ಕಲಾರ್ಣವ 2015 : ದಿನವಿಡಿ ಸಂಗೀತ, ಸಾಂಸ್ಕೃತಿಕ ಹಬ್ಬ
ಬೆಂಗಳೂರು, ಜೂ.4: ವಿದ್ವಾಂಸ ಎಚ್.ಎಸ್.ವೇಣುಗೋಪಾಲ್ ಅವರ ನೇತೃತ್ವದ ಸಂಗೀತ ವಿದ್ಯಾಲಯ ಗೋಕುಲಂ ಜೂ.7ರಂದು "ಕಲಾರ್ಣವ 2015" ಸಂಗೀತ ಹಬ್ಬವನ್ನು ಪ್ರಸ್ತುತಪಡಿಸುತ್ತಿದೆ.
ಗೋಕುಲಂ 2007ರಿಂದ ಕಲಾರ್ಣವ ಎಂಬ ಒಂದು ದಿನ ಸಂಗೀತ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ಆಯೋಜಿಸುತ್ತಾ ಬಂದಿದೆ. ಗೋಕುಲಂ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕೊಳಲು ವಾದನ, ಲಯತರಂಗ, ಸುಶಿರ ಸಮ್ಮೇಳನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳ - ಜೆ.ಎಸ್.ಎಸ್. ಸಭಾಂಗಣ. ಜಯನಗರ 8ನೇ ಬ್ಲಾಕ್. ಬೆಂಗಳೂರು.

"ಗೋಕುಲಮ್ " ಸಂಗೀತಶಾಲೆಯು ಕೊಳಲು ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಸಂಸ್ಥೆಯಾಗಿದ್ದು, ಶಾಸ್ತ್ರೀಯ ಸಂಗೀತವನ್ನು ವಿಶ್ರುತಗೊಳಿಸುವುದಕ್ಕಾಗಿ ಶ್ರಮಿಸುತ್ತಿದೆ. ಇಪ್ಪತ್ತು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಸಂಸ್ಥೆಯು ನಿರಂತರವಾಗಿ ಶ್ರೇಷ್ಥ ಸಂಗೀತಗಾರರನ್ನು, ಅಂತೆಯೇ ಉದಯೋನ್ಮುಖ ಕಲಾವಿದರನ್ನೂ ಜಗತ್ತಿಗೆ ಪರಿಚಯಿಸುತ್ತ ಬಂದಿದೆ.
ಗೋಕುಲಮ್ ನ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆ "ಕಲಾರ್ಣವ". 2007ರಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ಲಲಿತಕಲೆಗಳ ಒಂದು ದಿನದ ಈ ಹಬ್ಬಕ್ಕೆ ಅಪಾರ ಜನ ಮನ್ನಣೆ ದೊರೆಯಿತು. ಸಹೃದಯರ ಆಶಯದಂತೆ ಪ್ರತಿ ವರ್ಷ ಜೂನ್ ನ ಮೊದಲ ಭಾನುವಾರ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ 'ವಿದ್ಯಾರ್ಣವ' ಮತ್ತು 'ಕಲಾರ್ಣವ' ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಶ್ರೇಷ್ಠ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶ.
"ವಿದ್ಯಾರ್ಣವ" ತಮ್ಮ ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವುದರ ಮೂಲಕ ಯುವಜನತೆಯನ್ನು ಪ್ರೇರೇಪಿಸಿದ ಹಿರಿಯ ವ್ಯಕ್ತಿತ್ವಗಳಿಗೆ ಧನ್ಯವಾದ ರೂಪದಲ್ಲಿ ಕೊಡಮಾಡುವ ಪ್ರಶಸ್ತಿ ಇದು.

