• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರೀತಿಸಿ ಮದುವೆಯಾದವಳು ಲ್ಯಾಪ್‌ಟಾಪ್ ನೋಡಿ ಗಂಡನಿಗೆ ವಿಚ್ಛೇದನ ಕೊಡ್ತವ್ರೆ !

|

ಬೆಂಗಳೂರು, ಜನವರಿ 16: ಪ್ರೀತಿಸಿದ ಹುಡುಗನನ್ನು ಮದುವೆಯಾದರೆ ಜೀವನ ಚೆನ್ನಾಗಿರುತ್ತೆ ! ಹುಡುಗನ ಬಗ್ಗೆ ಮೊದಲೇ ಗೊತ್ತಿರುತ್ತದೆ. ವರದಕ್ಷಿಣೆ ಕಾಟ ಇರಲ್ಲ ಎಂದು ಎಷ್ಟೋ ಹುಡುಗಿಯರು ಪ್ರೀತಿಸಿ ಮದುವೆಯಾಗಲು ಇಷ್ಟ ಪಡುತ್ತಾರೆ. ಹೀಗೆ ಇಷ್ಟ ಪಡುವ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಮೋಸ ಮಾಡುವ ಕಿರಾತಕ ಹುಡುಗರು ಇರುತ್ತಾರೆ.

ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳ ಬದುಕು ಬೀದಿಗೆ ಬಿದ್ದಿದೆ. ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಗಂಡನ ಲ್ಯಾಪ್‌ಟಾಪ್ ನೋಡಿದ ಮೇಲೆ ಆತನ ಅಸಲಿ ಮುಖವಾಡ ಬಯಲಿಗೆ ಬಂದಿದೆ. ಇದರಿಂದ ಕಂಗೆಟ್ಟ ಆ ವಿವಾಹಿತೆ ಗಂಡನಿಗೆ ವಿಚ್ಛೇಧನ ಕೊಡಲಿಕ್ಕೆ ಮುಂದಾಗಿದ್ದಾಳೆ. ಒಳ್ಳೆ ಹುಡುಗ ಎಂದು ಪ್ರೀತಿಸಿದವಳು ಗಂಡನ ಲ್ಯಾಪ್‌ಟಾಪ್ ನೋಡಿ ಕುಸಿದು ಬಿದ್ದಿದ್ದಾಳೆ !

ಪರಸ್ಪರ ಪ್ರೀತಿ

ಪರಸ್ಪರ ಪ್ರೀತಿ

ಆಕೆ ಹೆಸರು ಸಂಜನಾ. ( ಹೆಸರು ಬದಲಿಸಲಾಗಿದೆ) ಉತ್ತರ ಭಾರತ ಮೂಲದವಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಫ್ಟ್‌ ವೇರ್ ಎಂಜಜಿನಿಯರ್ ಪರಿಚಯವಾಗಿದ್ದ. ತುಂಬಾ ಒಳ್ಳೆ ಹುಡುಗನಂತೆ ಕಾಣುತ್ತಿದ್ದ. ಇಬ್ಬರೂ ಪರಸ್ಪರ ಪ್ರೀತಿಸಿದರು. ಎರಡು ವರ್ಷದ ಹಿಂದೆಯೇ ಒಪ್ಪಿ ಮದುವೆ ಆಗಿದ್ದರು. ಆದರೆ ಯಾವತ್ತೂ ತನ್ನ ಗಂಡನ ಬಗ್ಗೆ ಉತ್ತರ ಭಾರತ ಮೂಲದ ಯುವತಿ ಅನುಮಾನ ಪಟ್ಟಿರಲಿಲ್ಲ. ಯಾವಾಗಲೂ ಗಂಡ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದ. ಗಂಡ ಯಾವಾಗಲೂ ಚಾಟ್ ಮಾಡುತ್ತಿದ್ದ, ಕೆಲವೊಮ್ಮೆ ರಾತ್ರಿ ವೇಳೆ ಮನೆ ಬಿಟ್ಟು ಹೋಗುತ್ತಿದ್ದ ಬಗ್ಗೆ ಪತ್ನಿಗೆ ಅನುಮಾನ ಮೂಡಿತ್ತು.

