ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ದಿನ ಅದೃಶ್ಯರಾಗುವ 'ಮಾಲಿನಿ'ಯರಿಗೆ ಸಿಹಿಸುದ್ದಿ!

ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕೊಳ್ಳಲಾಗದ ಬಡ ಹೆಣ್ಣು ಮಕ್ಕಳಿಗಾಗಿ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿ, ಇದೀಗ ಸ್ಯಾಪ್ಕಿನ್ಸ್ ಅನ್ನು ಪರಿಚಯಿಸಲಾಗಿದೆ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಾಲಿನಿ ಎಂಬ ಮಹಿಳೆ ಇದ್ದಕ್ಕಿದ್ದಂತೆಯೇ, ತಾನು ಸಾಮಾಜಿಕ ಜಾಲತಾಣಗಳಿಂದ ಐದು ದಿನಗಳ ಕಾಲ ಅದೃಶ್ಯವಾಗುವುದಾಗಿ ಹೇಳಿ, #GiveHer5 ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿ ಆಫ್ ಲೈನ್ ಆದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಮಾಲಿನಿ ಅವರನ್ನು ಬೆಂಬಲಿಸಿ ಮತ್ತಷ್ಟು ಮಹಿಳೆಯರು ತಾವೂ 5 ದಿನ ಅಜ್ಞಾತರಾಗುವುದಾಗಿ, #GiveHer5 ನಲ್ಲಿ ಘೋಷಿಸಿದರು. ಇವರ ವರ್ತನೆಯ ಹಿಂದಿನ ಅಸಲಿ ಕಾರಣ ಜಗತ್ತಿಗೆ ತಿಳಿಯುವುದಕ್ಕೆ ಕೆಲ ಗಂಟೆಗಳೇ ಹಿಡಿಯಿತು... ಏನು ಆ ಕಾರಣ..?

ಆ 5 ದಿನಗಳು ಬಹುಪಾಲು ಮಹಿಳೆಯರ ಪಾಲಿಗೆ ಅಜ್ಞಾತವಾಸದ ದಿನಗಳೇ! ಆ ಕಿರಿಕಿರಿ, ಖಿನ್ನತೆ, ನೋವಿನ ನಡುವೆಯೂ ಹೆಣ್ತನವನ್ನು ನೆನಪಿಸಿ ಸಾರ್ಥಕತೆ ಮೂಡಿಸುವ ದಿನಗಳವು. ಪ್ರತಿ ಹೆಣ್ಣೂ ಋತುಮತಿಯಾಗುವುದು ಪ್ರಕೃತಿಯ ಸಹಜ ಪ್ರಕ್ರಿಯೆ. ಆದರೆ ಋತುಮತಿಯಾಗುವ ಹಲವು ಹೆಣ್ಣುಮಕ್ಕಳಿಗೆ ಋತುಸ್ರಾವದ ಆ ಐದು ದಿನವನ್ನು ಕಳೆಯುವುದಂದ್ರೆ ಪ್ರತಿ ತಿಂಗಳೂ ನರಕ ದರ್ಶನ ಮಾಡಿದಂತೆಯೇ ಸರಿ![ಸ್ಯಾನಿಟರಿ ನ್ಯಾಪ್ ಕಿನ್ ತೆರಿಗೆ ಮುಕ್ತವಾಗಲಿ: ಸಂಸದೆ ಸುಷ್ಮಿತಾ ದೇವ್]

ಇದನ್ನೆಲ್ಲ ಮನಗಂಡ ಅಶೋಕ್ ಕುರೈನ್ ನೇತೃತ್ವದ ಅಮ್ಮಡ ಟ್ರಸ್ಟ್ ಎಂಬ ಎನ್ ಜಿ ಒ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಗಳಲ್ಲಿರುವ ಮಹಿಳೆಯರನ್ನು ಸೇರಿಸಿಕೊಂಡು ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿ, ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕೊಳ್ಳಲಾಗದ ಬಡ ಹೆಣ್ಣು ಮಕ್ಕಳಿಗಾಗಿ ಸ್ಯಾಪ್ಕಿನ್ಸ್ ಅನ್ನು ಪರಿಚಯಿಸಿದೆ!

ಏನಿದು ಸ್ಯಾಪ್ಕಿನ್ಸ್?

ಇದು ಋತುಸ್ರಾವದ ಸಮಯದಲ್ಲಿ ಬಳಸುವ ನ್ಯಾಪ್ಕಿನ್. ಇದರ ವಿಶೇಷತೆ ಅಂದ್ರೆ ಇದನ್ನು ಪದೇ ಪದೇ ಉಪಯೋಗಿಸಬಹುದು, ಇದನ್ನು ತೊಳೆಯಲೂ ಬಹುದು. ಇದು ಯಾವುದೇ ರೀತಿಯ ಸೋಂಕನ್ನೂ ಉಂಟು ಮಾಡುವುದಿಲ್ಲ. ಕೇವಲ 150 ರೂ. ಯಿಂದ ಆರಂಭವಾಗುವ ಇದರ ಬೆಲೆ 6000 ರೂ. ವರೆಗೂ ಇದೆ. ಅವರವರ ಅನುಕೂಲಕ್ಕೆ ಅನುಗುಣವಾಗಿ ಸ್ಯಾಪ್ಕಿನ್ ಗಳನ್ನು ಕೊಳ್ಳಬಹುದು. [ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

ಆ ಐದು ದಿನಶಾಲೆಗೂ ಗೈರು!

