್ಳತನ ಮಾಡಿ ಪರಾರಿಯಾಗಬೇಕೆಂದು ಮುಂಚಿತವಾಗಿ ಯೋಜನೆ ಹಾಕಿಕೊಂಡಿದ್ದರು. ಇನ್ನು ಸುಮಾರು 3 ಕೋಟಿ ಬೆಲೆಯ 5 ಕೆಜಿ ಚಿನ್ನ ಕಳೆದಕೊಂಡಿರುವ ಜೆಪಿ ನಗರದ ಕೆ. ರಾಜು ದೇವಾಡಿಗ ಎಂಬವರೇ ಕಳ್ಳತನವಾದ ಚಿನ್ನದಂಗಡಿಯ ಮಾಲಿಕನಾಗಿದ್ದು, ಇವರು ಕಳೆದ ಶನಿವಾರ ಚಿನ್ನದಂಗಡಿಯಲ್ಲಿದ್ದ ಚಿನ್ನವನ್ನು ಲಾಕರ್‌ನಲ್ಲಿ ಲಾಕ್ ಇಟ್ಟು ಅಂಗಡಿಯ ವ್ಯವಹಾರ ಮುಗಿಸಿಕೊಂಡು ಮನೆಗೆ ಹೋಗಿದ್ದರು.

ಮರುದಿನ ಭಾನುವಾರ ಬೆಳಗ್ಗೆ10 ಗಂಟೆಯ ಸುಮಾರಿಗೆ ಹಿಂತಿರುಗಿ ಬಂದು ಅಂಗಡಿ ತೆರೆದಾಗ ಪೀಠೋಪಕರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿವೆ ಬಿದ್ದಿದವು. ಚಿನ್ನಾಭರಣಗಳ ಲಾಕರ್‌ನ್ನು ಗ್ಯಾಸ್ ಕಟರ್‌ನಿಂದ ಒಡೆದು ಹಾಕಿ ಅಂಗಡಿಯಲ್ಲಿದ್ದ ಬೆಳ್ಳಿಯನ್ನು ಕದಿಯದ ಕಳ್ಳರು ಚೂರು ಚಿನ್ನವನ್ನು ಉಳಿಸದೆ ಎಲ್ಲ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಕೋಟಿ ಬೆಲೆಯ ಚಿನ್ನ ಕಳೆದಕೊಂಡು ಪ್ರಿಯದರ್ಶನಿ ಜ್ಯುವೆಲರ್ಸ್‌ನ ಮಾಲೀಕ ಪೋಲಿಸ ಠಾಣೆಗೆ ದೂರು ದಾಖಲಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದೆವರಿಸಿದ್ದಾರೆ.












Click it and Unblock the Notifications