ಅನುಮಾನ

ಅನುಮಾನ

ಗಂಡನ ನಡವಳಿಕೆ ಬಗ್ಗೆ ಅನುಮಾನಗೊಂಡ ಪತ್ನಿ ತನ್ನ ಗಂಡ ಹೊರಗೆ ಹೋಗಿದ್ದಾಗ ಸಹೋದರನನ್ನು ಕರೆಸಿ ತನ್ನ ಅನುಮಾನ ಬಗ್ಗೆ ಹೇಳಿಕೊಂಡಿದ್ದರು. ಮಹಿಳೆ ಇಚ್ಛೆಯಂತೆ ಸಹೋದರ ಲ್ಯಾಪ್‌ಟಾಪ್ ತೆಗೆದು ನೋಡಿದಾಗ ಗಂಡನ ದಶಾವತಾರ ಭಂಗಿಯ ಚಿತ್ರಗಳು ಕಂಡಿವೆ. ಬೆತ್ತಲೆಯಾಗಿ ತೆಗೆಸಿದ್ದ ಮಾಡಲ್ ಪೋಟೋಗಳು, ವಿಡಿಯೋಗಳು ಸಿಕ್ಕಿವೆ. ನೂರಾರು ಬೆತ್ತಲೆ ಪೋಟೋಗಳು ಹಾಗೂ ಇತರೆ ಮಹಿಳೆಯರ ಜತೆ ತೆಗೆಸಿರುವ ಚಿತ್ರಗಳನ್ನು ನೋಡಿ ಮೂರ್ಛೆ ಹೋಗಿದ್ದಾಳೆ. ನೂರಾರು ಮಹಿಳೆಯರಿಗೆ ಪತಿರಾಯ ನಗ್ನ ಪೋಟೋಗಳನ್ನು ಕಳಿಸಿರುವುದು ಪತ್ತೆಯಾಗಿದೆ.

ಕಾಲ್ ಬಾಯ್

ಕಾಲ್ ಬಾಯ್

ಗಂಡನ ಕೆಲಸದ ಬಗ್ಗೆ ಮತ್ತಷ್ಟ ಕೆಣಕಿದಾಗ ಪ್ರೀತಿಸಿ ಮದುವೆಯಾಗಿದ್ದು ಗಂಡ ಕಾಲ್‌ ಬಾಯ್ ಎಂದು ಗೊತ್ತಾಗಿದೆ. ಯಾರಾದರೂ ಅತೃಪ್ತ ಮಹಿಳೆಯರು ಒಂದು ರಾತ್ರಿಗೆ ಇಂತಿಷ್ಟು ಹಣ ಕೊಟ್ಟು ಕಾಲ್ ಗರ್ಲ್ ಮಾದರಿಯಲ್ಲೇ ಕಾಲ್ ಬಾಯ್ ನನ್ನು ಕರೆಸಿಕೊಳ್ಳುತ್ತಾರೆ. ಅದೇ ರೀತಿ ಕಾಲ್ ಬಾಯ್ ಗಂಡ ಕೂಡ ಒಂದು ರಾತ್ರಿಗೆ ಮೂರು ಸಾವಿರ ದಿಂದ ಐದು ಸಾವಿರ ರೂ. ಪಡೆಯುತ್ತಿದ್ದ. ಹಲವಾರು ವರ್ಷದಿಂದ ಕಾಲ್ ಬಾಯ್ ಅನೇಕ ಮಹಿಳೆಯರ ಸಂಪರ್ಕ ಬೆಳೆಸಿದ್ದ ಗಂಡನ ಕೆಲಸ ನೋಡಿ ಪತ್ನಿ ಕಂಗಾಲಾಗಿದ್ದಾಳೆ. ಈ ಬಗ್ಗೆ ಕೇಳಿದಾಗ ಅತನೂ ತಾನು ಕಾಲ್ ಬಾಯ್ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಪ್ರೀತಿಸಿ ಮದುವೆಯಾದ ಹುಡುಗ ಕಾಲ್ ಬಾಯ್ ಎಂದು ಗೊತ್ತಾದ ಕೂಡಲೇ ಉತ್ತರ ಭಾರತ ಮಹಿಳೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

