ಬೆಂಗಳೂರು-ಫುಕೆಟ್ ನಡುವೆ ಗೋ ಏರ್‌ನಿಂದ ನೇರ ವಿಮಾನ
ಬೆಂಗಳೂರು, ನವೆಂಬರ್ 05 : ದೇಶದ ಪ್ರಮುಖ ಏರ್ ಲೈನ್ಸ್ ಕಂಪನಿ ಗೋ ಏರ್ ಬೆಂಗಳೂರಿನಿಂದ ಹೊಸ ವಿಮಾನ ಸೇವೆಯನ್ನು ಆರಂಭಿಸಲಿದೆ. ಡಿಸೆಂಬರ್ 9ರಿಂದ ಹೊಸ ಸೇವೆಗಳು ಆರಂಭವಾಗಲಿದೆ.
ಗೋ ಏರ್ ಬೆಂಗಳೂರು-ಫುಕೆಟ್-ಬೆಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ದೆಹಲಿ ಮತ್ತು ಮುಂಬೈನಿಂದ ಫುಕೆಟ್‌ಗೆ ನೇರ ವಿಮಾನ ಸೇವೆ ನೀಡುತ್ತಿರುವ ಗೋ ಏರ್ ಬೆಂಗಳೂರಿನಿಂದ ಡಿಸೆಂಬರ್‌ನಲ್ಲಿ ಸೇವೆ ಪ್ರಾರಂಭಿಸಲಿದೆ.
ಬೆಂಗಳೂರು-ಫುಕೆಟ್-ಬೆಂಗಳೂರು ನಡುವೆ ಮೂರು ವಿಮಾನಗಳು ಸಂಚಾರ ನಡೆಸಲಿವೆ. ಕಡಿಮೆ ಬೆಲೆಗೆ ವಿಮಾನ ಸೇವೆ ಒದಗಿಸಲು ಪ್ರಸಿದ್ಧಿ ಪಡೆದಿರುವ ಗೋ ಏರ್ ಆಕರ್ಷಕ ದರದಲ್ಲಿ ವಾಪಸ್ ಬರುವ ಆಫರ್‌ಗಳನ್ನು ನೀಡಲಿದೆ. ದರ ಸುಮಾರು 16,999 ಇರಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಿಂದ ಫುಕೆಟ್‌ಗೆ ನೇರ ವಿಮಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ರಜಾ ದಿನಗಳಲ್ಲಿ, ರಜೆ ಪ್ಯಾಕೇಜ್‌ಗಳ ಮೂಲಕ ಹಲವು ಜನರು ಸಂಚಾರ ನಡೆಸುತ್ತಾರೆ. ಆದ್ದರಿಂದ, ನೇರ ವಿಮಾನ ಸೇವೆ ಆರಂಭಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.












Click it and Unblock the Notifications