• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಕೃಷಿ ವಿವಿ ಘಟಿಕೋತ್ಸವ: ಮೂವರಿಗೆ ಚಿನ್ನದ ಪದಕ

|

ಬೆಂಗಳೂರು, ಮಾರ್ಚ್ 25: ನಗರದ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸೋಮವಾರ ನಡೆದಿದ್ದು, ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಬಲದೇವ್ ಸಿಂಗ್ ದಿಲ್ಲಾನ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯವು ಪಡೆದಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ವಿಶ್ವವಿದ್ಯಾಲಯದ ಸಾಧನೆಗೆ ಹಿಡಿದ ಕೈಗನ್ನಡಿಯಂತಿವೆ ಎಂದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾತ ಮುಂದುವರೆಸಿ ಪೂರಕವೆಂಬಂತೆ ವಿವಿ ವಿದ್ಯಾರ್ಥಿಗಳು ಅಖಿಲ ಭಾರತ ಕೃಷಿ ಪರಿಷತ್ ನಡೆಸಿರುವ ಅಖಿಲ ಭಾರತ ಕಿರಿಯ ಸಂಶೋಧನಾ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಪಡೆದಿರುವ ಸ್ಥಾನವು ಮಾದರಿಯಾಗಿದೆ ಎಂದು ಹೇಳಿದರು.

ಭಾರತದ ಹಸಿರು ಕ್ರಾಂತಿಯಲ್ಲಿ ಮಹತ್ತರ ಪಾತ್ರವಹಿಸಿದ್ದ ಹೆಚ್ಚು ಇಳುವರಿ ನೀಡುವ ಗಿಡ್ಡ ಗೋದಿ ತಳಿಗಳು, ಭತ್ತದ ತಳಿಗಳು, ರಾಸಾಯನಿಕ ಗೊಬ್ಬರಗಳು ಹಾಗೂ ನೀರಾವರಿ ಬಳಕೆ ಮತ್ತು ಕೃಷಿ ಯಂತ್ರೋಪಕರಣ ಬಳಕೆಯಿಂದಾಗಿ ಆಹಾರ ಕೊರತೆ ನೀಗಿಸಲು ಸಹಾಯಕಾರಿಯಾಯಿತು ಎಂದರು.

ಚಿನ್ನದ ಪದಕ ವಿಜೇತರ ಕಿರು ಪರಿಚಯ

ಸುಮ .ಕೆ, ರವರು ಸ್ನಾತಕ ಪದವಿ ಬಿ.ಎಸ್ಸಿ(ಕೃಷಿ)ಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಏಳು ಚಿನ್ನದ ಪದಕಗಳು ಮತ್ತು ಐದು ದಾನಿಗಳ ಚಿನ್ನದ ಪದಕಗಳ ಪ್ರಮಾಣಪತ್ರಗಳಿಗೆ ಭಾಜನರಾಗಿದ್ದಾರೆ.

ಇವರ ತಂದೆ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಕ್ಷೇತ್ರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಒಬ್ಬರು ಅಕ್ಕ ಮತ್ತು ತಂಗಿ ಇದ್ದಾರೆ. ತಂಗಿಯೂ ಸಹ ಬಿ.ಎಸ್ಸಿ(ಕೃಷಿ ಮಾರುಕಟ್ಟೆ ಮತ್ತು ಸಹಕಾರ)ದಲ್ಲಿ ಸ್ನಾತಕ ಪದವಿಯಲ್ಲಿ ಮುಂದುವರೆಸುತ್ತಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಪ್ರಸ್ತುತ ಇವರು ಅನುವಂಶಿಯತೆ ಮತ್ತು ಸಸ್ಯ ತಳಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್ಸಿ (ಕೃಷಿ) ಮಾಡುತ್ತಿದ್ದಾರೆ. ರೈತರಿಗೆ ಉಪಯೋಗವಾಗುವಂತಹ ಹೆಚ್ಚಿನ ಇಳುವರಿ ಮತ್ತು ಪೀಡೆಗಳಿಗೆ ಸಹಿಷ್ಣತೆ ಹೊಂದಿರುವ ತಳಿಗಳನ್ನು ಹೊರತರುವುದು ಇವರ ಆಶಯವಾಗಿದೆ. ಇವರು ರೇಷ್ಮೆ ಮಹಾವಿದ್ಯಾಲಯ, ಚಿಂತಾಮಣಿ, ಚಿಕ್ಕಬಳ್ಳಾಪುರ ಬಿ.ಎಸ್ಸಿ(ಕೃಷಿ) ಪದವಿಯನ್ನು ಪಡೆದಿರುತ್ತಾರೆ.