ಈ ಮೊದಲು ಈ ಪ್ರಶಸ್ತಿಗೆ ಭಾಜನರಾದವರು
2008 - ಡಾ|| ಶತಾವಧಾನಿ ಆರ್. ಗಣೇಶ್. ಬಹುಭಾಷಾ ವಿದ್ವಾನ್, ಕವಿ
2009 - ಡಾ|| ಟಿ.ಎಸ್. ಸತ್ಯವತಿ. ಹಿರಿಯ ಸಂಗೀತಗಾರ್ತಿ, ವಿದುಷಿ
2010 - ಶ್ರೀ. ಕೆ.ಎಸ್. ಗೋಪಾಲಕೃಷ್ಣನ್. ಹಿರಿಯ ಕೊಳಲು ವಿದ್ವಾನ್.
2011 - ಡಾ|| ಗುರುರಾಜ ಕರಜಗಿ. ಶಿಕ್ಷಣತಜ್ಞ. ನಿರ್ದೇಶಕರು ACT
2012- ಡಾ|| ಬಿ. ಕೆ. ಎಸ್. ವರ್ಮಾ. ಚಿತ್ರಕಲಾವಿದರು
2013- ಡಾ|| ಬಿ. ಜಯಶ್ರೀ. ಗಾಯಕಿ,ನಟಿ,ರಂಗಭೂಮಿ ಕಲಾವಿದೆ
2014- ವಿದುಷಿ ಭಾನುಮತಿ. ಹಿರಿಯ ಭರತನಾಟ್ಯ ಕಲಾವಿದೆ, ಗುರು.
ಕಲಾರ್ಣವ ಪ್ರಶಸ್ತಿಯನ್ನು ಪ್ರತಿಭಾವಂತ ಮತ್ತು ಸಾಧಕ ಯುವ ಕಲಾವಿದರಿಗೆ ನೀಡಲಾಗುತ್ತಿದೆ.
ಈ ಮೊದಲು ಪ್ರಶಸ್ತಿ ಪುರಸ್ಕೃತರು
* ಕೊಳಲು ವಿದ್ವಾನ್ ಶ್ರೀ ವಿವೇಕ ಕೃಷ್ಣ
* ಕೊಳಲು ವಿದ್ವಾನ್ ಶ್ರೀ ತೇಜಸ್ವೀ ರಘುನಾಥ
* ಸಂಗೀತ ಸಂಯೋಜಕ ಶ್ರೀ ಪ್ರವೀಣ ಡಿ.ರಾವ್
* ಹಿಂದೂಸ್ತಾನೀ ಸಂಗೀತಗಾರ, ಸಾರಂಗಿ ವಾದಕ ಉಸ್ತಾದ್ ಫಯಾಜ್ ಖಾನ್
* ಹಿರಿಯ ಕೊಳಲುವಾದಕ ಶ್ರೀ ಅನ್ನದ ಪ್ರಸನ್ನ ಪಟ್ನಾಯಕ್ ಭುಟ್ಟೋ
* ಶಾಸ್ತ್ರೀಯ ಸಂಗೀತಗಾರ್ತಿ ವಿದುಷಿ ಶ್ರೀರಂಜಿನಿ
* ಗಾಯಕಿ, ನಟಿ, ವಿದುಷಿ ಎಮ್.ಡಿ.ಪಲ್ಲವಿ
* ಶಾಸ್ತ್ರೀಯ ಸಂಗೀತಗಾರ ಶ್ರೀ ಶ್ರೀಕಂಠಂ ನಾಗೇಂದ್ರ ಶಾಸ್ತ್ರಿ
* ಶಾಸ್ತ್ರೀಯ ಕೊಳಲುವಾದಕ ಪಂಡಿತ್ ಪ್ರವೀಣ ಗೋಡ್ಕಿಂಡಿ
* ಕವಿ ಶ್ರೀ. ಕೆ. ಕಲ್ಯಾಣ್
* ಬಾಲಿವುಡ್ ಕೊಳಲುವಾದಕ ಶ್ರೀ. ನವೀನ ಕುಮಾರ್
* ನೃತ್ಯಕಲಾವಿದರಾದ ಶ್ರೀಮತಿ ನಿರುಪಮಾ ಮತ್ತು ಶ್ರೀ ರಾಜೇಂದ್ರ

ವಿದ್ಯಾರ್ಣವ ಪ್ರಶಸ್ತಿಯನ್ನು ಈ ಬಾರಿ ಡಾ|| ಎಸ್.ಆರ್. ರಾಮಸ್ವಾಮಿ ಯವರಿಗೆ ನೀಡಲಾಗುತ್ತಿದೆ. ಇವರು ರಾಷ್ಟ್ರೋತ್ಥಾನದ ಮುಖ್ಯಸಂಪಾದಕರು ಹಾಗೂ ಸಂಸ್ಕೃತಿ ಚಿಂತಕರು.
ಕಲಾರ್ಣವ ಪ್ರಶಸ್ತಿಯನ್ನು ಡಾ|| ಅನನ್ಯಾ ರಾಘವೇಂದ್ರ(ನಿರ್ದೇಶಕರು.ಅನನ್ಯ ಸಂಸ್ಥೆ) ಮತ್ತು ಖ್ಯಾತ ಭತರನಾಟ್ಯ ಕಲಾವಿದೆ ವಿದುಷಿ.ರಂಗಶ್ರೀ (ನಿರ್ದೇಶಕರು, ಕಿಂಕಿಣಿ) ಅವರಿಗೆ ನೀಡಲಾಗುತ್ತಿದೆ.
ಈ ಬಾರಿ ಪ್ರದರ್ಶನಗೊಳ್ಳುತ್ತಿರುವ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು
ಮಕ್ಕಳ ಯಕ್ಷಗಾನ
* ಶ್ರೀ ಪ್ರಹ್ಲಾದಾಚಾರ್ಯ ಅವರಿಂದ ಬೊಂಬೆಯಾಟ ಮತ್ತು ನೆರಳಾಟ ಪ್ರದರ್ಶನ
* ನಾಟ್ಯಾಂಜಲಿ ಮತ್ತು ಮೈಸೂರ್ ನಾಗರಾಜ್ ತಂಡದವರಿಂದ ಭರತನಾಟ್ಯ
* ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ತಂಡದ ರಂಗಪ್ರಸ್ತುತಿ " ತ್ಯಾಗರಾಜ"
* ಶ್ರೀ ಮ್ಯಾಂಡೋಲಿನ್ ಪ್ರಸಾದ್ ರವರ ಮೂಡ್ಸ್ ಆಫ್ ಮ್ಯಾಂಡೋಲಿನ್
* ಶ್ರೀಮತಿ ನಿರುಪಮಾ ಮತ್ತು ಶ್ರೀ ರಾಜೇಂದ್ರ ಅವರ ನೃತ್ಯ - ನಾಟಕ "ಕಥಾ-ಕೀರ್ತನ"
ಹಲವು ಗಾಯಕರನ್ನೊಳಗೊಂಡ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಗಾಯಕರು - ಕುಮಾರಿ. ವಾರಿಜಶ್ರೀ, ಜಯಚಂದ್ರ ರಾವ್. ಪ್ರವೀಣ್. ಡಿ. ರಾವ್, ಪ್ರಮಥ ಕಿರಣ್ , ಶ್ರೀ ಕಾರ್ತಿಕ್ ನಾಗರಾಜ್, ಕೆತ್ ಪೀಟರ್ಸ್ ಮತ್ತು ಶ್ರೀ ವಿಷ್ಣು ರಾಮಪ್ರಸಾದ್. (ಒನ್ ಇಂಡಿಯಾ ಸುದ್ದಿ)












Click it and Unblock the Notifications