ಋತುಸ್ರಾವದ ಸಮಯದಲ್ಲಿ ಸರಿಯಾದ ಸ್ಯಾನಿಟರಿ ನ್ಯಾಪ್ಕಿನ್ಸ್ ಬಳಸದ, ಅಥವಾ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕೊಳ್ಳಲು ಹಣವಿಲ್ಲದ ಅಸಂಖ್ಯ ಹೆಣ್ಣು ಮಕ್ಕಳು ಭಾರತದಾದ್ಯಂತ ಕಾಣಸಿಗುತ್ತಾರೆ. ಅಮ್ಮಡ ಟ್ರಸ್ಟ್ ಹೇಳುವ ಪ್ರಕಾರ ಭಾರತದಲ್ಲಿ ಶೇ.80 ರಷ್ಟು ಮಹಿಳೆಯರಿಗೆ ಸರಿಯಾದ ನ್ಯಾಪ್ಕಿನ್ ಸಿಗುತ್ತಿಲ್ಲ! ಅಷ್ಟೇ ಅಲ್ಲ, ಶೇ.80 ರಷ್ಟು ಹೆಣ್ಣು ಮಕ್ಕಳು ಋತುಸ್ರಾವದ 5 ದಿಗಳ ಕಾಲ ಶಾಲೆಗೆ ಹೋಗುವುದಕ್ಕೂ ಆಗದ ಸ್ಥಿತಿಯಲ್ಲಿರುತ್ತಾರೆ! [ಶಬರಿಮಲೈ ದರ್ಶನಕ್ಕೆ ಮಹಿಳೆಯರಿಗೆ ಕೇರಳ ಸರ್ಕಾರ ಅನುಮತಿ]

ಆ ಐದು ದಿನವನ್ನೂ ಖುಷಿಯಾಗಿಡಲು ಸ್ಯಾಪ್ಕಿನ್

ಸೋಂಕು ರೋಗಗಳು, ಗುಪ್ತ ರೋಗಗಳಿಂದ ಪಾರಾಗುವುದಕ್ಕೆ ಕಡ್ಡಾಯವಾಗಿ ಸ್ಯಾನಿಟರಿ ನ್ಯಾಪ್ಕಿನ್ ಬಳಸಲು ಹಲವು ಜಾಗೃತಿ ಕಾರ್ಯಕ್ರಮ ಕೈಗೊಂಡರೂ ಇಂದಿಗೂ ಹಳ್ಳಿಗಳಲ್ಲಿ, ಬಡತನ ಇರುವಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಯಾಗುತ್ತಿಲ್ಲ. ಕೇವಲ ಋತುಮತಿ ಎಂಬ ಕಾರಣವೇ ಹೆಣ್ಣು ಮಕ್ಕಳ ಓದನ್ನು, ಅವರ ಸಂತಸವನ್ನು ಕಿತ್ತುಕೊಳ್ಳಬಾರದು ಎಂಬ ಕಾರಣಕ್ಕೆ ಸ್ಯಾಪ್ಕಿನ್ ಅನ್ನು ಪರಿಚಯಿಸಲಾಗಿದೆ. [ಅತಿ ಮೇಕಪ್‌ ಮಾಡುವವರು ಬೇಗ ಮುದುಕಿಯಾಗ್ತಾರೆ]

ಸೆಲೆಬ್ರಿಟಿ ಸಹಕಾರ

#GiveHer5 ಅಭಿಯಾನಕ್ಕೆ ಬಾಲಿವುಡ್ ನಟರಾದ ಅರ್ಜುನ್ ಕಪೂರ್, ವರುಣ್ ಧವನ್, ದಿಯಾ ಮಿರ್ಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ. ಹೆಣ್ಣು ಮಕ್ಕಳ ಆ ಐದು ದಿನಗಳನ್ನು ಹಸನುಗೊಳಿಸಲು ಅವರೆಲ್ಲ ಸಿದ್ಧರಾಗಿದ್ದಾರೆ. [ಶಬರಿಮಲೆ ಮಹಿಳೆಯರ ಪ್ರವೇಶ ನಿಷಿದ್ಧ ಪ್ರಶ್ನಿಸಿದ್ದ ವಕೀಲರಿಗೆ ರಕ್ಷಣೆ]

ನೀವೂ ಕೈಜೋಡಿಸಿ

ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಅವರಿಗೆ ಸ್ಯಾಪ್ಕಿನ್ ಒದಗಿಸುವ ಈ ಕಾರ್ಯದೊಂದಿಗೆ ನೀವೂ ಕೈಜೋಡಿಸಬಹುದು. #GiveHer5 ಹ್ಯಾಶ್ ಟ್ಯಾಗ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಬಡ ಹೆಣ್ಣು ಮಕ್ಕಳಿಗೆ ನಿಮ್ಮ ಕೈಲಾದ ಸಹಾಯ ಮಾಡುವ ಮನಸ್ಸಿದ್ದರೆ www.giveher5.org ನಲ್ಲಿ ಹಣವನ್ನು ದೇಣಿಗೆ ನೀಡಬಹುದು. [ಮುಂಬೈ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ]
ಸ್ಯಾಪ್ಕಿನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ಇಲ್ಲಿ ಕ್ಲಿಕ್ ಮಾಡಿ

English summary
Did you know that 80 percent of India's girls cannot afford sanitary protection? 1 in 5 adolescent girl students drop out of school due to inaccessibility of menstrual protection? A group of NGOs in India are trying to change the trend. With as little as Rs 12 per month, one girl can have access to safe, hygienic, sanitised menstrual protection. #GiveHer5 is creating waves on social media with celebrities, businessmen, common citizens alike contributing to keeping our girl children in schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X