ಶೋಭ .ಕೆ.ಎ. ರವರು ಮಾಸ್ಟರ್ ಪದವಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ. ಎಂ. ಎಸ್ಸಿ (ಕೃಷಿ ಅರ್ಥಶಾಸ್ತ್ರ)ದಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ. ಇವರ ತಂದೆ ರೈತರಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೆಪಲ್ಲಿ ತಾಲ್ಲೂಕಿನ ಕಾಮಗಾನಪಲ್ಲಿಯ ಗ್ರಾಮದವರು. ಇವರ ಅಣ್ಣ ಇಂಜಿನಿಯರಿಂಗ್ ಪದವಿಧರ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿದ್ದು ಅವುಗಳಿಗೆ ಸೂಕ್ತವಾದಂತಹ ಬೆಳೆ ಪದ್ದತಿಗಳನ್ನು ಅಧ್ಯಾಯನ ಮಾಡಿ ಇಸ್ರೇಲ್ ಕೃಷಿ ಆಧಾರಿತ ಕಡಿಮೆ ಖರ್ಚಿನ ತಂತ್ರಜ್ಞಾನಗಳನ್ನು ಗುರುತಿಸಿ ರೈತರಿಗೆ ತಲುಪಿಸುವುದು ಇವರ ಜೀವನದ ಗುರಿ.

ಚಿತ್ರ .ಡಿ, ರವರು ಡಾಕ್ಟರ್ ಆಫ್ ಫಿಲಾಸೊಫಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ. ಕೃಷಿ ವಿಸ್ತರಣೆಯಲ್ಲಿ ನಾಲ್ಕು ಚಿನ್ನದ ಪದಕಗಳು ಮತ್ತು ಒಂದು ದಾನಿಗಳ ಚಿನ್ನದ ಪದಕ ಪ್ರಮಾಣಪತ್ರವನ್ನು ಗಳಿಸಿದ್ದಾರೆ.

ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿರುವ ಡಾ.ಬಿ. ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪಡೆದಿದ್ದಾರೆ. ಇವರು ಬೆಂಗಳೂರು (ಗ್ರಾಮಾಂತರ) ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದವರು. ಇವರ ತಂದೆ ಕೃಷಿಕರಾಗಿರುತ್ತಾರೆ. ಇವರ ಅಣ್ಣ ಇಂಜಿನಿಯರಿಂಗ್ ಪದವಿಧರ. ಇವರು ರೈತ ಸಮಸ್ಯೆ ಆಧಾರಿತ ಹೆಚ್ಚಿನ ಸಂಶೋಧನೆ ಕೈಗೊಂಡು, ಸಮಸ್ಯೆ ಆಧಾರಿತ ಪರಿಹಾರವನ್ನು ನೀಡುವುದು ಇವರ ಮುಖ್ಯ ಉದ್ದೇಶವಾಗಿದೆ. ರೈತರು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಾವು ಮುಂದುವರೆಯುವುದರ ಜೊತೆಗೆ ದೇಶದ ಅಭಿವೃದ್ಧಿಗೆ ನಾಂದಿಯಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Award of PG Gold medals and prizes to the graduates of UAS Bengaluru. 3 recieve their gold medals at the convocation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more