ವಿಚ್ಛೇಧನಕ್ಕೆ ತಯಾರಿ

ವಿಚ್ಛೇಧನಕ್ಕೆ ತಯಾರಿ

ಸಾಫ್ಟ್ ವೇರ್ ಇಂಜಿನಿಯರ್ ಎಂದು ನಂಬಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ಕಾಲ್ ಬಾಯ್ ಆಗಿ ಅನೇಕ ಮಹಿಳೆಯರ ಜತೆ ಸಂಪರ್ಕ ಬೆಳೆಸಿದ್ದಾನೆ. ಇವನಿಂದ ನನಗೆ ವಿಚ್ಛೇಧನ ಕೊಡಿಸಿ ಎಂದು ನೊಂದ ಮಹಿಳೆ ವನಿತಾ ಸಹಾಯವಾಣಿಗೆ ದೂರು ನೀಡಿದ್ದಾಳೆ. ವನಿತಾ ಸಹಾಯವಾಣಿ ಸಿಬ್ಬಂದಿ ಕಾಲ್ ಬಾಯ್ ಗಂಡನನ್ನು ಕರೆಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಜತೆ ಇರುವುದಾಗಿ ಹೇಳಿದ್ದಾನೆ. ಆದರೆ ಗಂಡನ ನೀಚ ಕೆಲಸ ನೋಡಿ ವಿಚ್ಛೇಧನ ಪಡೆದು ದೂರವಾಗಲು ಉತ್ತರ ಭಾರತ ಮೂಲದ ವಿವಾಹಿತ ಮಹಿಳೆ ನಿರ್ಧರಿಸಿದ್ದಾರೆ ಎಂದು ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

  ಕೋವಿಶೀಲ್ಡ್ ಲಸಿಕೆ ಪಡೆದ ಸೇರಮ್‌ ಇನ್ಸ್‌ಟಿಟ್ಯೂಟ್‌ CEO ಅದರ್‌ Poonawala | Oneindia Kannada
  ಕಾಲ್ ಬಾಯ್ ಸರ್ವೀಸ್

  ಕಾಲ್ ಬಾಯ್ ಸರ್ವೀಸ್

  ವೇಶ್ಯಾವಾಟಿಕೆಯ ಇನ್ನೊಂದು ಭಾಗವಾಗಿ ಕಾಲ್ ಗರ್ಲ್ ಸರ್ವೀಸ್ ಹುಟ್ಟುಕೊಂಡಿತ್ತು. ಇದೇ ರೀತಿ ಕಾಲ್ ಬಾಯ್ ಸರ್ವೀಸ್ ಕೂಡ ಹುಟ್ಟಿಕೊಂಡಿದೆ. ಕಾಲ್ ಗರ್ಲ್ ಮಾದರಿಯಲ್ಲಿಯೇ ಕಟು ಮಸ್ತು ಹುಡುಗರನ್ನು ಗಂಟೆಗಳ ಆಧಾರದ ಮೇಲೆ ಕೆಲವರು ಕರೆಸಿಕೊಳ್ಳುತ್ತಾರೆ. ದಿನಕ್ಕೆ ಮೂರ ರಿಂದ ಐದು ಸಾವಿರ ಹಣ ಕೂಡ ಪಾವತಿ ಮಾಡುತ್ತಾರೆ. ಹಣ ಪಡೆದು ಲೈಂಗಿಕ ತೃಪ್ತಿ ನೀಡುವ ಕಾಲ್ ಬಾಯ್ ಸರ್ವೀಸ್ ಗೆ ಬಾರೀ ಬೇಡಿಕೆ ಇದೆ. ಖಾಸಗಿ ಕಂಪನಿಯ ಕೆಲಸ ಬಿಟ್ಟು ಸಾಫ್ಟ್ ವೇರ್ ಇಂಜಿನಿಯರ್ ಕೂಡ ಇದೇ ಕೆಲಸದಲ್ಲಿ ನಿರತನಾಗಿದ್ದು, ಮುಗ್ಧ ಹೆಣ್ಣು ಮಗಳು ಈತನನ್ನು ಮದುವೆಯಾಗಿ ಮೋಸ ಹೋಗಿದ್ದಾಳೆ.

  English summary
  Woman divorces Husband after seeing his laptop in Bengaluru. Know more. Laptop revels lover husband call boy service!
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X